ಕರ್ನಾಟಕ

karnataka

ETV Bharat / city

ಅಕ್ರಮ ಆಸ್ತಿ ಗಳಿಕೆ: ಹೆಸ್ಕಾಂ ಸಿ ದರ್ಜೆ ನೌಕರ ನಾತಾಜಿ ಪಾಟೀಲ ಅಮಾನತು

ನವೆಂಬರ್ 24 ರಂದು ಎಸಿಬಿ ದಾಳಿಗೆ ಒಳಗಾಗಿದ್ದ ನಾತಾಜಿ ಪಾಟೀಲ್​ ಅವರನ್ನು​ ಅಮಾನತುಗೊಳಿಸಿ ಹೆಸ್ಕಾಂ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಆದೇಶ ಹೊರಡಿಸಿದ್ದಾರೆ.

nathaji patel
ನಾತಾಜಿ ಪಾಟೀಲ

By

Published : Dec 3, 2021, 9:45 AM IST

ಬೆಳಗಾವಿ: ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಹೆಸ್ಕಾಂ 'ಸಿ' ದರ್ಜೆ ನೌಕರ ನಾತಾಜಿ ಪಾಟೀಲರನ್ನು ಸೇವೆಯಿಂದ ಅಮಾನತು ಮಾಡಿ ಹೆಸ್ಕಾಂ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಆದೇಶಿಸಿದ್ದಾರೆ.

ನವೆಂಬರ್ 24 ರಂದು ನಾತಾಜಿ ಪಾಟೀಲ್ ಮನೆ ಮೇಲೆ ಎಸಿಬಿ ತಂಡ ದಾಳಿ ಮಾಡಿತ್ತು. ಈ ವೇಳೆ ಮನೆಯಲ್ಲಿ ಆದಾಯಕ್ಕೂ ಮಿತಿ ಮೀರಿ ಆಸ್ತಿ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ, ತನಿಖೆ ನಡೆಸುತ್ತಿದೆ. ಪ್ರಕರಣ ತನಿಖೆಯ ಹಂತದಲ್ಲಿ ಇರುವುದರಿಂದ ಸಾಕ್ಷ್ಯನಾಶಪಡಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಕೋರಿಕೆ ಮೇರೆಗೆ ನಾತಾಜಿ ಪಾಟೀಲ್ ಅಮಾನತು ಮಾಡಲಾಗಿದೆ.

ಇದನ್ನೂ ಓದಿ:ಅಕ್ರಮ ಆಸ್ತಿ ಗಳಿಕೆ ಆರೋಪ: ಬೆಳಗಾವಿ, ಚಿಕ್ಕಬಳ್ಳಾಪುರದಲ್ಲಿ ಎಸಿಬಿ ದಾಳಿ

ಹೆಸ್ಕಾಂನಲ್ಲಿ ಲೈನ್ ಮೆಕ್ಯಾನಿಕ್ ದರ್ಜೆ -2 ಹುದ್ದೆಯಲ್ಲಿ ನಾತಾಜಿ ಕಾರ್ಯ ನಿರ್ವಹಿಸುತ್ತಿದ್ದರು. ಎಸಿಬಿ ದಾಳಿ ವೇಳೆ ಇವರ ಮನೆಯಲ್ಲಿ 1 ಕೋಟಿ 82 ಲಕ್ಷ ರೂ ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿತ್ತು.

ABOUT THE AUTHOR

...view details