ಅಥಣಿ:ರಾಜ್ಯದಲ್ಲಿ ಕೊರೊನಾದಿಂದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಕೆಲವರು ಸುಖಾಸುಮ್ಮನೆ ಸಿಎಂ ಬದಲಾವಣೆ ಚರ್ಚೆ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವ ವಿಷಯವಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಹಲ್ಯಾಳ ಗ್ರಾಮದಲ್ಲಿ ಅಥಣಿ ತಾಲೂಕಿನ ಪೂರ್ವಭಾಗದ ಕರಿಮಸೂತಿ ಏತ ನೀರಾವರಿ ಕಾಲುವೆಗಳಿಗೆ ಈ ವರ್ಷದ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು. ರಾಜ್ಯ ಕೊರೊನಾ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಜನರ ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವರು ಸುಖಾಸುಮ್ಮನೆ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸುವುದು ಶೋಭೆ ತರುವ ವಿಚಾರವಲ್ಲ.