ಹೈದರಾಬಾದ್: ಹಣದುಬ್ಬರ ಕಡಿಮೆ ಮಾಡಲು ಆರ್ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಇದು ಬ್ಯಾಂಕ್ಗಳಲ್ಲಿನ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಏರಿಕೆಗೆ ಕಾರಣವಾಗಿದೆ. ಸ್ಥಿರ ಠೇವಣಿ (ಎಫ್ಡಿ) ಬಡ್ಡಿದರ ಇನ್ನು ಕೂಡ ಹೆಚ್ಚುವ ಸಾಧ್ಯತೆ ಇದೆ. ಪ್ರಸ್ತುತ ಅನೇಕ ಬ್ಯಾಂಕ್ಗಳು ವಾರ್ಷಿಕ ಬಡ್ಡಿದರವನ್ನು 7ರಷ್ಟು ಹೆಚ್ಚಿಸಿದ್ದು, ಕೆಲವು ಬ್ಯಾಂಕ್ಗಳಲ್ಲಿ ಇದು 8 ರಷ್ಟು ಮೀರಿದೆ.
ಅತಿ ಹೆಚ್ಚಿನ ರಿಟರ್ನ್ಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಇದು ಹೆಚ್ಚಿನ ಗ್ಯಾರಂಟಿ ರಿಟರ್ನ್ ಹೊಂದಿರುವ ಎಫ್ಡಿ ಅಲ್ಲಿ ಕೂಡ ನಡೆಯಲಿದೆ. ಆದರೆ, ಅತಿ ಹೆಚ್ಚಿನ ಬಡ್ಡಿದರದಲ್ಲಿ ಹೆಚ್ಚಿನ ಅಪಾಯವಿರುವುದು ಸುಳ್ಳಲ್ಲ. ಕೆಲವು ಬ್ಯಾಂಕ್ಗಳು ಕಡಿಮೆ ಬಡ್ಡಿದರ ನೀಡಿದರೂ ಸುರಕ್ಷತೆ ನೀಡುತ್ತದೆ.
ಸಣ್ಣ ಬ್ಯಾಂಕ್ಗಳು ಅತಿಹೆಚ್ಚಿನ ಬಡ್ಡಿ ಆಮಿಷ ಒಡ್ಡುತ್ತವೆ. ಇದರಿಂದ ಅಪಾಯ ಕೂಡ ಹೆಚ್ಚಿರುತ್ತದೆ. ಹಣದುಬ್ಬರ ನಿರಂತರವಾಗಿ ಒತ್ತಡಕ್ಕೆ ಕಾರಣವಾದರೆ, ಹೂಡಿಕೆದಾರರು ಹೆಚ್ಚಿನ ಬಡ್ಡಿ ಪಡೆಯಲು ಸಾಧ್ಯವಿಲ್ಲ. ಇಂತಹ ವಿಷಯಗಳನ್ನು ಮನದಲ್ಲಿಟ್ಟುಕೊಳ್ಳುವುದು ಅವಶ್ಯ. ಆರ್ಬಿಐ ಅಡಿ ಪ್ರಮಾಣೀಕೃತವಾಗಿರುವ ಎಲ್ಲ ಶೆಡ್ಯೂಲ್ ವಾಣಿಜ್ಯ ಬ್ಯಾಂಕ್ಗಳಲ್ಲಿ 5 ಲಕ್ಷಕ್ಕೂ ಹೆಚ್ಚಿನ ಠೇವಣಿ ಹೂಡಿಕೆ ಮಾಡಿದರೆ ವಿಮೆ ಅನ್ವಯವಾಗುತ್ತದೆ. ಈ ಹಿನ್ನಲೆ ಠೇವಣಿಗೆ ವಾಣಿಜ್ಯ ಬ್ಯಾಂಕ್ಗಳು ಸುರಕ್ಷಿತವಾಗಿವೆ.
ಹೊಸ ಪೀಳಿಗೆಯ ಸಣ್ಣ ಫೈನಾನ್ಸ್ ಬ್ಯಾಂಕ್ಗಳು (ಎಸ್ಎಫ್ಬಿ) ಅಣಬೆಯಂತೆ ಹುಟ್ಟಿಕೊಳ್ಳುತ್ತಿವೆ. ಇವು ಅತಿ ಹೆಚ್ಚು ಅಂದರೆ, 7.25ಕ್ಕಿಂತಲೂ ಹೆಚ್ಚು ಬಡ್ಡಿ ನೀಡುತ್ತವೆ. ಸೂರ್ಯೋದಯ ಎಸ್ಎಫ್ಬಿ 8.01 ರಷ್ಟು ಬಡ್ಡಿಯನ್ನು 999 ದಿನಗಳ ಅವಧಿಗೆ ನೀಡುತ್ತಿದೆ. ಉಜ್ಜೀವನ ಎಸ್ಎಫ್ಬಿ 8ರಷ್ಟು ಬಡ್ಡಿಯನ್ನು 560 ದಿನಗಳಿಗೆ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ 8.75ರಷ್ಟು ಬಡ್ಡಿ ನೀಡುತ್ತಿದೆ. ಪ್ರಸ್ತುತ ಇರುವ ಅತಿ ಹೆಚ್ಚು ಬಡ್ಡಿದರ ಇದಾಗಿದೆ.
ಯಾವಾಗ ಕೆಲವು ಸರ್ಕಾರಿ ಬ್ಯಾಂಕ್ಗಳು ಎಫ್ಡಿ ದರವನ್ನು ಹೆಚ್ಚಿಸುತ್ತದೆ. ಅವರು ಆಗ ಮಾಡುತ್ತಾರೆ. ಇತ್ತೀಚೆಗೆ ಕೆಲವು ಸರ್ಕಾರಿ ಬ್ಯಾಂಕ್ಗಳು ಬಡ್ಡಿದರವನ್ನು 7ರಷ್ಟನ್ನು ವಿವಿಧ ಅವಧಿ ಎಫ್ಡಿಗೆ ಹೆಚ್ಚಿಸಿತು. ವಿಶೇಷ ದರವನ್ನು 599 ದಿನದಿಂದ 777 ದನದವರೆಗೆ ಕೂಡ ನೀಡಿತು. ಹಿರಿಯ ನಾಗರಿಕರಿಗೆ 50 ಬೆಸಿಸ್ ಪಾಯಿಂಟ್ ಅನ್ನು ಕೂಡ ಆಫರ್ ಮಾಡಿದೆ.