ಅಥಣಿ(ಬೆಳಗಾವಿ):ಭಾರತದಲ್ಲಿ ಇರುವ ಮುಸ್ಲಿಂರು ಮೂಲತಃ ಹಿಂದೂಗಳೇ ಆಗಿದ್ದಾರೆ. ಅವರ ಡಿಎನ್ಎ ಪರಿಕ್ಷೆ ಮಾಡಿದರೆ ಅವರು ಹಿಂದೂಗಳೆಂದು ಗೊತ್ತಾಗುತ್ತೆ. ಇಲ್ಲಿರುವ ಯಾವುದೇ ಮುಸ್ಲಿಂರು ಅರಬ್ ರಾಷ್ಟ್ರದಿಂದ ಬಂದಿಲ್ಲ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಮವಾರ ತಾಲೂಕಿನ ಸತ್ತಿ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿರುವ ಮುಸ್ಲಿಂರು ಮೂಲತಃ ಹಿಂದೂಗಳೇ: ಚೈತ್ರಾ ಕುಂದಾಪುರ - ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ ಸುದ್ದಿ
ಭಾರತದಲ್ಲಿ ಇರುವ ಮುಸ್ಲಿಂರು ಮೂಲತಃ ಹಿಂದೂಗಳೇ ಎಂದು ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಇರಲಿ, ಕಾಂಗ್ರೆಸ್ ಸರ್ಕಾರ ಅಥವಾ ಜೆಡಿಎಸ್ ಸರ್ಕಾರ ಸೇರಿದಂತೆ ಯಾವುದೇ ಸರ್ಕಾರ ಇದ್ದರೂ ಹಿಂದೂ ಸಂಘಟನೆಗಳು ಹಿಂದೂ ಪರವಾಗಿಯೇ ಹೋರಾಟ ಮಾಡಿದ್ದೇವೆ. ಸರ್ಕಾರ ಆಗಲಿ, ರಾಜಕೀಯ ನಾಯಕರಾಗಲಿ ನಮಗೆ ಮುಖ್ಯವಲ್ಲ. ನಮಗೆ ಹಿಂದೂ ರಾಷ್ಟ್ರ ಮುಖ್ಯವೆಂದು ತಿಳಿಸಿದರು. ಶಸ್ತ್ರ ಯಾವಾಗ ಬಳಸಬೇಕು, ಶಾಸ್ತ್ರ ಯಾವಾಗ ಬಳಸಬೇಕು ಎಂದು ಹಿಂದೂ ಧರ್ಮ ಹೇಳಿಕೊಟ್ಟಿದೆ. ಆತ್ಮ ರಕ್ಷಣೆಗಾಗಿ ಹಾಗೂ ಗೋವು ಕಳ್ಳತನ ತಡೆಯಲು ನಾವು ಶಸ್ತ್ರ ಬಳಸುತ್ತೇವೆ. ಯಾವುದೇ ಪ್ರಾಣ ರಕ್ಷಣೆಗಾಗಿ ಶಸ್ತ್ರ ಬಳಕೆ ಅಪರಾಧ ಅಲ್ಲವೆಂದು ಚೈತ್ರಾ ಅಭಿಪ್ರಾಯಪಟ್ಟರು.
ಓದಿ:ಶಿವಪೂಜೆ ಮಾಡಲು ಬಿಡದಿರುವುದು ಧಾರ್ಮಿಕ ಸ್ವಾತಂತ್ರ್ಯದ ಹರಣ: ಚೈತ್ರಾ ಕುಂದಾಪುರ