ಕರ್ನಾಟಕ

karnataka

ETV Bharat / city

ಬೆಳಗಾವಿಯಲ್ಲಿ ಅದ್ಧೂರಿ ರಥೋತ್ಸವ: ಸಾವಿರಾರು ಜನ ಭಾಗಿ, ಮಾಸ್ಕ್, ಅಂತರ ಪಾಲಿಸದೇ ನಿರ್ಲಕ್ಷ್ಯ

ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿಯಾಗಿ ರಥೋತ್ಸವ ನಡೆಸಿರುವ ಘಟನೆ ಬೆಳಗಾವಿಯ ಇಂಚಲ ಗ್ರಾಮದಲ್ಲಿ ನಡೆದಿದೆ. ಸಾವಿರಾರು ಜನ ರಥೋತ್ಸವದಲ್ಲಿ ಭಾಗಿಯಾಗಿದ್ದು, ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.

Covid rules violation in chariot festival
ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ರಥೋತ್ಸವ

By

Published : Jan 3, 2022, 2:30 PM IST

ಬೆಳಗಾವಿ:ಒಮಿಕ್ರಾನ್ ಹಾಗೂ ಕೋವಿಡ್​​ ಆತಂಕದ ನಡುವೆಯೇ ಗಡಿ ಜಿಲ್ಲೆ ಬೆಳಗಾವಿ ಜನರು ಕೊರೊನಾ 3ನೇ ಅಲೆಗೆ ಆಹ್ವಾನ ನೀಡುತ್ತಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ.

ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ರಥೋತ್ಸವ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಸಾವಿರಾರು ಭಕ್ತರು ಸೇರಿ ಅದ್ಧೂರಿ ರಥೋತ್ಸವ ನಡೆಸಿದ್ದಾರೆ. ಇಂಚಲ ಮಠದ ಪರಮಪೂಜ್ಯ ಡಾ.ಶಿವಾನಂದ ಭಾರತಿ ಮಹಾ ಸ್ವಾಮೀಜಿ 82ನೇ ಜನ್ಮದಿನ ಹಾಗೂ ಇಂಚಲ ಮಠದ 52ನೇ ವೇದಾಂತ ಪರಿಷತ್ ಕಾರ್ಯಕ್ರಮ ನಿಮಿತ್ತ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು.

ರಥೋತ್ಸವದಲ್ಲಿ ಸಾಮಾಜಿಕ ಅಂತರ ಮರೆತು, ಸಹಸ್ರಾರು ಭಕ್ತರು ಭಾಗಿಯಾಗಿದ್ದರು. ಅಲ್ಲದೇ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಆ್ಯಂಬುಲೆನ್ಸ್​ಗೂ ದಾರಿ ಕೊಡದೇ‌ ಸಂಭ್ರಮದಲ್ಲಿ ತೆಲಿದ ಪಾದಯಾತ್ರಿಗಳು! ವಿಡಿಯೋ

For All Latest Updates

TAGGED:

ABOUT THE AUTHOR

...view details