ಕರ್ನಾಟಕ

karnataka

ETV Bharat / business

ನೀವು ದುಡಿಯುವ ಹಣ ಉಳಿಸುವುದು ಹಾಗೂ ಬೆಳೆಸುವುದು ಹೇಗೆ?: ಇದು ನಿಮಗೆ ತಿಳಿದಿರಲಿ!

ನೀವು ಭವಿಷ್ಯದಲ್ಲಿ ಸುರಕ್ಷಿತ ಜೀವನ ನಡೆಸಬೇಕಾದರೆ ಈ ಎಲ್ಲ ಅಂಶಗಳನ್ನ ಅಳವಡಿಸಿಕೊಳ್ಳುವುದು ಒಳಿತು. ನಾವು ಗಳಿಸಿದ ಹಣವನ್ನು ಸರಿಯಾದ ಸ್ಕೀಂನಲ್ಲಿ ತೊಡಗಿಸಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಯೋಜನೆ ರೂಪಿಸಿ ಹಣ ಹೂಡಿಕೆ ಮಾಡುವುದು ಸುರಕ್ಷಿತ ಜೀವನಕ್ಕೆ ಕೀಲಿಕೈ. ಅದರಲ್ಲೂ ಇಂದಿನ ಯುವ ಜನತೆ ತಾವು ದುಡಿಯಲು ಆರಂಭಿಸುವ ದಿನಗಳಲ್ಲೇ ಹೆಚ್ಚಿನ ಉಳಿತಾಯ ಮಾಡಿ ಉತ್ತಮ ಯೋಜನೆಗಳಲ್ಲಿ ಹಣ ತೊಡಗಿಸಿದರೆ ಶಾಂತಿಯುತ ಜೀವನ ನಡೆಸಲು ಸಾಧ್ಯವಾಗುತ್ತದೆ.

Know how to to save and grow your hard-earned money
ನೀವು ದುಡಿಯುವ ಹಣ ಉಳಿಸುವುದು ಹಾಗೂ ಬೆಳೆಸುವುದು ಹೇಗೆ?: ಇದು ನಿಮಗೆ ತಿಳಿದಿರಲಿ!

By

Published : May 9, 2022, 3:42 PM IST

ಹೈದರಾಬಾದ್​:ನೀವು ವ್ಯಾಪಾರ ಅಥವಾ ಉದ್ಯೋಗ ಮಾಡಿ ಗಳಿಸಿದ ಹಣವನ್ನು ಉಳಿತಾಯ ಮಾಡುವುದು ಬಹಳ ಮುಖ್ಯ. ನೀವು ದುಡಿದು ಗಳಿಸಿದ ಹಣವನ್ನು ಫಿಕ್ಸೆಡ್​ ಡಿಪಾಸಿಟ್​​​​​​​ ಇಲ್ಲವೇ ಇತರ ಸರಿಯಾದ ಸ್ಕೀಂಗಳಲ್ಲಿ ತೊಡಗಿಸುವ ಮೂಲಕ ಮುಂದಿನ ಜೀವನಕ್ಕೆ ಕಾಪಿಟ್ಟುಕೊಳ್ಳಬೇಕು. ಈಗ ಉಳಿತಾಯ ಮಾಡಲು ಆರಂಭಿಸಿದವರು ಈ ಬಗ್ಗೆ ಎಚ್ಚರಿಕೆ ವಹಿಸುವುದು ಒಳಿತು. ಅವರಿಗೊಂದಿಷ್ಟು ಸಲಹೆಗಳು ಇಲ್ಲಿವೆ.

ಅವಧಿಯ ವಿಮೆ:ಉದ್ಯೋಗದಲ್ಲಿರುವ ಎಲ್ಲರೂ ಟರ್ಮ್​ ಪಾಲಿಸಿ ಮಾಡಿಸುವುದು ಉತ್ತಮ. ಏಕೆಂದರೆ ಜೀವನ ಎಂಬುದು ಅನಿಶ್ಚಿತ ಹಾಗಾಗಿ ತಕ್ಷಣಕ್ಕೆ ಎದುರಾಗುವ ಆಪತ್ತಿನಿಂದ ಕುಟುಂಬದ ರಕ್ಷಣೆಗೆ ಟರ್ಮ್​ ಪಾಲಿಸಿ ಖರೀದಿ ಮಾಡುವುದು ಉತ್ತಮ. 10 ರಿಂದ 12 ವರ್ಷಗಳ ಆದಾಯಕ್ಕೆ ಸಮನಾದ ಟರ್ಮ್ ಪಾಲಿಸಿ ಮಾಡಿಸುವತ್ತ ಚಿತ್ತ ಹರಿಸಿ.

ಆನ್‌ಲೈನ್ ವಂಚನೆಗಳಿಗೆ ಬಲಿಯಾಗಬೇಡಿ: ನೀವು ದೊಡ್ಡ ಲಾಟರಿ ಗೆದ್ದಿದ್ದೀರಿ ಎಂದು ಬರುವ ನಕಲಿ ಈ ಮೇಲ್​​ ಹಾಗೂ ಮೆಸೇಜ್​ಗಳ ಬಗ್ಗೆ ಜಾಗರೂಕರಾಗಿರಿ. ಇಂತಹ ಮೇಲ್​ಗಳನ್ನು ಮೆಸೇಜ್​ಗಳನ್ನು ನಂಬಿ ನಿಮ್ಮ ಬ್ಯಾಂಕ್​ ಖಾತೆಗಳ ಮಾಹಿತಿ ಹಾಗೂ ಇತರ ವಿವರಗಳನ್ನು ದಯವಿಟ್ಟು ಹಂಚಿಕೊಳ್ಳಬೇಡಿ. ಒಂದೊಮ್ಮೆ ನಿಮ್ಮ ಮಾಹಿತಿಯನ್ನ ಅಥವಾ ಒಟಿಪಿಯನ್ನ ಹಂಚಿಕೊಂಡರೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವ ಸಾಧ್ಯತೆಗಳಿವೆ. ಇಂತಹವುಗಳಿಂದ ದೂರವಿರಿ.

ಕಪಟ ಭರವಸೆಗಳನ್ನ ನಂಬಬೇಡಿ:ನಿಮ್ಮ ಹೂಡಿಕೆಯ ನಾಲ್ಕು ಪಟ್ಟು ಗಳಿಸಬಹುದು ಮತ್ತು ನಿಮ್ಮ ಹಣವನ್ನು ರಾತ್ರೋರಾತ್ರಿ ದ್ವಿಗುಣಗೊಳಿಸಲಾಗುತ್ತೇವೆ ಎಂದು ನಿಮ್ಮನ್ನು ನಂಬಿಸಿ ಮೋಸ ಮಾಡುವವರು ಇದ್ದು, ಈ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಈಗ ಬ್ಯಾಂಕ್​ಗಳಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳಲು 10-12 ವರ್ಷಗಳು ಬೇಕು. ಹಾಗಾಗಿ 2-3 ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಬರುವವರ ಬಗ್ಗೆ ಎಚ್ಚರಿಕೆಯಿಂದ ಇರಿ. ಒಂದೊಮ್ಮೆ ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳಬೇಡಿ

ವಿಶ್ವಾಸಾರ್ಹ ಯೋಜನೆಗಳಲ್ಲಿ ಹೂಡಿಕೆ ಮಾಡಿ: ಬ್ಯಾಂಕಿನ ಬಡ್ಡಿಗಿಂತ ಹೆಚ್ಚಿನ ಹಣವನ್ನು ಪಡೆಯುವ ಯೋಜನೆಗಳು ಇದ್ದು ನಂಬಿಕಾರ್ಹ ಸಂಸ್ಥೆಗಳ ಜತೆ ವ್ಯವಹರಿಸಿ ನಿಮ್ಮ ಹಣ ತೊಡಗಿಸಿ, ಉತ್ತಮ ಮ್ಯೂಚುವಲ್ ಫಂಡ್​ಗಳಲ್ಲಿ ಹಣ ಹೂಡಿಕೆ ಮಾಡಿ. ನಿಮ್ಮ ಹಣವನ್ನು ಬ್ಯಾಂಕ್‌ಗಳಲ್ಲಿ ಅಥವಾ ಪೋಸ್ಟ್ ಆಫೀಸ್ ಠೇವಣಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.

ಇದನ್ನು ಓದಿ:ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರ ಎಷ್ಟು?

ABOUT THE AUTHOR

...view details