ಕರ್ನಾಟಕ

karnataka

ETV Bharat / city

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಕತ್ತಿ-ಸವದಿ ಬಣದ ಮೇಲುಗೈ.. ಜಾರಕಿಹೊಳಿ‌ ಬ್ರದರ್ಸ್​​ಗೆ ಮುಖಭಂಗ - ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ‌ ಬ್ರದರ್ಸ್ ಗೆ ಮುಖಭಂಗ

ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರಿಗೆ ಮುಖಭಂಗವಾಗಿದ್ದು, ಲಕ್ಷ್ಮಣ ಸವದಿ-ಉಮೇಶ್ ಕತ್ತಿ ಬಣದ ಅಭ್ಯರ್ಥಿ ಜಯಭೇರಿ ಭಾರಿಸಿದ್ದಾರೆ.

belagavi-dcc-bank-election-abashment-for-jarakiholi-brothers
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಕತ್ತಿ-ಸವದಿ ಬಣದ ಅಭ್ಯರ್ಥಿ ಜಯಭೇರಿ.. ಜಾರಕಿಹೊಳಿ‌ ಬ್ರದರ್ಸ್​​ಗೆ ಮುಖಭಂಗ!

By

Published : Mar 26, 2022, 5:52 PM IST

ಬೆಳಗಾವಿ: ಜಾರಕಿಹೊಳಿ ಸಹೋದರರಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಮುಖಭಂಗವಾಗವಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ-ಉಮೇಶ್ ಕತ್ತಿ ಬಣದ ಅಭ್ಯರ್ಥಿ ಜಯಭೇರಿ ಭಾರಿಸಿದ್ದಾರೆ. ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಆಪ್ತ ಸಂಜು ಅವಕ್ಕನವರ ಗೆಲುವು ದಾಖಲಿಸಿದ್ದಾರೆ. ಅಥಣಿಯ ಸಂಜು ಅವಕ್ಕನವರ ಲಕ್ಷ್ಮಣ ಸವದಿ ಬಣದಿಂದ ಕಣಕ್ಕಿಳಿದಿದ್ದರು.

10 ಮತಗಳ ಪೈಕಿ ಸಂಜು ಅವಕ್ಕನವರ ಅವರು 6 ಮತಗಳನ್ನು ಪಡೆದು ಗೆಲುವು ತಮ್ಮದಾಗಿಸಿಕೊಂಡರು. ಈ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್​​ಗೆ ತೀವ್ರ ಮುಖಭಂಗವಾಗಿದೆ. ಜಾರಕಿಹೊಳಿ‌ ಸಹೋದರರ​​​ ಬಣದಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಫತೇಸಿಂಹ ಜಗತಾಪ್, ರವೀಂದ್ರ ಯಳಿಗಾರ ಇಬ್ಬರೂ ನಾಮಪತ್ರ ಸಲ್ಲಿಸಿದ್ದರು. 10 ಮತಗಳ ಪೈಕಿ ಫತೇಸಿಂಹ ಜಗತಾಪ್​​ 4 ಮತಗಳನ್ನು ಪಡೆದಿದ್ದಾರೆ. ಮತ್ತೋರ್ವ ಅಭ್ಯರ್ಥಿ ‌ರವೀಂದ್ರ ಯಳಿಗಾರ ಫತೇಸಿಂಹಗೆ ಮತ ಚಲಾಯಿಸಿ ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ 10 ಮತಗಳ ಪೈಕಿ ರವೀಂದ್ರ ಯಳಿಗಾರ ಶೂನ್ಯ ಮತ ಪಡೆದರು.

ಇದನ್ನೂ ಓದಿ:ನನ್ಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ನೀವ್‌ ಯಾವ್ದ್‌ ಯಾವ್ದಕ್ಕೋ ಲಿಂಕ್‌ ಮಾಡ್ಬೇಡಿ.. ಮಾಧ್ಯಮದವರ ಮೇಲೆ ಸಿದ್ದು ಗರಂ

ABOUT THE AUTHOR

...view details