ನವದೆಹಲಿ: ಮೆಟಾ ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಇದೀಗ ಸಮಾಜಮುಖಿ ಕಾರ್ಯಗಳಿಗೆ ಬೆಂಬಲ ಸೂಚಿಸಲು ಮುಂದಾಗುತ್ತಿದೆ. ಅದರಲ್ಲೂ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಹೊಸದಾಗಿ ಪ್ರಾರಂಭವಾಗುತ್ತಿರುವ 10 ನವೋದ್ಯಮ ಸಂಸ್ಥೆಗಳಿಗೆ ಆರ್ಥಿಕ ಸಹಾಯ ನೀಡಲು ಮುಂದಾಗಿದೆ ಎಂದು ವಾಟ್ಸ್ಆ್ಯಪ್ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿದ್ದಾರೆ.
ವಾಟ್ಸ್ಆ್ಯಪ್ ಇನ್ಕ್ಯುಬೇಟರ್ ಪ್ರೋಗ್ರಾಂ (ಡಬ್ಲ್ಯುಐಪಿ) ಈಗಾಗಲೇ ಸ್ಟಾರ್ಟ್ಅಪ್ ಸಂಸ್ಥೆಗಳ ಹೆಸರನ್ನ ಪಟ್ಟಿಮಾಡಿದೆ. 10 ಪ್ರಗತಿಪರ ಆರೋಗ್ಯ ಕೇಂದ್ರೀಕೃತ ಸಂಸ್ಥೆಗಳನ್ನು ಸ್ವಾಗತಿಸಲು ನಾವು ಸಂತಸ ಪಡುತ್ತೇವೆ. ಬಿಸಿನೆಸ್ ಪ್ಲಾಟ್ಫಾರ್ಮ್ ಅನ್ನು ಬಳಸಿಕೊಂಡು ಭಾರತದಲ್ಲಿ ಆರೋಗ್ಯ ರಕ್ಷಣೆಗಾಗಿ ಮಾರುಕಟ್ಟೆ ಒದಗಿಸಲು ವಾಟ್ಸ್ಆ್ಯಪ್ ಸಿದ್ಧವಾಗಿದೆ ಎಂದು ಅಭಿಜಿತ್ ತಿಳಿಸಿದ್ದಾರೆ.