ಬೆಳಗಾವಿ: ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಜನವರಿ 9 ರಿಂದ 19ರ ವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಜನವರಿ 9ರಂದು ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ಕನಕಪುರ ತಾಲೂಕಿನ ಮೇಕೆದಾಟುವಿನ ಇಂದ ಆರಂಭವಾಗುವ ಪಾದಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಎಲ್ಲಾ ರಾಜ್ಯ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಈ ಪಾದಯಾತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಸಂಘಟನೆಗಳು ಹಾಗೂ ಸಾರ್ವಜನಿಕರು ಸಹ ಪಾಲ್ಗೊಳ್ಳಬಹುದು ಎಂದು ತಿಳಿಸಲಾಗಿದೆ.
ಜನವರಿ 9ರಂದು ಆರಂಭಗೊಳ್ಳುವ ಪಾದಯಾತ್ರೆ ಐದನೇ ದಿನ ಬೆಂಗಳೂರು ನಗರ ತಲುಪಲಿದೆ. ಸರಿ ಸುಮಾರು 100 ಕಿಲೋಮೀಟರ್ ವ್ಯಾಪ್ತಿಯನ್ನು ಯಾತ್ರೆ ಮೂಲಕ ಕ್ರಮಿಸುವ ಕಾಂಗ್ರೆಸ್ ನಾಯಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಯೋಜನೆಯನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಒತ್ತಾಯಿಸಲಿದ್ದಾರೆ. ಕೊನೆಯ ರೈಲ್ವೆ ದಿನಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಯಲಿದೆ.
ಒಟ್ಟು 10 ಜಿಲ್ಲೆಗಳ 2.5 ಕೋಟಿಗೂ ಹೆಚ್ಚು ಮಂದಿಯ ಅನುಕೂಲಕ್ಕೆ ಒದಗಿಬರುವ ಯೋಜನೆಯನ್ನು ಬಿಜೆಪಿ ಸರ್ಕಾರ ತೀವ್ರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿಯಲ್ಲಿ ಪಾದಯಾತ್ರೆಯ ಸಂಪೂರ್ಣ ವಿವರ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಒಟ್ಟು 169 ಕಿಲೋ ಮೀಟರ್ ಪಾದಯಾತ್ರೆ ಮಾಡುತ್ತಿದ್ದೇವೆ. ಕನಕಪುರದಿಂದ ಬೆಂಗಳೂರುವರೆಗೂ ಪಾದಯಾತ್ರೆ ನಡೆಯಲಿದೆ. ಮೇಕೆದಾಟು ಯೋಜನೆಯಿಂದ ಎರಡು ರಾಜ್ಯಗಳಿಗೆ ಅನುಕೂಲವಾಗಲಿದೆ.
ಕುಡಿಯುವ ನೀರಿನ ಯೋಜನೆಗೆ ಯಾವ ಅನುಮತಿ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜನವರಿ 9 ರಿಂದ 19 ವರೆಗೂ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುತ್ತೇವೆ. ಪಕ್ಷಾತೀತವಾಗಿ ಪಾದಯಾತ್ರೆ ಆಯೋಜನೆ ಮಾಡಿದ್ದೇವೆ. ಎಲ್ಲರಿಗೂ ನಾವು ಆಹ್ವಾನ ನೀಡುತ್ತಿದ್ದೇವೆ. ರಾಜ್ಯದ ಹಿತಕ್ಕಾಗಿ ನಾವು ಪಾದಯಾತ್ರೆ ಮಾಡುತ್ತೇವೆ ಎಂದು ವಿವರಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, 9500 ಕೋಟಿ ಮೇಕೆದಾಟು ಯೋಜನೆಗೆ ಅಂದಾಜು ತಯಾರಿಸಲಾಗಿತ್ತು. ಹಿಂದಿನ ಮೈತ್ರಿ ಸರ್ಕಾರದಲ್ಲಿ ಈ ಯೋಜನೆ ಅಂತಿಮ ಮಾಡಲಾಗಿತ್ತು. ಇಡೀ ಬೆಂಗಳೂರು ನಗರ - ಸುತ್ತುಮುತ್ತ ಇರುವ ಹಳ್ಳಿಗಳಿಗೆ ಕುಡಿಯುವ ನೀರು ಸಿಗುತ್ತಿದೆ. ಇಡೀ ಬೆಂಗಳೂರಿಗೆ ನೀರು ಸಿಗಬೇಕಾದ್ರೆ ಈ ಯೋಜನೆ ಆಗಲೇಬೇಕು.
ರಾಜಕೀಯ ಕಾರಣಕ್ಕಾಗಿ ತಮಿಳುನಾಡು ವಿರೋಧ ಮಾಡ್ತಿದೆ. ನಾವು ಇದ್ದಾಗಲೇ ಡಿಪಿಎಆರ್ ಮಾಡಲಾಗಿತ್ತು. ಸುಪ್ರೀಂಕೋರ್ಟ್ ನಲ್ಲಿ ಈಗಾಗಲೇ ಇತ್ಯರ್ಥ ಮಾಡಲಾಗಿದೆ. ನಮ್ದು ಡಬಲ್ ಇಂಜಿನ್ ಸರ್ಕಾರ ಅನ್ನುವರು ಯೋಜನೆ ಪ್ರಾರಂಭ ಮಾಡಬೇಕಿತ್ತು. ನಮ್ಮ ಸರ್ಕಾರ ಇದ್ದಿದ್ರೆ ಯೋಜನೆ ಪ್ರಾರಂಭ ಮಾಡುತ್ತಿದ್ದೆವು.
ಜನವರಿ 9 ರಿಂದ ಹತ್ತು ದಿನಗಳ ಕಾಲ ಪಾದಯಾತ್ರೆ ಮಾಡುತ್ತಿದ್ದೇವೆ. ರಾಜ್ಯದ 10 ಜಿಲ್ಲೆಯ ಜನರ ಹಿತದೃಷ್ಟಿಯಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ಯೋಜನೆ ಜಾರಿಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
ಮೇಕೆದಾಟು ಕನಕಪುರ ತಾಲೂಕಿನಲ್ಲಿದೆ. 1968ರಲ್ಲಿ ಈ ಯೋಜನೆ ಪ್ರಸ್ತಾವನೆ ಇದೆ. ಕಾಂಗ್ರೆಸ್ ಸರ್ಕಾರದ ಮುಂದೆ ಇದು ಇತ್ತು. ಕೋರ್ಟ್ನಲ್ಲಿ ಇದ್ದ ಕಾರಣ ಯೋಜನೆ ಪ್ರಾರಂಭ ಆಗಲಿಲ್ಲ. ನಮ್ಮ ಸರ್ಕಾರ ಬಂದಾಗ ಡಿಪಿಆರ್ ತಯಾರು ಮಾಡಿದ್ದೇವು. ಆಗ ಐದು ಸಾವಿರ ಕೋಟಿಯಷ್ಟು ಇದಕ್ಕೆ ಖರ್ಚಾಗುತ್ತಿತ್ತು. ಈಗ ಒಬ್ಬತ್ತು ಸಾವಿರ ಕೋಟಿಗೆ ಹೋಗಿದೆ. ಸುಮಾರು 60 ಟಿಎಂಸಿ ನೀರು ಸಮುದ್ರದ ಪಾಲಾಗುತ್ತೆ.
ಇದನ್ನು ಕುಡಿಯುವ ನೀರಿಗೆ ಬಳಸಿಕೊಳ್ಳತ್ತೇವೆ. ಬೆಂಗಳೂರಿನಲ್ಲಿ ಶೇ.30ರಷ್ಟು ಕಾವೇರಿ ನೀರು ಸಿಗುತ್ತಿಲ್ಲ. ಎಲ್ಲರಿಗೂ ಕಾವೇರಿ ನೀರು ಸಿಗಬೇಕು. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಕ್ಕೂ ನೀರು ಸಿಗುತ್ತೆ. ನಮಗಿಂತ ತಮಿಳುನಾಡಿಗೆ ಇದು ಹೆಚ್ಚು ಅನುಕೂಲ. 177.25 ಟಿಎಂಸಿ ತಮಿಳುನಾಡಿಗೆ ನೀರು ಕೊಡಬೇಕು. ಮಳೆ ಕಡಿಮೇಯಾದಗ ನೀರು ಕಡಿಮೆಕೊಡಬೇಕು.
ಸುಮ್ಮನೆ ತಮಿಳುನಾಡು ಕ್ಯಾತೆ ತೆಗೆಯುತ್ತೆ. ಸುಪ್ರೀಂ ಕೋರ್ಟ್ ಆದೇಶ ಮಾಡಿ ಬಿಟ್ಟಿದೆ. ರಾಜಕೀಯ ಕಾರಣಕ್ಕೆ ವಿರೋಧ ಮಾಡ್ತಾ ಇದ್ದಾರೆ. ಹಸಿರು ಪೀಠ ಅರ್ಜಿ ತೆಗದುಕೊಂಡಿದೆ. ಯಾವುದೇ ಅಡತಡೆ ಇಲ್ಲದೆ ಇದ್ರು ಯೋಜನೆ ಪ್ರಾರಂಭ ಮಾಡಿಲ್ಲ. ಡಬಲ್ ಇಂಜಿನ್ ಸರ್ಕಾರ ಅಂತಾರೆ,ಆದ್ರೂ ಪ್ರಾರಂಭ ಮಾಡಿಲ್ಲ.
ಈ ಯೋಜನೆ ಮಾಡಿದ್ರೆ ಬೇರೆ ಡ್ಯಾಮ್ ಗಳ ಒತ್ತಡ ಕಡಿಮೆಯಾಗುತ್ತೆ. ಕರೆಂಟ್ ಮಡಿಕೊಂಡು ಬಿಟ್ಟ ನೀರು ತಮಿಳುನಾಡಿಗೆ ಹೊಗುತ್ತೆ. ಅನಗತ್ಯವಾಗಿ ರಾಜ್ಯ ಸರ್ಕಾರ ವಿಳಂಭ ಮಾಡುತ್ತಿದೆ. ನಾವು ಆಗಿದ್ರೆ ಇಷ್ಟೊತ್ತಿಗೆ ಮುಗಿಸಿ ಬಿಡುತಿದ್ವಿ ಎಂದರು.