ಚಿಕ್ಕೋಡಿ: ನಗರದ ಹೊರವಲಯದಲ್ಲಿ ಚೆಕ್ ಪೋಸ್ಟ್ ಬಳಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ದಾಖಲಾತಿ ಇಲ್ಲದ 30 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಕ್ಕೋಡಿಯಲ್ಲಿ 30 ಲಕ್ಷ ಹಣ, ವಾಹನ ಪೊಲೀಸ್ ವಶಕ್ಕೆ: ಐಟಿಯಿಂದ ತನಿಖೆ - ಲೋಕಸಭೆ ಚುನಾವಣೆ 2019
ದಾಖಲೆ ಇಲ್ಲದ ಹಣ ವಶ. ಐಟಿ ಅಧಿಕಾರಿಗಳಿಂದ ತನಿಖೆ. ಯಮಕನಮರಡಿ ಸಿಂಡಿಕೇಟ್ ಬ್ಯಾಂಕಿನ ಹಣ ಎಂದು ಹೇಳಲಾಗಿದೆ. ಕಾರಿನಲ್ಲಿ ಸಾಗಿಸುವಾಗ ಚಿಕ್ಕೋಡಿ ಚೆಕ್ ಪೋಸ್ಟ್ನಲ್ಲಿ ಹಣ ವಶ ಪಡಿಸಿಕೊಂಡ ಅಧಿಕಾರಿಗಳು
30 ಲಕ್ಷ ಹಣ, ವಾಹನ ಪೊಲೀಸ್ ವಶಕ್ಕೆ
ಹುಕ್ಕೇರಿ ತಾಲೂಕಿನ ಯಮಕನಮರಡಿ ಸಿಂಡಿಕೇಟ್ ಬ್ಯಾಂಕಿನದಿಂದ ಅಥಣಿ ತಾಲೂಕಿನ ಜುಗುಳ ಗ್ರಾಮದ ಬ್ಯಾಂಕಿನ ಶಾಖೆಗೆ ಸಾಗಿಸುತ್ತಿದ್ದ ಹಣವನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿ, ಸೂಕ್ತ ದಾಖಲಾತಿಗಳಿಲ್ಲದ ಕಾರಣ ಹಣ ಮತ್ತು ವಾಹನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಬೆಳಗಾವಿಯಿಂದ ಚಿಕ್ಕೋಡಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂದು ತನಿಖೆ ಮುಂದುವರೆಸಿದ್ದಾರೆ.
Last Updated : Apr 5, 2019, 6:14 AM IST