ಹೈದರಾಬಾದ್: ಇತ್ತೀಚೆಗೆ ದಂಪತಿಯೊಬ್ಬರಿಗೆ ಹೆಣ್ಣು ಮಗು ಜನಿಸಿದೆ. ತಮ್ಮ ಮಗಳ ಭವಿಷ್ಯದ ಆರ್ಥಿಕ ಅಗತ್ಯಗಳನ್ನು ಪೂರೈಸುವುದು ದಂಪತಿಯ ಆಶಯ. ದಂಪತಿ ತಮ್ಮ ಮಗಳ ಭವಿಷ್ಯಕ್ಕೆ ತಿಂಗಳಿಗೆ 15,000 ರೂ.ವರೆಗೆ ಹೂಡಿಕೆ ಮಾಡಲು ಸಿದ್ಧವಾಗಿದೆ. ಎಲ್ಲರಂತೆ ಅವರೂ ಮಗಳಿಗೆ ಚಿನ್ನವನ್ನು ಉಡುಗೊರೆಯಾಗಿ ನೀಡಲು ಬಯಸುತ್ತಾರೆ. ಹಾಗಾದರೆ ಅವರು ಈಗ ಯಾವ ರೀತಿಯ ಹೂಡಿಕೆಗಳನ್ನು ಆಯ್ಕೆ ಮಾಡಬೇಕು? ಮುಂದಿನ ಕೆಲವು ವರ್ಷಗಳಲ್ಲಿ ತಮ್ಮ ಮಗಳ ಆರ್ಥಿಕ ಅಗತ್ಯಗಳು ಏನಾಗಬಹುದು ಎಂಬುದರ ಬಗ್ಗೆ ಯೋಚಿಸಬೇಕಾಗುತ್ತದೆ. ಮಗಳ ಅಗತ್ಯತೆಗೆ ತಕ್ಕಂತೆ ಅವರು ಹೂಡಿಕೆಯ ಪ್ಲಾನ್ ರೂಪಿಸಬೇಕಾಗುತ್ತದೆ.
ಯಾವೆಲ್ಲ ಪ್ಲಾನ್ ಮಾಡಬಹುದು?:ಅವರು ತಮ್ಮ ಹೆಸರಿನಲ್ಲಿ ವಾರ್ಷಿಕ ಆದಾಯದ ಕನಿಷ್ಠ 12 ಪಟ್ಟು ಜೀವ ವಿಮಾ ಪಾಲಿಸಿಗೆ ಹೋಗಬಹುದು. ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ರಕ್ಷಣೆ ನೀಡುವ ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ಇದಕ್ಕಾಗಿ ಅವರು ಆಯ್ಕೆ ಮಾಡಬಹುದು. ದೀರ್ಘಕಾಲದ ಹೂಡಿಕೆ ಮಾಡಲು ಬಯಸಿದರೆ, PPF ಖಾತೆಯಲ್ಲಿ ಪ್ರತಿ ತಿಂಗಳು 4,000 ರೂ. ಎಸ್‌ಐಪಿ ಮೂಲಕ ಹೂಡಿಕೆ ಮಾಡಬಹುದು. ಅದೂ ಅಲ್ಲದೇ ಹೈಬ್ರಿಡ್ ಇಕ್ವಿಟಿ ಫಂಡ್‌ಗಳು ಮತ್ತು ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್‌ಗಳಲ್ಲಿ ರೂ 6,000 ಕ್ಕಿಂತ ಹೆಚ್ಚು ಹೂಡಿಕೆ ಮಾಡಬಹುದು. ಇದು ಸ್ವಲ್ಪ ಅಪಾಯಕಾರಿಯಾಗಿರಬಹುದು. ಆದರೆ, ದೀರ್ಘಾವಧಿಯಲ್ಲಿ ಉತ್ತಮ ಆದಾಯ ತಂದು ಕೊಡುತ್ತದೆ.
ಹೇಗೆಲ್ಲ ಹಣ ತೊಡಗಿಸಬಹುದು:ಡೈವರ್ಸಿಫೈಡ್ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ 8,000 ರೂಗಳನ್ನು ಪ್ರತಿಯೊಬ್ಬರೂ ಸಿಪ್ ಮಾಡುವ ಯೋಚನೆ ಮಾಡಬಹುದು. 2,000 ರೂ.ಗಳನ್ನು ಗೋಲ್ಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ, ಉಳಿದ 5,000 ರೂ.ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಜಮಾ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ನೀವು 20 ವರ್ಷಗಳವರೆಗೆ ಪ್ರತಿ ತಿಂಗಳು ಈ ರೀತಿ ಹೂಡಿಕೆ ಮಾಡಿದರೆ ಸರಾಸರಿ 11 ಪ್ರತಿಶತದಷ್ಟು ಆದಾಯದೊಂದಿಗೆ 1,15,56,500 ರೂಗಳನ್ನು ಸಂಗ್ರಹಿಸಬಹುದು.
ನಾಲ್ಕು ವರ್ಷಗಳ ಹಿಂದೆ ಯೂನಿಟ್ ಆಧಾರಿತ ಪಾಲಿಸಿ ತೆಗೆದುಕೊಂಡಿದ್ದರೆ, ಈಗ ಅದನ್ನು ರದ್ದು ಮಾಡಬಹುದೇ ಎಂಬ ಅನುಮಾನ ಮೂಡುತ್ತದೆ. ನೀವು ಪಾವತಿಸಿದ ಪ್ರೀಮಿಯಂಗೆ ಹೋಲಿಸಿದರೆ ಇದು ಕಡಿಮೆ ಆಗುವ ಸಾಧ್ಯತೆಯಿದೆ ಎಂದು ಅವರು ಹೇಳುತ್ತಾರೆ. ನೀವು ಈಗ ಏನು ಮಾಡಬೇಕು? ಕನಿಷ್ಠ ಐದು ವರ್ಷಗಳವರೆಗೆ ಆ ಪಾಲಿಸಿಗಳನ್ನ ಮುಂದುವರಿಸಬೇಕು. ಆಗ ಮಾತ್ರ ಅವುಗಳನ್ನು ರದ್ದುಗೊಳಿಸಲು ಅವಕಾಶವಿರುತ್ತದೆ. ಈಗ ನೀವು ಪ್ರೀಮಿಯಂ ಪಾವತಿಸುವುದನ್ನು ನಿಲ್ಲಿಸಿದರೂ, ಪಾಲಿಸಿಯ ಐದು ವರ್ಷಗಳಲ್ಲಿ ನೀವು ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು.