ನವದೆಹಲಿ:ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಚಂದಾದಾರಿಕೆ ಆರಂಭವಾಗಿದೆ. ಈ ಪ್ರಕ್ರಿಯೆ ಮೇ 9ರಂದು ಮುಕ್ತಾಯಗೊಳ್ಳಲಿದೆ. ಎಲ್ಐಸಿ ಐಪಿಒ ಶುರುವಾಗುವ ಮುಂಚೆಯೇ ಕೆಲವು ಹೂಡಿಕೆದಾರರಿಂದ 5,627 ಕೋಟಿ ಗಳಿಸಲಾಗಿದೆ ಎಂದು ಎಲ್ಐಸಿ ಹೇಳಿಕೊಂಡಿದೆ.
ಇಂದಿನಿಂದ ಎಲ್ಐಸಿ ಐಪಿಒ ಆರಂಭ: ನೀವು ತಿಳಿದಿರಬೇಕಾದ ಸಂಗತಿಗಳಿವು.. - Opening of LIC IPO
ಎಲ್ಐಸಿಯ ಐಪಿಒ ಆರಂಭವಾಗಿದೆ. ಮೇ 9ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಷೇರುಗಳನ್ನು ಕೊಳ್ಳುವವರು ಅವಶ್ಯವಾಗಿ ತಿಳಿದಿರಬೇಕಾದ ಮಾಹಿತಿ ಇಲ್ಲಿದೆ.
ಇಂದಿನಿಂದ ಎಲ್ಐಸಿ ಐಪಿಒ ಆರಂಭ: ಇಲ್ಲಿದೆ ಪ್ರಮುಖ ಮಾಹಿತಿ
ಷೇರು ಖರೀದಿಗೂ ಮುನ್ನ ತಿಳಿದಿರಬೇಕಾದ ಅಂಶಗಳು:
- ಎಲ್ಐಸಿ ಐಪಿಒ ಬೆಲೆ ಪ್ರತಿ ಈಕ್ವಿಟಿ ಷೇರಿಗೆ 902 ರೂಪಾಯಿಯಿಂದ 949 ರೂಪಾಯಿ ಆಗಿದೆ.
- ಎಲ್ಐಸಿ ಪಾಲಿಸಿದಾರರು ಪ್ರತಿ ಈಕ್ವಿಟಿ ಷೇರಿಗೆ 60 ರೂಪಾಯಿ ರಿಯಾಯಿತಿ ಪಡೆಯುತ್ತಾರೆ.
- ಚಿಲ್ಲರೆ ಹೂಡಿಕೆದಾರರು ಮತ್ತು ಉದ್ಯೋಗಿಗಳು ಪ್ರತಿ ಷೇರಿನ ಮೇಲೆ 45 ರೂಪಾಯಿ ರಿಯಾಯಿತಿ ಪಡೆಯುತ್ತಾರೆ.
- ಹೂಡಿಕೆದಾರರು ಕನಿಷ್ಠ 15 ಷೇರುಗಳಿಗೆ ಬಿಡ್ ಮಾಡಬೇಕೆಂಬ ನಿಯಮ ಇದೆ.
- ಎಲ್ಐಸಿ ಷೇರುಗಳು ಮೇ 17ರಂದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುತ್ತವೆ.
- ಎಲ್ಐಸಿಯಲ್ಲಿ ಶೇ.3.5ರಷ್ಟು ಪಾಲನ್ನು ಕಡಿಮೆ ಮಾಡುವ ಮೂಲಕ 21,000 ಕೋಟಿ ಸಂಗ್ರಹಿಸಲು ಕೇಂದ್ರ ಯೋಜಿಸಿದೆ.
- ಎಲ್ಐಸಿ ಐಪಿಒ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಧಿಕ ಮೌಲ್ಯದಿಂದ ಕೂಡಿರಲಿದೆ.
- ಎಲ್ಐಸಿಗೆ ಮೊದಲು ಪೇಟಿಎಂ ಐಪಿಒದಲ್ಲಿ ಕಳೆದ ವರ್ಷ 18,300 ಕೋಟಿ ಗಳಿಸಿತ್ತು.
- ಕೋಲ್ ಇಂಡಿಯಾ ಐಪಿಒದಲ್ಲಿ 2010ರಲ್ಲಿ 15,200 ಕೋಟಿಗಳಷ್ಟು ನಿಧಿ ಸಂಗ್ರಹವಾಗಿತ್ತು.
- ಐಪಿಒ ಬಗ್ಗೆ ತಿಳಿಸಲು ಎಲ್ಐಸಿ ತನ್ನ ಪಾಲಿಸಿದಾರರನ್ನು ಎಸ್ಎಂಎಸ್ ಮತ್ತು ಇತರ ಮಾಧ್ಯಮಗಳನ್ನು ಬಳಸಿದೆ.
- ಮುದ್ರಣ ಮತ್ತು ಟಿವಿ ಜಾಹೀರಾತು ಸೇರಿದಂತೆ ವಿವಿಧ ಚಾನೆಲ್‌ಗಳ ಮೂಲಕ ಹಲವು ತಿಂಗಳಿಂದ ಮಾಹಿತಿ ನೀಡಿದೆ.
- ಎಲ್ಐಸಿಯನ್ನು 5 ಕೋಟಿ ರೂಪಾಯಿ ಬಂಡವಾಳದೊಂದಿಗೆ ಆರಂಭಿಸಲಾಗಿತ್ತು.
- 1956ರ ಸೆ.1ರಂದು 245 ಖಾಸಗಿ ಕಂಪನಿಗಳನ್ನು ಎಲ್ಐಸಿಯಲ್ಲಿ ವಿಲೀನಗೊಳಿಸಿ ರಾಷ್ಟ್ರೀಕರಣಗೊಳಿಸಲಾಗಿತ್ತು.
ಇದನ್ನೂ ಓದಿ:ಪೆಟ್ರೋಲ್-ಡೀಸೆಲ್: ದೇಶ, ರಾಜ್ಯದ ನಗರಗಳಲ್ಲಿ ತೈಲ ಬೆಲೆ ಹೀಗಿದೆ..