ಕರ್ನಾಟಕ

karnataka

ETV Bharat / city

ಬೆಳಗಾವಿ ಬೈ ಎಲೆಕ್ಷನ್‌ ಮುಂದೂಡಿಕೆಗೆ ಲಿಂಗಾಯತ ಹೋರಾಟ ವೇದಿಕೆ ಆಗ್ರಹ

ಕೊರೊನಾ ಕಾರಣದಿಂದಾಗಿ ಎಲ್ಲರಿಗೂ ಮುಕ್ತ ಅವಕಾಶ ಸಿಗಲ್ಲ. ಹೀಗಾಗಿ, ಈ ಎಲ್ಲ ಕಾರಣಗಳಿಂದ ಬೆಳಗಾವಿ ಉಪಚುನಾವಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದರು..

appeal
ಮನವಿ

By

Published : Mar 22, 2021, 7:45 PM IST

ಬೆಳಗಾವಿ :ಏಪ್ರಿಲ್‌ 17ರಂದು ನಿಗದಿ ಆಗಿರುವ ಬೆಳಗಾವಿ ಲೋಕಸಭೆ ಉಪಚುನಾವಣೆಯನ್ನು ಮುಂದೂಡಬೇಕೆಂದು ಒತ್ತಾಯಿಸಿ ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ನೂತನ ಡಿಸಿ ಆಗಿ ನೇಮಕಗೊಂಡ ಡಾ.ಕೆ.ಹರೀಶ್‌ಕುಮಾರ್ ಅವರಿಗೆ ಮನವಿ ಮಾಡಿಕೊಂಡ ಲಿಂಗಾಯತ ಹೋರಾಟ ವೇದಿಕೆ ‌ಮುಖಂಡರು, ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ರೂಪಾಂತರಿ ಕೊರೊನಾ ವೈರಸ್ ಹೆಚ್ಚಳವಾಗುತ್ತಿದೆ.

ಹೀಗಾಗಿ, ಮಹಾರಾಷ್ಟ್ರದಲ್ಲಿ ಕೆಲವು ಕಡೆ ನೈಟ್ ಕರ್ಫ್ಯೂ, ಸೇರಿ ನಾಗಪೂರದಲ್ಲಿ ಲಾಕ್ಡೌನ್ ಜಾರಿ ಮಾಡಿದ್ದಾರೆ. ಬೆಳಗಾವಿ ಗಡಿ ಪ್ರದೇಶ ಆಗಿದ್ದರಿಂದ ಪಕ್ಕದ ಮಹಾರಾಷ್ಟ್ರದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಜಿಲ್ಲೆಗೆ ಆಗಮಿಸುತ್ತಾರೆ.

ಇದರ ಜೊತೆಗೆ ಉಪಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳಿಂದ ಬೃಹತ್ ಪ್ರಮಾಣದಲ್ಲಿ ರಾಜಕೀಯ ಸಮಾವೇಶಗಳು ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಮತ್ತಷ್ಟು ಹೆಚ್ಚಳವಾಗಲಿದೆ.

ಕೊರೊನಾ ಕಾರಣದಿಂದಾಗಿ ಎಲ್ಲರಿಗೂ ಮುಕ್ತ ಅವಕಾಶ ಸಿಗಲ್ಲ. ಹೀಗಾಗಿ, ಈ ಎಲ್ಲ ಕಾರಣಗಳಿಂದ ಬೆಳಗಾವಿ ಉಪಚುನಾವಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದರು.

ಇದೆ ವೇಳೆ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಕ ಬಿ ಎಂ ಚಿಕ್ಕನಗೌಡರ, ಹಸಿರು ಸೇನೆ ರೈತ ಸಂಘ ಕಾರ್ಯದರ್ಶಿ ಪ್ರಕಾಶ ನಾಯಕ್, ನ್ಯಾಯವಾದಿ ಎಂ ಟಿ ಪಾಟೀಲ ಇದ್ದರು.

ABOUT THE AUTHOR

...view details