ಸಿಯೋಲ್:ಮಹಿಳಾ ಉದ್ಯೋಗಿಯನ್ನು ಇದೇ ಮೊದಲ ಬಾರಿ ಉನ್ನತ ಹುದ್ದೆಗೆ ಏರಿಸಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಹೊಸ ಹೆಜ್ಜೆ ಇರಿಸಿದೆ. ಕಂಪನಿಯ ಮಹಿಳಾ ಕಾರ್ಯದರ್ಶಿಯನ್ನು ಮೊಬೈಲ್ ವಹಿವಾಟಿನ ಜಾಗತಿಕ ಮಾರುಕಟ್ಟೆಯ ಮೊದಲ ಮಹಿಳಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಲೀ ಯಂಗ್ ಹೀ ಸ್ಯಾಮ್ಸಂಗ್ ಡಿವೈಸ್ ಎಕ್ಸ್ಪೀರಿಯನ್ಸ್ನ ಡಿವಿಷನ್ನ ಗ್ಲೋಬಲ್ ಮಾರ್ಕೆಟ್ ಸೆಂಟರ್ನ ಅಧ್ಯಕ್ಷರಾಗಿ ಬಡ್ತಿ ಪಡೆದಿದ್ದಾರೆ.
ಸ್ಯಾಂಮ್ಸಂಗ್ನ ಮೊದಲ ಮಹಿಳಾ ಅಧ್ಯಕ್ಷರು ಇವರು ಎಂಬ ಖ್ಯಾತಿಗೆ ಕೂಡ ಭಾಜನರಾಗಿದ್ದಾರೆ. ಸ್ಯಾಮಸಂಗ್ ಎಲೆಕ್ಟ್ರಾನಿಕ್ ಅಧ್ಯಕ್ಷರಾಗಿ ಲೀ ಕುನ್ ಹೀ ಅವರ ಮೊದಲ ಮಗಳು ಲೀ ಬೊ ಜಿನ್ ಆಗಿದ್ದಾರೆ. ಅವರು ಪ್ರಸ್ತುತ ಸ್ಯಾಮ್‌ಸಂಗ್‌ನ ಶಿಲ್ಲಾ ಹೋಟೆಲ್ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2007ರಲ್ಲಿ ಟೆಕ್ ದೈತ್ಯಕ್ಕೆ ಸೇರ್ಪಡೆಯಾದ ಲೀ ಯಂಗ್ ಹೀ 2012ರಲ್ಲಿ ಉಪ ಅಧ್ಯಕ್ಷೆಯಾದರು. ಇದಕ್ಕೂ ಮುನ್ನ ಇವರು ಲೊರಿಯಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಮೊಬೈಲ್ ಫೋನ್‌ಗಳ ಇಮೇಜ್ ಮತ್ತು ಬ್ರ್ಯಾಂಡ್ ಅನ್ನು ಯಶಸ್ವಿಯಾಗಿ ಪ್ರಚಾರ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಬಡ್ತಿ ಕಂಪನಿಯ ಇತರ ಪ್ರತಿಭಾವಂತ ಮಹಿಳಾ ಉದ್ಯೋಗಿಗಳಿಗೆ ವೃತ್ತಿಜೀವನದ ಬಡ್ತಿಗೆ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಲೀ ಜೇ-ಯೋಂಗ್ ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಬಡ್ತಿ ಪಡೆದ ನಂತರ ಮೊದಲ ಬಾರಿಗೆ ನಡೆಸಿದ ಸಣ್ಣ ಪ್ರಮಾಣದ ಕಾರ್ಪೊರೇಟ್ ಪುನರ್ರಚನೆಯ ಭಾಗವಾಗಿ ಅವರು ಏಳು ಹೊಸ ಅಧ್ಯಕ್ಷರಲ್ಲಿ ಸೇರಿದ್ದಾರೆ. ಲೀ ಜೇ ಸೆಂಗ್ ರಾಜೀನಾಮೆ ನೀಡಿದ ಬಳಿಕ ಹೋಮ್ ಅಪ್ಲೈಯನ್ಸ ಘಟಕಕ್ಕೆ ಮುಖ್ಯಸ್ಥರಾಗಿ ಸ್ಯಾಮ್ಸಂಗ್ ಇದುವರೆಗೆ ಯಾರನ್ನೂ ನೇಮಿಸಿಲ್ಲ.
ಇದನ್ನೂ ಓದಿ: ಐಫೋನ್ 14 ಮೊಬೈಲ್ ಸ್ಯಾಟಲೈಟ್ ಕಾಲ್ ಮಾಡಿ ಜೀವ ಉಳಿಸಿಕೊಂಡ ವ್ಯಕ್ತಿ