ಹೈದರಾಬಾದ್: ಹೆಚ್ಚುತ್ತಿರುವ ವೆಚ್ಚವನ್ನು ಲೆಕ್ಕಿಸದೇ ಮತ್ತು ಸುಲಭವಾಗಿ ಸಿಗುವ ಬ್ಯಾಂಕ್ ಸಾಲದ ಬಗ್ಗೆ ತಿಳಿಯದಿದ್ದರೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಸಾಗರೋತ್ತರ ಶಿಕ್ಷಣಕ್ಕಾಗಿ ಹಾತೊರೆಯುತ್ತಿದ್ದಾರೆ. ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶಿಕ್ಷಣವು ಹೆಚ್ಚಿನ ವೆಚ್ಚ ಒಳಗೊಂಡಿರುತ್ತದೆ.
ಈ ಹಿನ್ನೆಲೆ ಪಾಲಕರು ತಾವು ದುಡಿದ ಹಣ ಹಾಗೂ ಉಳಿತಾಯದ ಹಣವನ್ನು ಮಕ್ಕಳ ಭವಿಷ್ಯಕ್ಕಾಗಿ ವಿನಿಯೋಗಿಸುವುದರ ಜತೆಗೆ ಎಷ್ಟೇ ಸಾಲವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿಲ್ಲ. ಸಾಗರೋತ್ತರ ಅಧ್ಯಯನದ ಅವಶ್ಯಕತೆಗಳನ್ನು ಪೂರೈಸಲು ಯೋಗ್ಯವಾದ ಸಾಲ ಪಡೆಯಲು ಬಹಳಷ್ಟು ಕೆಲಸವನ್ನು ಮಾಡಬೇಕಾಗಿದೆ.
ವಿದೇಶಿ ಶಿಕ್ಷಣ ಹೆಚ್ಚಾಗುವ ಸಾಧ್ಯತೆ:ಇತ್ತೀಚಿನ ವರ್ಷಗಳಲ್ಲಿ ಭಾರತದಿಂದ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅದೇ ಸಮಯದಲ್ಲಿ, ಮುಂಬರುವ ವರ್ಷಗಳಲ್ಲಿ ವಿದೇಶದಲ್ಲಿ ಉನ್ನತ ಶಿಕ್ಷಣದ ವೆಚ್ಚವು ಅಗಾಧವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಕೆಲವು ಪ್ರಸಿದ್ಧ ಸಂಸ್ಥೆಗಳ ಸಮೀಕ್ಷೆಗಳ ಪ್ರಕಾರ, ಭಾರತೀಯ ವಿದ್ಯಾರ್ಥಿಗಳು ವಿದೇಶಿ ಶಿಕ್ಷಣಕ್ಕಾಗಿ 28 ಬಿಲಿಯನ್ ಡಾಲರ್ನಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಇದು ಎರಡು ವರ್ಷಗಳಲ್ಲಿ 2024 ರ ವೇಳೆಗೆ 80 ಶತಕೋಟಿ ಡಾಲರ್‌ಗೆ ಏರುವ ನಿರೀಕ್ಷೆಯಿದೆ.
ಬ್ಯಾಂಕ್ ಸಾಲ ಅವಶ್ಯಕ: ವಿದೇಶಿ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಮತ್ತು ವರ್ಕ್ ಪರ್ಮಿಟ್‌ಗಳನ್ನು ಪಡೆದರೂ ಅವರಲ್ಲಿ ಹೆಚ್ಚಿನವರು ಅರ್ಹತೆ ಪಡೆಯುವುದಿಲ್ಲ. ಹಾಗಾಗಿ, ಬ್ಯಾಂಕ್ ಸಾಲ ಪಡೆಯಬೇಕಾಗುತ್ತದೆ. ಈ ಅಗತ್ಯವನ್ನು ಪೂರೈಸಲು, ಭಾರತ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಬ್ಯಾಂಕ್‌ಗಳ ಸಂಘವು ಸಮಗ್ರ ಯೋಜನೆಯನ್ನು ರೂಪಿಸಿವೆ.
ಇದರ ಪ್ರಕಾರ, ಕಾಲೇಜು, ಹಾಸ್ಟೆಲ್, ಪರೀಕ್ಷೆ, ಪ್ರಯೋಗಾಲಯ, ಪುಸ್ತಕಗಳು, ಉಪಕರಣಗಳು, ಠೇವಣಿ, ಕಟ್ಟಡ ನಿಧಿ ಮತ್ತು ಮರು ಪಾವತಿಸಬಹುದಾದ ಠೇವಣಿಗಳಿಗೆ ಸಂಬಂಧಿಸಿದ ಶುಲ್ಕವನ್ನು ಸರಿದೂಗಿಸಲು ಒಬ್ಬರು ಸಾಗರೋತ್ತರ ಶಿಕ್ಷಣ ಸಾಲವನ್ನು ಪಡೆಯಬಹುದು.
ಶಿಕ್ಷಣ ಸಾಲ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ: ಸದ್ಯಕ್ಕೆ, ಬ್ಯಾಂಕ್‌ಗಳು ಯಾವುದೇ ಸೆಕ್ಯೂರಿಟಿಗಳನ್ನು ಪಡೆಯದೆ ಕ್ರೆಡಿಟ್ ಗ್ಯಾರಂಟಿ ನಿಧಿಯಿಂದ 7.50 ಲಕ್ಷ ರೂ.ವರೆಗಿನ ಶಿಕ್ಷಣ ಸಾಲವನ್ನು ಮಂಜೂರು ಮಾಡುತ್ತಿವೆ. ಈ ಮಿತಿಯನ್ನು ಶೀಘ್ರದಲ್ಲೇ 10 ಲಕ್ಷ ರೂಪಾಯಿಗೆ ಹೆಚ್ಚಿಸಲು ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಇತರ ಬ್ಯಾಂಕ್‌ಗಳು ತಾವು ಅನುಮೋದಿಸಿದ ವಿದೇಶಿ ವಿಶ್ವವಿದ್ಯಾಲಯಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಸೆಕ್ಯೂರಿಟಿಗಳಿಲ್ಲದೇ 40 ಲಕ್ಷದಿಂದ 50 ಲಕ್ಷ ಸಾಲ ನೀಡುತ್ತಿವೆ.
ಉನ್ನತ ಶಿಕ್ಷಣಕ್ಕಾಗಿ ಸಾಲ ಬಯಸುವ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಪ್ರಮಾಣಪತ್ರಗಳು, ಅರ್ಹತಾ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳ ಜೊತೆಗೆ ಪ್ರವೇಶ ಪತ್ರ, ವಿದೇಶಿ ಶಿಕ್ಷಣಕ್ಕಾಗಿ ಫಾರ್ಮ್ I-20, ಶುಲ್ಕ ರಚನೆ, KYC ದಾಖಲೆಗಳ ಅರ್ಜಿದಾರರು, ಅರ್ಜಿ, PAN ಇತರ ದಾಖಲಾಗಿ ಸಲ್ಲಿಸಬೇಕು. ಬ್ಯಾಂಕ್‌ಗಳು ಅಡಮಾನ ಸಾಲಗಳಿಗೆ ಹೆಚ್ಚಿನ ಸಾಲ ನೀಡುತ್ತವೆ ಮತ್ತು ಇದರಲ್ಲಿ ಅಪಾಯದ ಅನುಪಸ್ಥಿತಿ ಪರಿಗಣಿಸಿ ಕಡಿಮೆ ಬಡ್ಡಿಗೆ ನೀಡುತ್ತವೆ.
ಶಿಕ್ಷಣ ಸಾಲವನ್ನು ಮರುಪಾವತಿಸುವುದು ಮುಖ್ಯವಾಗಿದೆ. ಒಬ್ಬರು ಶುಲ್ಕ ಪಾವತಿಸಲು ಅಗತ್ಯವಿರುವ ಮೊತ್ತವನ್ನು ಮಾತ್ರ ತೆಗೆದುಕೊಳ್ಳಬೇಕು. ಆದರೆ ಬ್ಯಾಂಕ್‌ನ ಸಾಲದ ಪ್ರಸ್ತಾಪ ಪತ್ರದಲ್ಲಿ ಇದನ್ನು ನೀಡಲಾಗುವುದಿಲ್ಲ. ಪಾವತಿಸಿದ ಮೊತ್ತಕ್ಕೆ ಮಾತ್ರ ಬಡ್ಡಿ ಸಂಗ್ರಹಿಸಲಾಗುತ್ತದೆ. ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಮತ್ತು ಗಳಿಕೆಯನ್ನು ಪ್ರಾರಂಭಿಸಿದ ನಂತರ, ಸಾಲ ಮರುಪಾವತಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು. ಮರುಪಾವತಿ ಸರಿಯಾಗಿಲ್ಲದಿದ್ದರೆ, ಬ್ಯಾಂಕ್‌ಗಳು ನೋಟಿಸ್‌ಗಳನ್ನು ಕಳುಹಿಸುತ್ತವೆ ಮತ್ತು ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ:ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಸಾಧಿಸಲು ಇಲ್ಲಿವೆ ಕೆಲವು ಟಿಪ್ಸ್..!
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ರ ಅಡಿ ಶಿಕ್ಷಣ ಸಾಲದ ಬಡ್ಡಿಯ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದ್ದರಿಂದ, ಒಬ್ಬರು ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮೊದಲು ಅಂತಹ ಎಲ್ಲ ವಿವರಗಳನ್ನು ಸಂಗ್ರಹಿಸಬೇಕು. ಕೋರ್ಸ್‌ಗಳ ಆಯ್ಕೆ, ಅವುಗಳ ಖರ್ಚು ಮತ್ತು ಇತರ ವಿವರಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.
ವಿದೇಶದಲ್ಲಿ ಕಪ್ಪು ಪಟ್ಟಿಯಲ್ಲಿರುವ ಕಾಲೇಜುಗಳಲ್ಲಿ ಪ್ರವೇಶಕ್ಕೆ ಬ್ಯಾಂಕ್‌ಗಳು ಸಾಲ ನೀಡುವುದಿಲ್ಲ. ವೀಸಾ ಸಂದರ್ಶನದಲ್ಲಿ, ಅವರು ನಿಮ್ಮ ಶಿಕ್ಷಣದ ಬಗ್ಗೆ ಮಾತ್ರವಲ್ಲದೇ ನಿಮ್ಮ ಆಯ್ಕೆ ಮಾಡಿದ ಕೋರ್ಸ್ ವಿವರಗಳು, ಪ್ರಾಧ್ಯಾಪಕರು ಮತ್ತು ಕಾಲೇಜು ಶುಲ್ಕದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಬಹುದು. ನಿಮ್ಮ ಭವಿಷ್ಯದ ಯೋಜನೆಗಳ ಕುರಿತು ನೀವು ಎಷ್ಟು ಅರಿವನ್ನು ಹೊಂದಿದ್ದೀರಿ ಎಂಬುದನ್ನು ಕಂಡುಹಿಡಿಯಲು ಈ ರೀತಿ ಕೇಳುತ್ತಾರೆ.