ಬೆಳಗಾವಿ: ನಗರದ ಮಜಗಾವಿ ಪ್ರದೇಶದಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಬಾಗ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತಾಲೂಕಿನ ಮಜಗಾವಿಯ ಅಂಬೇಡ್ಕರ್ ಗಲ್ಲಿಯ ಸಂದೀಪ ಕೋಲಕಾರ್ (32), ಕುಮಾರ, ಸಂತೋಷ ರಾಜಂಗಳಿ (19), ಪ್ರದೀಪ ಕೋಲಕಾರ್ (24), ಕಲ್ಲೇಶ್ವರ ನಗರದ ರವಿ ಗಂಗಪ್ಪಾ ಗುಳ್ಳೆದಕೊಪ್ಪ (25), ಶಿವಕುಮಾರ ಮಾನೆ (22) ಬಂಧಿತರು.
ಘಟನೆಯ ಹಿನ್ನೆಲೆ: ಮಹಿಳೆಯನ್ನು ಚುಡಾಯಿಸುತ್ತಿದ್ದ ಎನ್ನುವ ಕಾರಣಕ್ಕೆ ಮಜಗಾವಿ ಪ್ರದೇಶದಲ್ಲಿ ಜೂ.30ರಂದು ಅಂಬೇಡ್ಕರ್ ಗಲ್ಲಿಯ ಯಲ್ಲೇಶಪ್ಪ ಶಿವಾಜಿ ಕೋಲಕಾರ್ (37) ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಯಲ್ಲೇಶ್ ಕೋಲಕಾರ್ ಅವರ ಸಹೋದರಿ ಸವಿತಾ ಮೇತ್ರಿ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.