ಚಿಕ್ಕೋಡಿ: ವಾದ್ಯ ಮೇಳ, ಕುದುರೆ ಕುಣಿತ, ಕಳಸ ಹೊತ್ತು ಊರಲ್ಲಿ ಮೆರವಣಿಗೆ ಮಾಡುವ ಮೂಲಕ ಗಣಪನನ್ನು ಪ್ರತಿಷ್ಠಾಪಿಸಿದ್ದು ವಿಶೇಷವಾಗಿತ್ತು.
ಬೆಳಗಾವಿಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ವಿಜೃಂಭಣೆಯಿಂದ ಗಣಪತಿಯನ್ನು ಊರು ಸುತ್ತ ಪ್ರದಕ್ಷಣೆ ಹಾಕಿಸಿ ವಾದ್ಯಮೇಳಗಳೊಂದಿಗೆ ಗಣೇಶನನ್ನು ಪಾಟೀಲ ತೋಟದಲ್ಲಿ ಗಣೇಶ ಮಂಡಳಿಯಿಂದ ಪ್ರತಿಷ್ಠಾಪಿಸಲಾಯಿತು.
ವಾದ್ಯ-ಮೇಳಗಳೊಂದಿಗೆ ಲಂಬೋದರನ ಪ್ರತಿಷ್ಠಾಪನೆ...
ವಾದ್ಯ ಮೇಳ, ಕುದುರೆ ಕುಣಿತ, ಕಳಸ ಹೊತ್ತು ಊರಲ್ಲಿ ಮೆರವಣಿಗೆ ಮೂಲಕ ಬೆಳಗಾವಿಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಗಣಪನನ್ನು ಪ್ರತಿಷ್ಠಾಪಿಸಲಾಯಿತು.
Gowri-ganesh Festival celebration in chikkodi
ಈ ಮಂಡಳಿ 25 ವರ್ಷಗಳಿಂದ ಬಹಳ ಅದ್ಧೂರಿಯಾಗಿ ಗಣೇಶನ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಈ ಪಾಟೀಲ ತೋಟದಲ್ಲಿ ಐದು ದಿನಗಳ ಕಾಲ ಗಣಪತಿಯನ್ನು ಇರಿಸಲಾಗುತ್ತದೆ.
ಅಚ್ಚರಿ ಸಂಗತಿ ಏನೆಂದರೆ ಇಲ್ಲಿ ಕೂರಿಸುವ ಗಣೇಶನಲ್ಲಿ ಏನೇ ಬೇಡಿಕೊಂಡರೂ ಅದೇಲ್ಲವನ್ನೂ ಈಡೇರಿಸಲಿದೆ. ಅದಕ್ಕೆ ಹಲವು ನಿದರ್ಶನಗಳೂ ಕಾಣಬಹುದು. ಇಲ್ಲಿಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಬರುತ್ತಾರೆ.