ಬೆಳಗಾವಿ:ಮಳೆಗೆ ನೆನೆದಿದ್ದ ಗೋಡೆಯೊಂದು ತಡರಾತ್ರಿ ಕುಸಿದಿದೆ. ಸುದೈವವಶಾತ್, ಒಂದೇ ಕುಟುಂಬದ ಎಂಟು ಜನರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಘಟನೆ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ನಡೆದಿದೆ. ಒಂದು ವಾರದ ಹಿಂದೆಯಷ್ಟೇ ಬಡಾಲ ಅಂಕಲಗಿ ಗ್ರಾಮದಲ್ಲಿ ಗೋಡೆ ಕುಸಿತು ಏಳು ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದರು.
ಬೆಳಗಾವಿಯಲ್ಲಿ ಭಾರಿ ಮಳೆಗೆ ಮತ್ತೊಂದು ಮನೆ ಕುಸಿತ; ಕೂದಲೆಳೆ ಅಂತರದಲ್ಲಿ 8 ಜನ ಬಚಾವ್! - 8 ಜನ ಅಪಾಯದಿಂದ ಪಾರು
ಬೆಳಗಾವಿ ಜಿಲ್ಲೆಯಲ್ಲಿ ಮನೆ ಕುಸಿದು 7 ಜನ ಮೃತಪಟ್ಟ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ಮನೆ ಕುಸಿದಿದೆ.
bgm
ಅಗಸಗಿ ಗ್ರಾಮದ ಕಲ್ಮೇಶ್ವರ ಗಲ್ಲಿಯಲ್ಲಿ ಬಾಳು ಕಡೋಲ್ಕರ್ ಹಾಗೂ ಬಸವಣ್ಣಿ ಕಡೋಲ್ಕರ್ ಸಹೋದರರ ಕುಟುಂಬಗಳು ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದರು. ವಾರಾಂತ್ಯದಲ್ಲಿ ಸುರಿದ ಮಳೆ ನೀರು ಕಡೋಲ್ಕರ್ ಅವರ ಮನೆಗೂ ನುಗ್ಗಿತ್ತು. ಮಳೆ ನೀರು ಹೊರ ಹಾಕಿ ಕಳೆದ ಎರಡು ದಿನಗಳಿಂದ ಕಡೋಲ್ಕರ್ ಕುಟುಂಬದ 8 ಜನ ಸದಸ್ಯರು ಅದೇ ಮನೆಯಲ್ಲಿ ವಾಸವಾಗಿದ್ದರು.
ಕಡೋಲ್ಕರ್ ಕುಟುಂಬದ ಎಂಟು ಜನ ಸದಸ್ಯರು ತಡರಾತ್ರಿ ನಿದ್ರೆಗೆ ಜಾರಿದ್ದರು. ಮಧ್ಯರಾತ್ರಿ ಛಾವಣಿ ಕಡೆಯಿಂದ ಸಪ್ಪಳವಾಗಿದೆ. ತಕ್ಷಣವೇ ಎಚ್ಚರಗೊಂಡ ಬಾಳು ಕಡೋಲ್ಕರ್ ಮೊದಲು ಮಕ್ಕಳನ್ನು ಹೊರಗೆ ಕಳಿಸಿದ್ದಾರೆ. ನಂತರ ಸಹೋದರನ ಕುಟುಂಬವನ್ನು ಎಬ್ಬಿಸಿ ಹೊರ ಕರೆತಂದಿದ್ದಾರೆ. ಈ ಕುಟುಂಬ ಹೊರ ಬಂದ ತಕ್ಷಣವೇ ಮನೆ ಸಂಪೂರ್ಣ ಕುಸಿದಿದ್ದು, ಸ್ವಲ್ಪದರಲ್ಲೇ ಎಂಟು ಜೀವಗಳು ಪ್ರಾಣಾಪಾಯದಿಂದ ಪಾರಾಗಿವೆ.
ಇಲ್ಲದಿದ್ರೆ ಒಂದೇ ವಾರದ ಅಂತರದಲ್ಲಿ ಮತ್ತೊಂದು ಕರಾಳತೆಗೆ ಗಡಿ ಜಿಲ್ಲೆ ಬೆಳಗಾವಿ ಸಾಕ್ಷಿಯಾಗುತ್ತಿತ್ತು. ಮನೆ ಕುಸಿತದಿಂದ ಜೀವನಾವಶ್ಯಕ ವಸ್ತುವಳೆಲ್ಲವೂ ಬಿದ್ದ ಮನೆಯ ಅವಶೇಷಗಳಡಿ ಸಿಲುಕಿವೆ. ಇದೀಗ ಕಡೋಲ್ಕರ್ ಕುಟುಂಬ ಬೀದಿಗೆ ಬಂದಿದೆ.
Last Updated : Oct 11, 2021, 9:46 AM IST