ಕೊಚ್ಚಿ (ಕೇರಳ): ಈ ವರ್ಷ ಕೇರಳದಲ್ಲಿ ಕ್ರಿಸ್ಮಸ್ ಆಚರಣೆ ಜೋರಾಗಿತ್ತು. ಕಳೆದ ವರ್ಷದ ಕ್ರಿಸ್‌ಮಸ್ ಋತುವಿನಲ್ಲಿ ಕೇರಳದಲ್ಲಿ ಭರ್ಜರಿ ಮದ್ಯ ಮಾರಾಟ ಕಂಡಿತ್ತು. ಈ ಬಾರಿ ಅದರ ಪ್ರಮಾಣ ಕಳೆದ ವರ್ಷಕ್ಕಿಂತ ಶೇ 5 ರಷ್ಟು ಏರಿಕೆ ಕಂಡಿದೆ ಎಂದು ರಾಜ್ಯ ಪಾನೀಯಗಳ ಕಾರ್ಪೋರೇಷನ್ ಲಿಮಿಟೆಡ್ BEVCO ತಿಳಿಸಿದೆ. ಡಿಸೆಂಬರ್ 22 ರಿಂದ ಡಿಸೆಂಬರ್ 25 ರ ನಡುವೆ ಸುಮಾರು 250 ಕೋಟಿ ರೂಗಳ ಮದ್ಯ ಮಾರಾಟ ನಡೆದಿದೆ ಎಂದು ಬೆವ್ಕೋ ಹೇಳಿದೆ.
ಕೇರಳದಲ್ಲಿ ಮದ್ಯ ಮಾರಾಟ ಜೋರು..250 ಕೋಟಿ ಮೌಲ್ಯದ ಲಿಕ್ಕರ್ ಬಿಕರಿ
ವಿಶ್ವದಾದ್ಯಂತ ಈ ಬಾರಿ ಸಂಭ್ರಮದ ಕ್ರಿಸ್ಮಸ್ ಆಚರಣೆ ನಡೆದಿದೆ. ಭಾರತದಲ್ಲೂ ಕ್ರಿಸ್ಮಸ್ ಆಚರಣೆ ಸಂಭ್ರಮಕ್ಕೆ ಕೊರತೆ ಇಲ್ಲ. ಅದರಲ್ಲೂ ಕೇರಳದಲ್ಲಿ ಈ ಬಾರಿ ಏಸು ಸ್ಮರಣೆ ತುಸು ಹೆಚ್ಚೇ ಕಳೆ ಕಟ್ಟಿತ್ತು.
ಕೇರಳದಲ್ಲಿ ಮದ್ಯ ಮಾರಾಟವೂ ಜೋರು
ಡಿಸೆಂಬರ್ 31 ರ ವೇಳೆಗೆ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ. ಕ್ರಿಸ್‌ಮಸ್ ಮುನ್ನಾದಿನದಂದು, BEVCO ಔಟ್‌ಲೆಟ್‌ಗಳಿಂದ ಸುಮಾರು 90 ಕೋಟಿ ರೂಪಾಯಿಗಳ ಮದ್ಯ ಮಾರಾಟ ನಡೆದಿದೆ. ಇದು ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾಗಿದೆ, ಆದರೆ ಮಳಿಗೆಗಳಿಂದ ಮಾರಾಟ ರಸೀದಿಗಳು ಇನ್ನೂ ಸಂಪೂರ್ಣವಾಗಿ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದೂ ತಿಳಿದು ಬಂದಿದೆ.
ಇದನ್ನೂ ಓದಿ:ನಮ್ಮ ಮೆಟ್ರೋದಿಂದ ನಾಗವಾರದಲ್ಲಿ ರಿಸೀವಿಂಗ್ ಸಬ್ ಸ್ಟೇಷನ್: 45 ಸಾವಿರ ಚದರ್ ಅಡಿ ಭೂಸ್ವಾಧೀನ ಪ್ರಕ್ರಿಯೆ ಆರಂಭ