ನ್ಯೂಯಾರ್ಕ್: ವಾಲ್ ಸ್ಟ್ರೀಟ್ ನಲ್ಲಿ ಷೇರು ಖರೀದ ಅಬ್ಬರ ಜೋರಾಗಿತ್ತು. ಫೇಸ್‌ಬುಕ್ ಹಾಗೂ ಅದರ ಸಂಬಂಧಿ ಷೇರುಗಳು ಏರಿಕೆ ದಾಖಲಿಸಿದವು. ಅದರಲ್ಲೂ ಟೆಕ್ ಸ್ಟಾಕ್ಗಳಲ್ಲಿ ಮೇರೆ ಮೀರಿದ ಉತ್ಸಾಹ ಕಂಡುಬಂತು. ಈ ಮೂಲಕ S&P 500 ಆಗಸ್ಟ್‌ನಿಂದ ಗರಿಷ್ಠ ಮಟ್ಟವನ್ನು ಮುಟ್ಟಿದ ನಂತರ ಒಂದು ದಿನದ ಮಧ್ಯಾಹ್ನದ ವಹಿವಾಟಿನಲ್ಲಿ ಶೇ 1.5 ಏರಿಕೆ ದಾಖಲಿಸಿದೆ.
ನಾಸ್ಡಾಕ್ ಷೇರುಪೇಟೆ ಶೇ 3.1 ಏರಿಕೆ ದಾಖಲಿಸಿದೆ. ಇನ್ನೊಂದೆಡೆ ಡೌ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್ ಮಂದಗತಿಯಲ್ಲಿದೆ. ಡೌ ಜೋನ್ಸ್ ಮಾರುಕಟ್ಟೆಯಲ್ಲಿ ಟೆಕ್ ಷೇರುಗಳಿಗೆ ಅಷ್ಟೊಂದು ಒತ್ತು ನೀಡುವುದಿಲ್ಲ. ಹಾಗಾಗಿ ಇಲ್ಲಿ ಕೊಂಚ ಕುಸಿತ ಕಂಡು ಬಂದಿದೆ. ವಿಶ್ಲೇಷಕರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೆಟಾ ಕಂಪನಿ ಷೇರುಗಳ ಬೆಲೆಯಲ್ಲಿ ಶೇ 26 ರಷ್ಟು ಹೆಚ್ಚಳ ಕಂಡು ಬಂದಿದೆ. ಆದರ ಕಂಪನಿಯ ಇತ್ತೀಚನ ಲಾಭವು ನಿರೀಕ್ಷೆಗಿಂತ ಕಡಿಮೆಯಿದ್ದರೂ, ಫೇಸ್‌ಬುಕ್ ಆಡಳಿತ ಮಂಡಳಿ 40 ಶತಕೋಟಿ ಡಾಲರ್ನಷ್ಟು ಷೇರುಗಳನ್ನು ಮರಳಿ ಖರೀದಿಸುವ ಕಾರ್ಯಕ್ರಮ ಘೋಷಿಸಿದರು.
ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳ ಹೆಚ್ಚಳಕ್ಕೆ ಶೀಘ್ರ ವಿರಾಮ ನೀಡಬಹುದು ಎಂದು ಹೇಳಲಾಗುತ್ತಿದ್ದು, ಇದೇ ಭರವಸೆಯ ಮೇಲೆ ವರ್ಷದ ಆರಂಭದಲ್ಲಿ ಷೇರುಗಳು ಈಗಾಗಲೇ ಏರಿಳಿತಗೊಂಡಿವೆ. ಫೆಡರಲ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡುವುದರಿಂದ ಹಣದುಬ್ಬರವೇನೋ ನಿಯಂತ್ರಣಕ್ಕೆ ಬರುತ್ತದೆ. ಆದರೆ, ಆರ್ಥಿಕತೆ ಮತ್ತು ಹೂಡಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಇದನ್ನು ಓದಿ:ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳ: ಆಭರಣ ಪ್ರಿಯರಿಗೆ ಶಾಕ್! ಹೀಗಿದೆ ಹೊಸ ದರ..