ಹೈದರಾಬಾದ್: ವಾಹನಗಳಿಗೆ ಇನ್ಶುರೆನ್ಸ್ ಪಡೆಯುವುದು ಎಷ್ಟು ಮುಖ್ಯವೋ ಅದನ್ನು ಸಮಯಕ್ಕೆ ಸರಿಯಾಗಿ ಅಥವಾ ನಿಗದಿತ ಸಮಯದೊಳಗೆ ಪ್ರೀಮಿಯಂ ಪಾವತಿಸಿ ನವೀಕರಿಸವುದು ಕೂಡ ಅಷ್ಟೇ ಮುಖ್ಯ. ಯಾಕೆಂದರೆ ಒಂದು ವೇಳೆ ವಿಮಾ ಪಾಲಿಸಿಯ ಅವಧಿ ಮೀರಿದ ಒಂದೇ ನಿಮಿಷದ ನಂತರ ಅಪಘಾತ ಸಂಭವಿಸಿದರೂ, ವಾಹನಕ್ಕೆ ಆ ಪಾಲಿಸಿ ಕ್ಲೈಮ್ ಮಾಡಿಕೊಳ್ಳಲು ಬರುವುದಿಲ್ಲ ಎಂಬುದನ್ನು ನಾವು ನೆನಪಿಟ್ಟುಕೊಳ್ಳಿ.
ನಾಳೆ ನವೀಕರಿಸುತ್ತೇವೆ ಎಂದರೆ ಅಗಾಧ ನಷ್ಟ ಸಂಭವಿಸುವ ಪ್ರಮೇಯದಿಂದ ತಪ್ಪಿಸಿಕೊಳ್ಳಲು ದಾರಿಗಳೇ ಮುಚ್ಚಿಬಿಡುತ್ತವೆ. ವಾಹನದ ಎಲ್ಲ ಖರ್ಚನ್ನೂ ವಾಹನ ಚಾಲಕನೇ ಸ್ವತಃ ಭರಿಸುವ ಪರಿಸ್ಥಿತಿ ನಿಮ್ಮದಾಗಿರುತ್ತದೆ ಎಚ್ಚರ!
ಅದಲ್ಲದೆ, ವಿಮೆ ಇಲ್ಲದೇ ವಾಹನ ಚಲಾವಣೆ ಕಾನೂನು ರೀತಿಯಲ್ಲೂ ಅಪರಾಧ. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ರೂ 2,000 ವರೆಗೆ ದಂಡ ಮತ್ತು ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುತ್ತದೆ. ಆದ್ದರಿಂದ, ವಿಮೆ ಇಲ್ಲದೇ ವಾಹನವನ್ನು ಚಲಾಯಿಸದಿರುವುದೇ ಉತ್ತಮ. ಮತ್ತೊಂದೆಡೆ, ವಿಮಾದಾರರು ಅವಧಿ ಮೀರಿದ ಪಾಲಿಸಿಯನ್ನು ನವೀಕರಿಸಲು ಸಾಕಷ್ಟು ಷರತ್ತುಗಳನ್ನು ಹಾಕುತ್ತಾರೆ.
ಖುದ್ದಾಗಿ ವಾಹನ ತಪಾಸಣೆಗೆ ಒತ್ತಾಯಿಸುತ್ತಾರೆ. ಆಗ ವಾಹನದೊಂದಿಗೆ ವಿಮಾ ಕಂಪನಿಗೆ ಭೇಟಿ ನೀಡಬೇಕು ಅಥವಾ ನೀವಿರುವ ಸ್ಥಳಕ್ಕೆ ಅವರ ಪ್ರತಿನಿಧಿಯನ್ನು ಪರೀಕ್ಷಿಸಲು ಕಳುಹಿಸುತ್ತಾರೆ. ಇದಕ್ಕೆಲ್ಲ ನೀವು ಸಹಕರಿಸಬೇಕಾಗುತ್ತದೆ. ಜೊತೆಗೆ ಹೆಚ್ಚು ಸಮಯವನ್ನೂ ಇದು ತೆಗೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ, ವಿಮಾ ಕಂಪನಿಗಳು ವಿಡಿಯೊ ತಪಾಸಣೆಯನ್ನೂ ಸಹ ಮಾಡುತ್ತಿವೆ.
ನವೀಕರರಿಸಲು ನಿಗದಿತ ದಿನದ ವರೆಗೆ ಕಾಯುವ ಬದಲು ಶೀಘ್ರವೇ ನವೀಕರಿಸುವುದು ಉತ್ತಮ. ನೀವು ಏಜೆಂಟ್ ಮೂಲಕ ಪಾಲಿಸಿಯನ್ನು ತೆಗೆದುಕೊಂಡಿದ್ದರೆ, ಅವನನ್ನು ಅನುಸರಿಸಿ, ಫಾರ್ಮಾಲಿಟಿಗಳನ್ನು ಪೂರ್ಣಗೊಳಿಸಬೇಕು. ಒಂದು ವೇಳೆ, ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದರೆ, ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನವೀಕರಣ ಆಯ್ಕೆ ಕ್ಲಿಕ್ ಮಾಡಿ ಮತ್ತು ಪಾಲಿಸಿಯನ್ನು ವಿಸ್ತರಿಸಿ. ಅದೇ ಅಲ್ಲ ಒಂದು ವೇಳೆ ಈಗ ನೀವು ಹೊಂದಿರುವ ವಿಮಾದಾರರ ಸೇವೆಯಲ್ಲಿ ಅತೃಪ್ತರಾಗಿದ್ದರೆ, ಪಾಲಿಸಿಯನ್ನು ಹೊಸ ಕಂಪನಿಗೆ ಬದಲಾಯಿಸುವ ಅವಕಾಶವೂ ನಿಮಗಿದೆ. ಸರಿಯಾದದನ್ನು ಟಿಕ್ ಮಾಡುವ ಮೊದಲು ವಿವಿಧ ಕಂಪನಿಗಳ ಪಾಲಿಸಿ ವಿವರಗಳು ಮತ್ತು ಪ್ರೀಮಿಯಂ ದರಗಳನ್ನು ಬ್ರೌಸ್ ಮಾಡಿಕೊಳ್ಳಿ.