ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿದ ಕತ್ತಿಗೆ 10 ಪ್ರಶ್ನೆ ಕೇಳಿದ ಕ್ರಿಯಾ ಸಮಿತಿ ಅಧ್ಯಕ್ಷ - Ashok asking 10 questions to umesh kathi
ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿದ ಶಾಸಕ ಉಮೇಶ್ ಕತ್ತಿ ಅವರಿಗೆ 10ಪ್ರಶ್ನೆ ಕೇಳಿ ಉತ್ತರಿಸುವಂತೆ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸವಾಲು ಹಾಕಿದ್ದಾರೆ.
ashok-asking-10-questions-to-umesh-kathi
ಚಿಕ್ಕೋಡಿ:ಶಾಸಕ ಉಮೇಶ ಕತ್ತಿ ಏನು ಹೇಳಲು ಹೊರಟಿದ್ದಾರೆ? ಅವರಿಗೆ ಬೇಕಾಗಿದ್ದು, ಉತ್ತರ ಕರ್ನಾಟಕವೋ ಅಥವಾ ರಾಜ್ಯ ಪುನರ್ ವಿಂಗಡಣೆಯೋ? ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸಾಮಾಜಿಕ ಜಾಲತಾಣದಲ್ಲಿ ಕತ್ತಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ದಯವಿಟ್ಟು ಉತ್ತರಿಸಿರಿ. ಸಾಧ್ಯವಾಗದಿದ್ದರೆ ಅನವಶ್ಯಕ ಹೇಳಿಕೆಗಳನ್ನು ನೀಡಬೇಡಿ ಎಂದೂ ಕೋರಿದ್ದಾರೆ.
- ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು ಒತ್ತಾಯಿಸಿದ್ದೀರಿ, 1956 ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾದಂತೆ ಈಗ ಮತ್ತೊಮ್ಮೆ ಬಯಸುತ್ತೀರಾ?
- ಭಾಷಾವಾರು ಪ್ರಾಂತಗಳ ರಚನೆಗಾಗಿ ನ್ಯಾಯಮೂರ್ತಿ ಫಜಲ್ ಅಲಿ ಆಯೋಗದಂತೆ ಮತ್ತೊಂದನ್ನು ರಚಿಸಲು ಕೇಂದ್ರಕ್ಕೆ ಒತ್ತಾಯಿಸಲು ಸಿದ್ದರಿದ್ದೀರಾ?
- ಕರ್ನಾಟಕದ ಬೆಳಗಾವಿ ಹಾಗೂ ಇತರ 864 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸುಪ್ರೀಂಕೋರ್ಟ್ನಲ್ಲಿ ಮಹಾರಾಷ್ಟ್ರ ಮೊಕದ್ದಮೆ ದಾಖಲಿದೆ. 1956ನೇ ಎಸ್ಆರ್ಸಿ ಕಾನೂನನ್ನು ಪ್ರಶ್ನಿಸಿದೆ. ಈ ಬಗ್ಗೆ ನಿಮ್ಮ ನಿಲುವೇನು?
- ಪ್ರತ್ಯೇಕ ರಾಜ್ಯವಾಗಬೇಕೆಂಬ ತಮ್ಮ ನಿಲುವನ್ನು ಬೆಂಬಲಿಸಲು ಕನಿಷ್ಠ ಹತ್ತು ಶಾಸಕರಾದರೂ ತಮ್ಮೊಂದಿಗೆ ಇದ್ದಾರೆಯೆ?
- ನೀವು ಮತ್ತು ಹತ್ತು ಶಾಸಕರು ಪ್ರತ್ಯೇಕ ರಾಜ್ಯ ಬೆಂಬಲಿಸಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ. ಇದರ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸಲು ಸಿದ್ದರಿದ್ದೀರಾ?
- ಪ್ರತ್ಯೇಕ ರಾಜ್ಯವಾದರೆ ನಮ್ಮ ಆದಾಯದ ಮೂಲದಿಂದಲೇ ರಾಜ್ಯ ನಡೆಸುವಷ್ಟು ನಾವು ಆರ್ಥಿಕವಾಗಿ ಸಶಕ್ತವಾಗಿದ್ದೇವೆಯೇ?
- ಪ್ರತ್ಯೇಕ ರಾಜ್ಯಕ್ಕೆ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೀರಾ?
- ಕಲ್ಯಾಣ ಕರ್ನಾಟಕದವರು ನಿಮ್ಮೊಂದಿಗೆ ಕೈಜೋಡಿಸಲು ಬರುತ್ತಾರಾ?
- ಎಲ್ಲಾ ಪಕ್ಷಗಳ ಶಾಸಕರು ನಿಮ್ಮನ್ನು ಬೆಂಬಲಿಸುತ್ತಾರೆಯೇ?
- ಅಧಿಕಾರ ಕೈತಪ್ಪಿದಾಗ ನೀಡುವ ಹತಾಶೆಯ ಹೇಳಿಕೆ ಎಂದು ಜನರು ಭಾವಿಸಿದರೆ ತಪ್ಪೇನು?