ಕರ್ನಾಟಕ

karnataka

ETV Bharat / business

$1=₹78.23! ಸಾರ್ವಕಾಲಿಕ ಕುಸಿತ ಕಂಡ ಭಾರತೀಯ ಕರೆನ್ಸಿ; ಕಾರಣವೇನು ಗೊತ್ತೇ? - ರೂಪಾಯಿ ಎದುರು ಡಾಲರ್​ ಮೌಲ್ಯ ಹೆಚ್ಚಳ

ವಿದೇಶಿ ಬಂಡವಾಳ ಹೂಡಿಕೆಯ ಗರಿಷ್ಠ ಹಿಂತೆಗೆತ ಮತ್ತು ಹಣದುಬ್ಬರವು ಅಮೆರಿಕದ ಡಾಲರ್​ ಎದುರು ಭಾರತೀಯ ರೂಪಾಯಿ ಮೌಲ್ಯವನ್ನು ಕುಗ್ಗಿಸಿದೆ.

ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ
ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

By

Published : Jun 13, 2022, 3:28 PM IST

ಮುಂಬೈ (ಮಹಾರಾಷ್ಟ್ರ):ಡಾಲರ್​ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸದ್ಯ ಪ್ರತಿ ಡಾಲರ್‌ಗೆ​ 78.23 ರೂಪಾಯಿ ಪಾವತಿಸಬೇಕಿದೆ. ಇದು ಇಲ್ಲಿಯವರೆಗಿನ ಕೆಟ್ಟ ದಾಖಲೆ. ಇಂದು 77.84 ರೂಪಾಯಿ ಮೌಲ್ಯದೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ, ಬಳಿಕ 78.23 ರೂ.ಗೆ ಕುಸಿಯಿತು.

ಷೇರು ಮಾರುಕಟ್ಟೆಗಳಲ್ಲಿ ಈಕ್ವಿಟಿ ಮಾರಾಟದ ನಡುವೆ, ವಿದೇಶಿ ಬಂಡವಾಳ ದೊಡ್ಡ ಪ್ರಮಾಣದಲ್ಲಿ ವಾಪಸ್ಸಾಗುತ್ತಿದೆ. ರೂಪಾಯಿ ಮೌಲ್ಯ ಕುಸಿಯಲು ಇದು ಪ್ರಮುಖ ಕಾರಣ.

ಷೇರು ಮಾರುಕಟ್ಟೆಯೂ ಕುಸಿತ: ಮುಂಬೈ ಷೇರು ಮಾರುಕಟ್ಟೆಯೂ ಕೂಡ ಹಿನ್ನಡೆ ಅನುಭವಿಸುತ್ತಿದೆ. ಸೆನ್ಸೆಕ್ಸ್​ 1,506 ಅಂಕ ಕಳೆದುಕೊಂಡರೆ, ನಿಫ್ಟಿ 442 ಅಂಕ ಇಳಿದಿದೆ. ಇದು ಶೇ.2.77 ರಷ್ಟು ಕುಸಿತವಾಗಿದೆ.

ಕಚ್ಚಾತೈಲ ಬೆಲೆ ಏರಿಕೆಯೂ ಭಾರತೀಯ ಕರೆನ್ಸಿ ಶಕ್ತಿಯನ್ನು ಕುಗ್ಗಿಸಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್​ ತಲುಪಿದೆ. ತೈಲ ಬೆಲೆ ಏರಿಕೆ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದಲ್ಲದೇ, ದೇಶದ ಚಾಲ್ತಿ ಖಾತೆ ಕೊರತೆಯ ಮೇಲೂ ಒತ್ತಡ ಹೆಚ್ಚಿಸಿದೆ.

ಇದನ್ನೂ ಓದಿ:ಷೇರುಪೇಟೆಯಲ್ಲಿ ಭಾರಿ ಕುಸಿತ: ಆರಂಭದಲ್ಲೇ 1400 ಅಂಕ ಇಳಿಕೆ, ಹೂಡಿಕೆದಾರರಲ್ಲಿ ಆತಂಕ

ABOUT THE AUTHOR

...view details