ಕರ್ನಾಟಕ

karnataka

ETV Bharat / city

ನೀವು ಮಾಧ್ಯಮದವರು ಇಲ್ಲದ್ದನ್ನ ಸೃಷ್ಟಿ ಮಾಡಲು ಎಕ್ಸ್‌ಪರ್ಟ್‌.. ಹೀಗಂದರು ಸಿ ಟಿ ರವಿ - ಬೆಳಗಾವಿ ಜನಸೇವಕ್ ಸಮಾರೋಪ ಸಮಾರಂಭ

ದಿ.ಕೇಂದ್ರ ಸಚಿವ ಸುರೇಶ ಅಂಗಡಿಯವರ ಅಕಾಲಿಕ ನಿಧನ ಹಿನ್ನೆಲೆ ಲೋಕಸಭೆ ಉಪಚುನಾವಣೆ ಸೇರಿ ಇತರ ಚುನಾವಣೆಗಳಿಗೂ ಬಿಜೆಪಿ ಪಕ್ಷ ಸರ್ವ ಸನ್ನದ್ಧ ರೀತಿಯಲ್ಲಿದೆ. ಈ ಸಮಾವೇಶವನ್ನು ಚುನಾವಣೆ ಪೂರ್ವ ತಯಾರಿ ಎನ್ನಬಹುದು, ಇಲ್ಲವೇ ಜನ ಸೇವಕ ಸಮಾವೇಶದ ಸಮಾರೋಪ ಸಮಾರಂಭ ಅಂತಾನಾದ್ರೂ ಕರೆಯಬಹುದು..

jana-sevaka-program-closing-ceremony-in-presence-of-amit-shah
ಜನ ಸೇವಕ ಸಮಾವೇಶ

By

Published : Jan 17, 2021, 4:20 PM IST

ಬೆಳಗಾವಿ :ರಾಜ್ಯದಲ್ಲಿ ಚುನಾವಣೆ ಮತ್ತು ಉಪ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಆದ್ರೆ, ಬಿಜೆಪಿ ಎಲ್ಲ ರೀತಿಯಿಂದಲೂ ಸರ್ವ ಸನ್ನದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.

ಅಮಿತ್​ ಶಾ ನೇತೃತ್ವದಲ್ಲಿ ಜನ ಸೇವಕ ಸಮಾವೇಶ ಸಮಾರೋಪ ಸಮಾರಂಭ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಹೆಚ್ಚಿನ‌ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನೆಲೆ ಜನವರಿ 11, 12, 13 ಮೂರು ದಿನಗಳ ಕಾಲ ಆರು ತಂಡಗಳಿಂದ ರಾಜ್ಯದಾದ್ಯಂತ ಜನ ಸೇವಕ ಸಮಾವೇಶ ನಡೆಸಲಾಗಿತ್ತು. ಇದೀಗ ಸಮಾರೋಪ ಸಮಾರಂಭ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದೆ ಎಂದರು.

ರಾಜ್ಯದಲ್ಲಿ ಚುನಾವಣೆ ಮತ್ತು ಉಪ ಚುನಾವಣೆ ಯಾವಾಗ ಬೇಕಾದ್ರೂ ಬರಬಹುದು. ಹೀಗಾಗಿ ದಿ.ಕೇಂದ್ರ ಸಚಿವ ಸುರೇಶ ಅಂಗಡಿಯವರ ಅಕಾಲಿಕ ನಿಧನ ಹಿನ್ನೆಲೆ ಲೋಕಸಭೆ ಉಪಚುನಾವಣೆ ಸೇರಿದಂತೆ ಇತರ ಚುನಾವಣೆಗಳಿಗೂ ಬಿಜೆಪಿ ಪಕ್ಷ ಸರ್ವ ಸನ್ನದ್ಧ ರೀತಿಯಲ್ಲಿದೆ. ಈ ಸಮಾವೇಶವನ್ನು ಚುನಾವಣೆ ಪೂರ್ವ ತಯಾರಿ ಎನ್ನಬಹುದು, ಇಲ್ಲವೇ ಜನ ಸೇವಕ ಸಮಾವೇಶದ ಸಮಾರೋಪ ಸಮಾರಂಭ ಅಂತಾನಾದ್ರೂ ಕರೆಯಬಹುದು ಎಂದರು.

ಓದಿ-ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ರಚನೆ: ಡಿ.ಕೆ. ಶಿವಕುಮಾರ್ ವಿಶ್ವಾಸ

‌ಸಿಎಂ ಹೊರಗಿಟ್ಟು ಅಮಿತ್ ಶಾ ಸಭೆ ವಿಚಾರಕ್ಕೆ, ಮಾಧ್ಯಮದವ್ರು ಸೃಷ್ಟಿ ಮಾಡಲು ಎಕ್ಸ್‌ಪರ್ಟ್. ಅಧಿಕೃತ ಸಭೆಗಳು ಮುಗಿದ ನಂತರ ಅಮಿತ್ ಶಾ ಅನೌಪಚಾರಿಕವಾಗಿ ಕಾಫಿ ಕುಡಿಯುತ್ತಾ ನಮ್ಮೊಂದಿಗೆ ಮಾತುಕತೆ ನಡೆಸಿದ್ದಾರೆ. ಯಾವುದೇ ಸಭೆ ಮಾಡಿಲ್ಲ ಎಂದು‌ ಸ್ಪಷ್ಟಪಡಿಸಿದರು.

ಸಿಎಂ ಬದಲಾವಣೆ ಮಾಧ್ಯಮ ಸೃಷ್ಟಿ :ಸಿಎಂ ಬದಲಾವಣೆ ವಿಚಾರಕ್ಕೆ ನಿಮ್ಮ ಮನಸ್ಸಿಗೆ ಬಂದ್ದಂಗೆ ಕಲ್ಪನೆ ಮಾಡಿಕೊಂಡ್ರೆ ಅದು ಹೇಗೆ?. ಅದಕ್ಕೆ ನಾನೇನು ಹೇಳಲಿ. ಬಿಜೆಪಿ ಸರ್ಕಾರ ಈಗಲೂ ಇರುತ್ತೆ, ಮುಂದೆನೂ ಇರುತ್ತೆ ಎಂಬ ಮಾತನ್ನು ಶಾ ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಬಿಎಸ್​​ವೈ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದೆ. ನಮ್ಮ ಶಾಸಕಾಂಗ ಪಕ್ಷದ ನಾಯಕರಿದ್ದಾರೆ. ಅವರ ಕಾರ್ಯಕ್ಕೆ ಗೃಹ ಸಚಿವ ಅಮಿತ್ ಶಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ, ನಾಯಕ ಬದಲಾವಣೆ ವಿಷಯ ಮಾಧ್ಯಮಗಳ ಸೃಷ್ಟಿ ಎಂದರು.

ತುಂಬಾ ಜನಟಿಕೆಟ್‌ ಆಕಾಂಕ್ಷಿಗಳು :ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಕೇಂದ್ರದ ಪಾರ್ಲಿಮೆಂಟ್ ಬೋರ್ಡ್ ನಿರ್ಣಯ ತೆಗೆದುಕೊಳ್ಳುತ್ತದೆ. ಆಕಾಂಕ್ಷಿಗಳು ತುಂಬಾ ಜನರಿದ್ದಾರೆ. ಎಲ್ಲರೊಂದಿಗೆ ಸಮಾಲೋಚನೆ ಮಾಡಿ, ಇಂಟರ್ನಲ್, ಎಕ್ಸರ್ಟನಲ್ ಓಪಿನಿಯನ್ ಕ್ರೂಢೀಕರಿಸಿ ಬೆಳಗಾವಿ ಲೋಕಸಭೆ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದರು.

ABOUT THE AUTHOR

...view details