ನವದೆಹಲಿ:ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ (IRCTC), ತನ್ನ ಅಪ್ಲಿಕೇಶನ್, ಐಆರ್ಸಿಟಿಸಿ ರೈಲ್ ಕನೆಕ್ಟ್‌ನಲ್ಲಿ ಟ್ರಾವೆಲ್ ನೌ ಪೇ ಲೇಟರ್ (TNPL) ಪಾವತಿ ಆಯ್ಕೆ ನೀಡಿದೆ. ಅಲ್ಲದೇ ಇದಕ್ಕಾಗಿ CASHe ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ರೈಲ್ವೆ ಇಲಾಖೆ ಅಕ್ಟೋಬರ್ 19, 2022 ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಇದರಿಂದಾಗಿ ಭಾರತೀಯ ರೈಲ್ವೆಯನ್ನು ಬಳಸುವ ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳನ್ನು ತ್ವರಿತವಾಗಿ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಮೂರರಿಂದ ಆರು ತಿಂಗಳವರೆಗೆ ಇರುವ ಕೈಗೆಟುಕುವ ಇಎಂಐಗಳನ್ನು ಬಳಸಿಕೊಂಡು ಪಾವತಿಸಬಹುದಾಗಿದೆ. CASHe ನ TNPL ಪಾವತಿ ಆಯ್ಕೆಯಿಂದಾಗಿ ಭಾರತೀಯ ರೈಲ್ವೆಯಲ್ಲಿ ಲಕ್ಷಾಂತರ ಪ್ರಯಾಣಿಕರು ಐಆರ್ಸಿಟಿಸಿ ಟ್ರಾವೆಲ್ ಅಪ್ಲಿಕೇಶನ್‌ನಲ್ಲಿ ರೈಲು ಟಿಕೆಟ್ ಸುಲಭವಾಗಿ ಖರೀದಿಸಬಹುದಾಗಿದೆ.
ಇಎಂಐ (EMI) ಪಾವತಿ:ಇಎಂಐ ಪಾವತಿ ಆಯ್ಕೆಯು IRCTC ಟ್ರ್ಯಾವೆಲ್ ಅಪ್ಲಿಕೇಶನ್‌ನ ಚೆಕ್‌ಔಟ್ ಪುಟದಲ್ಲಿ ಇರುತ್ತದೆ. ಇದರಲ್ಲಿ ಪ್ರಯಾಣಿಕರು ಕಾಯ್ದಿರಿಸಿದ ಮತ್ತು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. CASHe ನ TNPL EMI ಪಾವತಿ ಆಯ್ಕೆಗೆ ಯಾವುದೇ ದಾಖಲಾತಿಗಳ ಅವಶ್ಯಕತೆ ಇರುವುದಿಲ್ಲ. ಹಾಗಾಗಿ TNPL ಸೌಲಭ್ಯವನ್ನು ಎಲ್ಲ ಬಳಕೆದಾರರು ಪಡೆಯಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.