ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ವಿಡಿಯೋದಲ್ಲಿರುವ ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಯ ತಂದೆಯಿಂದ ಕಿಡ್ನಾಪ್ ಕೇಸ್ ದಾಖಲು - ಯುವತಿಯ ತಂದೆಯಿಂದ ಕಿಡ್ನಾಪ್ ದೂರು
19:38 March 16
ಪ್ರಕರಣಕ್ಕೆ ಟ್ವಿಸ್ಟ್
ನನ್ನ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಅವರು ದೂರು ದಾಖಲಿಸಿದ್ದಾರೆ. ಐಪಿಸಿ 363, 368, 343, 346, 354,506 ಸೆಕ್ಷನ್ ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ಹಾಸ್ಟೆಲ್ನಲ್ಲಿದ್ದಾಗ ನನ್ನ ಪುತ್ರಿಯನ್ನು ಅಪಹರಿಸಿದ್ದಾರೆ. ಆಕೆಯನ್ನು ಹೆದರಿಸಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಅಶ್ಲೀಲ ಸಿಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಜಾರಕಿಹೊಳಿ ಸಿಡಿ ಪ್ರಕರಣ.. ನೋಟಿಸ್ ನೀಡಿದ್ದರೂ ವಿಚಾರಣೆಗೆ ಶಂಕಿತನ ಪತ್ನಿ ಗೈರು.. ಯಾಕಂದ್ರೇ,
ಇದನ್ನೂ ಓದಿ: ಸಿಡಿ ಪ್ರಕರಣ ಒಂದೇ ಆದರೂ 2 ಆಯಾಮದ ತನಿಖೆ.. ಯುವತಿ ಹೇಳಿಕೆ ಸುಳ್ಳು ಎಂದಾದ್ರೆ ಎಫ್ಐಆರ್..