ಕರ್ನಾಟಕ

karnataka

By

Published : Jul 27, 2023, 9:50 PM IST

ETV Bharat / business

RBI: 500 ರೂ ನೋಟಿನ ಮೇಲೆ ಸ್ಟಾರ್​ ಸಿಂಬಲ್​ ಚಿಹ್ನೆ ಬಗ್ಗೆ ಚರ್ಚೆ.. ಆರ್​ಬಿಐ ಸ್ಪಷ್ಟನೆ ಹೀಗಿದೆ..

500 ಕರೆನ್ಸಿ ನೋಟುಗಳಲ್ಲಿ ನಕ್ಷತ್ರ ಚಿಹ್ನೆ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಆರ್‌ಬಿಐ ಕಡಿವಾಣ ಹಾಕಿದೆ. ಅವು ಕೂಡ ಮಾನ್ಯವಾಗಿವೆ ಎಂಬುದು ಸ್ಪಷ್ಟವಾಗಿದೆ.

star symbol in number panel valid  star symbol in number panel valid note  number panel valid note clarifies rbi  ನೋಟಿನ ಮೇಲೆ ಸ್ಟಾರ್​ ಸಿಂಬಲ್​ ಚಿಹ್ನೆ ಬಗ್ಗೆ ಚರ್ಚೆ  ಆರ್​ಬಿಐ ಸ್ಪಷ್ಟನೆ ಹೀಗಿದೆ  500 ಕರೆನ್ಸಿ ನೋಟುಗಳಲ್ಲಿ ನಕ್ಷತ್ರ ಚಿಹ್ನೆ  ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆ  ಚರ್ಚೆಗೆ ಆರ್‌ಬಿಐ ಕಡಿವಾಣ  ದೇಶಾದ್ಯಂತ ವಿವಿಧ ರೀತಿಯ ಸುದ್ದಿ  ಇತ್ತೀಚೆಗೆ ಸರ್ಕಾರ 2000 ರೂಪಾಯಿ ನೋಟುಗಳನ್ನು ಚಲಾವಣೆ  ಸ್ಟಾರ್ ಚಿಹ್ನೆ ಎಂದರೆ ಬದಲಿಸಿದ  ಮರುಮುದ್ರಣಗೊಂಡ ನೋಟುಗಳು ಎಂದು ಆರ್‌ಬಿಐ ಸ್ಪಷ್ಟ
500 ರೂ ನೋಟಿನ ಮೇಲೆ ಸ್ಟಾರ್​ ಸಿಂಬಲ್​ ಚಿಹ್ನೆ ಬಗ್ಗೆ ಚರ್ಚೆ

ಮುಂಬೈ, ಮಹಾರಾಷ್ಟ್ರ:ಕರೆನ್ಸಿ ನೋಟುಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ವಿವಿಧ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ಸರ್ಕಾರ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹೊರಗಿಡಲು ನಿರ್ಧರಿಸಿತ್ತು. ಇಂದು ಆರ್‌ಬಿಐ ಮಹತ್ವದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. 'ಸ್ಟಾರ್' ಗುರುತು ಮಾಡಿದ ನೋಟಿನ ಬಗ್ಗೆ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುರುವಾರ 'ಸ್ಟಾರ್' ಗುರುತು ಮಾಡಿದ ನೋಟುಗಳ ಸಿಂಧುತ್ವದ ಬಗ್ಗೆ ಎಲ್ಲಾ ಆತಂಕಗಳನ್ನು ತಳ್ಳಿಹಾಕಿದೆ, ಗುರುವಾರ ಈ ನೋಟುಗಳು ಇತರ ಯಾವುದೇ ಮಾನ್ಯ ನೋಟುಗಳಂತೆಯೇ ಇವೆ ಎಂದು ಹೇಳಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕರೆನ್ಸಿ ನೋಟುಗಳಲ್ಲಿ ನಕ್ಷತ್ರ (*) ಚಿಹ್ನೆ ಇರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ರೀತಿಯ ನೋಟುಗಳು ನಕಲಿ ಎಂದು ಹಲವರು ಪೋಸ್ಟ್ ಹಾಕಿದ್ದರಿಂದ ವೈರಲ್ ಆಗಿದೆ. ಆರ್‌ಬಿಐ ಇತ್ತೀಚೆಗೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಅವು ನಕಲಿ ಅಲ್ಲ ಮತ್ತು ಆರ್‌ಬಿಐ ಬಿಡುಗಡೆ ಮಾಡಿದ ನೋಟುಗಳು ಎಂದು ಅದು ಹೇಳಿದೆ. ಇತರ ನೋಟುಗಳಂತೆಯೇ ಅವು ಮಾನ್ಯವಾಗಿರುತ್ತವೆ ಎಂದು ಹೇಳಿದೆ.

RBI ವಿವಿಧ ರೀತಿಯ ನೋಟುಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳ ಮೇಲೆ ಸಾಮಾನ್ಯವಾಗಿ ಸೀರಿಯಲ್ ನಂಬರ್ ಮುದ್ರಿತವಾಗಿರುತ್ತದೆ. ಇತ್ತೀಚೆಗಷ್ಟೇ ಕೆಲವು ನೋಟುಗಳಲ್ಲಿ ನಕ್ಷತ್ರ ಚಿಹ್ನೆಯನ್ನು ಮುದ್ರಿಸಿರುವುದನ್ನು ಗಮನಿಸಿದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಬಿಐ ಸ್ಪಷ್ಟನೆ ನೀಡಿದೆ. ಇತರ ಎಲ್ಲ ನೋಟುಗಳಂತೆ ಅವು ಮಾನ್ಯವಾಗಿರುತ್ತವೆ ಎಂದು ಅದು ಹೇಳಿದೆ. ಪೂರ್ವಪ್ರತ್ಯಯ ಮತ್ತು ಸರಣಿ ಸಂಖ್ಯೆಯ ನಡುವೆ ನಕ್ಷತ್ರ ಚಿಹ್ನೆ ಇರುತ್ತದೆ ಎಂದು ಆರ್​​ಬಿಐ ಹೇಳಿದೆ.

ಸ್ಟಾರ್ ಚಿಹ್ನೆ ಎಂದರೆ ಬದಲಿಸಿದ ಮತ್ತು ಮರುಮುದ್ರಣಗೊಂಡ ನೋಟುಗಳು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಅವುಗಳನ್ನು ಸುಲಭವಾಗಿ ಗುರುತಿಸಲು ಈ ನಕ್ಷತ್ರ ಚಿಹ್ನೆಯನ್ನು ಬಳಸಲಾಗುತ್ತದೆ. ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನಕ್ಕೆ ಪ್ರತಿಕ್ರಿಯಿಸಿದೆ. ಇವು ನಕಲಿ ನೋಟುಗಳಲ್ಲ, ಪ್ರಚಾರಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ. 2016 ರಲ್ಲಿ ಆರ್‌ಬಿಐ ಬಿಡುಗಡೆ ಮಾಡಿದ 500 ನೋಟುಗಳು ಸಹ ನಕ್ಷತ್ರ ಚಿಹ್ನೆಯನ್ನು ಹೊಂದಿವೆ.

ಸೆಪ್ಟೆಂಬರ್ 30 ರವರೆಗೆ ಸಮಯ: 2000 ರೂ.ಗಳ ನೋಟು ಹೊಂದಿರುವವರು ಅದನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಅಥವಾ ಬ್ಯಾಂಕ್‌ನಲ್ಲಿರುವ ಬೇರೆ ಯಾವುದೇ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ''ಸೆಪ್ಟೆಂಬರ್ 30ರ ಗಡುವಿನೊಳಗೆ ಬಹುತೇಕ ರೂ.2000 ನೋಟುಗಳು ವಾಪಸಾಗುವ ನಿರೀಕ್ಷೆಯಿದೆ'' ಎಂದು ಅವರು ಹೇಳಿದ್ದಾರೆ.

ಜನರಿಗೆ ಬ್ಯಾನ್​ ಭಯ: ಹೊಸ ₹ 2000 ನೋಟುಗಳನ್ನು ನಿಷೇಧಿಸಿದ ನಂತರ ಸರ್ಕಾರವೂ ₹ 500 ನೋಟುಗಳನ್ನು ಚಲಾವಣೆಯಿಂದ ಹೊರಗಿಡಬಹುದು ಎಂಬ ಭಯ ಜನರ ಮನಸ್ಸಿನಲ್ಲಿ ಮೂಡಿದೆ. ಇದೀಗ ಇತ್ತೀಚೆಗೆ ಸರ್ಕಾರ ಈ ಬಗ್ಗೆ ಪ್ರತಿಕ್ರಿಯಿಸಿದೆ. ಇದರೊಂದಿಗೆ 1000 ರೂಪಾಯಿ ನೋಟು ಮರು ಪರಿಚಯಿಸುವ ಯೋಜನೆ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಿದೆ. ಮಾನ್ಸೂನ್ ಅಧಿವೇಶನದಲ್ಲಿ ಹಣಕಾಸು ಸಚಿವಾಲಯವು ₹ 500 ನೋಟುಗಳ ಅಮಾನ್ಯೀಕರಣ, ಆರ್ಥಿಕತೆಯಲ್ಲಿ ₹ 1000 ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಪ್ರಸ್ತಾಪಿಸಿದೆ. ಇದಕ್ಕೆ ಪ್ರತಿಯಾಗಿ ಹಣಕಾಸು ಸಚಿವಾಲಯ ₹ 500 ನೋಟು ಅಮಾನ್ಯೀಕರಣಕ್ಕೆ ನಿರಾಕರಿಸಿದೆ. ಇದರೊಂದಿಗೆ 1000 ರೂಪಾಯಿ ನೋಟು ಮರು ಚಲಾವಣೆಯ ಸುದ್ದಿಯನ್ನೂ ತಿರಸ್ಕರಿಸಿದೆ.

ಓದಿ:500 ರೂ ನೋಟುಗಳನ್ನ ವಾಪಸ್​ ಪಡೆಯುವ ಮಾತೇ ಇಲ್ಲ..1000 ರೂ ನೋಟುಗಳ ಜಾರಿಯೂ ಇಲ್ಲ: ಆರ್​​​ಬಿಐ

ABOUT THE AUTHOR

...view details