ಕರ್ನಾಟಕ

karnataka

ETV Bharat / city

ನೆರೆಯಿಂದ ಬೀದಿಗೆ ಬಿದ್ದ ಕುಟುಂಬಕ್ಕೆ ಮತ್ತೊಂದು ಆಘಾತ: ತೀವ್ರ ಜ್ವರಕ್ಕೆ ಮಗು ಬಲಿ - Belgaum flood relief center

ಈಗಾಗಲೇ ಪ್ರವಾಹ ಜನರ ಬದುಕನ್ನೇ ಕಿತ್ತುಕೊಂಡಿದೆ. ನೆರೆಯಿಂದ ಸಂತ್ರಸ್ತರಾಗಿರುವ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾತ್ಕಾಲಿಕ ‌ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದ ಕುಟುಂಬವೊಂದಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಕಳೆದ ‌ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ತೀವ್ರ ಜ್ವರದಿಂದ 5 ವರ್ಷದ ಮಗು ಸಾವು

By

Published : Sep 10, 2019, 10:58 AM IST

ಬೆಳಗಾವಿ: ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಜಿಲ್ಲೆಯ ಸಂತ್ರಸ್ತ ಕುಟುಂಬವೊಂದಕ್ಕೆ ಮತ್ತೊಂದು ಆಘಾತವಾಗಿದೆ. ತಾತ್ಕಾಲಿಕ ‌ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದ ಐದು ವರ್ಷದ ಬಾಲಕನೋರ್ವ ತೀವ್ರ ಜ್ವರದಿಂದ ಮೃತಪಟ್ಟಿದ್ದಾನೆ.

ರಾಮದುರ್ಗ ತಾಲೂಕಿನ‌ ಸುರೇಬಾನ್ ಗ್ರಾಮದ ಅಬ್ದುಲ್​ ಸಾಬ್ (5) ಮೃತ ಬಾಲಕ. ಕಳೆದ ‌ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ತಾತ್ಕಾಲಿಕ ‌ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದ ಐದು ವರ್ಷದ ಬಾಲಕ ಸಾವು

ಹಿರೇಹಂಪಿಹೊಳಿ ಗ್ರಾಮದ ಮೃತನ ಬಾಲಕನ ಕುಟುಂಬ ನೆರೆಯಿಂದ ಮನೆ ಕಳೆದುಕೊಂಡಿತ್ತು. ಹೀಗಾಗಿ ಸುರೇಬಾನ್ ಗ್ರಾಮದ‌ ಎಪಿಎಂಸಿ ಆವರಣದಲ್ಲಿ ‌ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಹಲವು ಕುಟುಂಬಗಳು ವಾಸವಾಗಿವೆ. ಇಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ಜನರು ಸಂಕಷ್ಟ ಎದುರಿಸುವಂತಾಗಿದೆ.

ಇನ್ನು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುರೇಬಾನ್, ಹಿರೇಹಂಪಿಹೊಳಿ, ಔರಾದಿ ನೆರೆಪೀಡಿತ ಪ್ರದೇಶಗಳಿಗೆ ಸಿಎಂ‌‌ ಭೇಟಿ ನೀಡಲಿದ್ದು, ಸಂತ್ರಸ್ತರ ಅಹವಾಲು ಸ್ವೀಕರಿಸಲಿದ್ದಾರೆ.

ABOUT THE AUTHOR

...view details