ಕರ್ನಾಟಕ

karnataka

ETV Bharat / city

ನಾಲ್ವರು ಸಹೋದ್ಯೋಗಿಗಳಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ಹುಕ್ಕೇರಿ ಯೋಧ - ಬಿಎಸ್​ಎಫ್ ಯೋಧ ಆತ್ಮಹತ್ಯೆ

ಪಂಜಾಬ್‌ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿಎಸ್ಎಫ್ ಪಡೆಯ ಪ್ರಧಾನ ಕಚೇರಿಯಲ್ಲಿ ನಾಲ್ವರು ಸಹೋದ್ಯೋಗಿಗಳ ಸಾವಿಗೆ ಕಾರಣನಾದ ಯೋಧ ಬೆಳಗಾವಿ ಜಿಲ್ಲೆಯವರು ಎಂದು ತಿಳಿದು ಬಂದಿದೆ.

Belagavi based BSF Soldier kills 4 soldier
Belagavi based BSF Soldier kills 4 soldier

By

Published : Mar 7, 2022, 12:03 PM IST

Updated : Mar 7, 2022, 12:15 PM IST

ಚಿಕ್ಕೋಡಿ:ಪಂಜಾಬ್​​ನ ಅಮೃತಸರದಲ್ಲಿ ಭಾನುವಾರ ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡಿಕ್ಕಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಿಎಸ್​ಎಫ್ ಯೋಧ ಜಿಲ್ಲೆಯ ಹುಕ್ಕೇರಿ ತಾಲೂಕಿನವರು ಎಂದು ತಿಳಿದು ಬಂದಿದೆ.

ಸತ್ಯಪ್ಪ ಸಿದ್ದಪ್ಪ ಕಿಲಾರಗಿ ಹುಕ್ಕೇರಿ ತಾಲೂಕಿನ ಹಳೇ ವಂಟಮೂರಿ ಗ್ರಾಮದವರಾಗಿದ್ದಾರೆ. ಮೃತ ಯೋಧನ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಯೋಧ ಸತ್ಯಪ್ಪ ಕಳೆದ ಹಲವು ದಿನಗಳಿಂದ ಮಾನಸಿಕ ಅಸ್ತವ್ಯಸ್ತರಾಗಿದ್ದರು ಎನ್ನಲಾಗುತ್ತಿದೆ. ಅಂತೆಯೇ ಭಾನುವಾರ ಪಂಜಾಬ್‌ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿಎಸ್ಎಫ್ ಪಡೆಯ ಪ್ರಧಾನ ಕಚೇರಿಯೊಳಗೆ ತನ್ನ ಕರ್ತವ್ಯದ ಗನ್‌ನಿಂದಲೇ 4 ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆನಂತರ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

(ಇದನ್ನೂ ಓದಿ: ನಾಲ್ವರು ಸಹೋದ್ಯೋಗಿಗಳ ಕೊಂದು ತಾನೂ ಸಾವಿಗೀಡಾದ ಬಿಎಸ್​ಎಫ್ ಯೋಧ)

Last Updated : Mar 7, 2022, 12:15 PM IST

ABOUT THE AUTHOR

...view details