ಕರ್ನಾಟಕ

karnataka

ETV Bharat / city

ಸ್ವದೇಶಿ ಕೊರೊನಾ ವ್ಯಾಕ್ಸಿನ್​ ರಾಜ್ಯಕ್ಕೆ ಆಗಮಿಸಿರುವುದು ಸಂತೋಷ : ಮಹೇಶ್ ಕುಮಟಳ್ಳಿ - ಬೆಳಗಾವಿ ಲೇಟೆಸ್ಟ್​ ನ್ಯೂಸ್

ನಾನು ಈ ಹಿಂದೆ ಕೋವಿಡ್​ ಸೋಂಕಿಗೆ ತುತ್ತಾಗಿ, ಬಳಿಕ ಹುಷಾರಾದೆ. ಆದರೆ, ರಾಜ್ಯಸಭಾ ಸದಸ್ಯ ಅಶೋಕ್​ ಗಸ್ತಿ, ನಾರಾಯಣ ರಾವ್, ಸುರೇಶ್ ಅಂಗಡಿಯವರು ಕೊರೊನಾ ಸೋಂಕಿನಿಂದ ನಮ್ಮನ್ನು ಅಗಲಿದ್ದಾರೆ. ಇಂದು ಕೋವಿಡ್​ ಲಸಿಕೆ ಬಂದಿರುವುದು ಬಹಳ ಸಂತೋಷವಾಗಿದೆ..

athani-mla-mahesh-kumatalli-reaction-about-covid-vaccine
ಶಾಸಕ ಮಹೇಶ್ ಕುಮಟಳ್ಳಿ

By

Published : Jan 12, 2021, 6:00 PM IST

ಅಥಣಿ (ಬೆಳಗಾವಿ):ಸ್ವದೇಶಿ ಕೊರೊನಾ ವ್ಯಾಕ್ಸಿನ್​ ರಾಜ್ಯಕ್ಕೆ ಬಂದಿರುವುದು ತುಂಬಾ ಸಂತೋಷವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಗಲಿರುಳು ಶ್ರಮಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.

ಸ್ವದೇಶಿ ಕೊರೊನಾ ವ್ಯಾಕ್ಸಿನ್​ ರಾಜ್ಯಕ್ಕೆ ಆಗಮಿಸಿರುವುದು ಸಂತೋಷ : ಮಹೇಶ್ ಕುಮಟಳ್ಳಿ

ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಐಗಳಿ ಗ್ರಾಮದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಬಹು ದಿನಗಳಿಂದ ಕೊರೊನಾ ವ್ಯಾಕ್ಸಿನ್​ ನಿರೀಕ್ಷೆಯಲ್ಲಿದ್ದೆವು. ಇಂದು ವ್ಯಾಕ್ಸಿನ್​ ರಾಜ್ಯಕ್ಕೆ ಆಗಮಿಸಿದ್ದು, ತುಂಬಾ ಸಂತೋಷವಾಗಿದೆ.

ನಾನು ಈ ಹಿಂದೆ ಕೋವಿಡ್​ ಸೋಂಕಿಗೆ ತುತ್ತಾಗಿ, ಬಳಿಕ ಹುಷಾರಾದೆ. ಆದರೆ, ರಾಜ್ಯಸಭಾ ಸದಸ್ಯ ಅಶೋಕ್​ ಗಸ್ತಿ, ನಾರಾಯಣ ರಾವ್, ಸುರೇಶ್ ಅಂಗಡಿಯವರು ಕೊರೊನಾ ಸೋಂಕಿನಿಂದ ನಮ್ಮನ್ನು ಅಗಲಿದ್ದಾರೆ. ಇಂದು ಕೋವಿಡ್​ ಲಸಿಕೆ ಬಂದಿರುವುದು ಬಹಳ ಸಂತೋಷವಾಗಿದೆ ಎಂದರು.

ಕೆಲವರು ಸ್ವದೇಶಿ ಕೋವ್ಯಾಕ್ಸಿನ್​ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ಲಸಿಕೆ ಬಿಡುಗಡೆ ತನ್ನದೇ ಆದಂತಹ ರೂಪುರೇಷೆ ಮುಗಿಸಿಕೊಂಡು ಬಂದಿರುತ್ತೆ. ಜವಾಬ್ದಾರಿ ಸ್ಥಾನದಲ್ಲಿರುವವರು ಕೀಳು ಮಟ್ಟದ ಮಾತನ್ನು ಆಡಬಾರದು. ನಮ್ಮ ವಿಜ್ಞಾನಿಗಳ ಮೇಲೆ ಸಂಪೂರ್ಣ ನಂಬಿಕೆ ಇದೆ. ನಾನು ಮೊದಲು ಲಸಿಕೆ ಪಡೆಯುತ್ತೇನೆ ಎಂದರು.

ABOUT THE AUTHOR

...view details