ನವದೆಹಲಿ:ದೇಶದ ತೆರಿಗೆ ಸಂಗ್ರಹವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆಗಸ್ಟ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) 1.43 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ.28 ರಷ್ಟು ಹೆಚ್ಚಾಗಿದೆ. ಜುಲೈ ತಿಂಗಳಿಂತಲೂ 5 ಸಾವಿರ ಕೋಟಿ ರೂಪಾಯಿ ಇಳಿದಿದೆ. ಆ ತಿಂಗಳಲ್ಲಿ ಜಿಎಸ್‌ಟಿ 1.48 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿತ್ತು. ವಿಶೇಷ ಅಂದರೆ ಈ ವರ್ಷದ ಸತತ 6 ತಿಂಗಳಿನಿಂದ ಜಿಎಸ್‌ಟಿ ಆದಾಯ 1.4 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.
ಆಗಸ್ಟ್ ತಿಂಗಳಲ್ಲಿ ಒಟ್ಟು ಸಂಗ್ರಹವಾದ ಜಿಎಸ್‌ಟಿಯಲ್ಲಿ 24,710 ಕೋಟಿ ರೂಪಾಯಿ ಸಿಜಿಎಸ್‌ಟಿ ಆಗಿದ್ದರೆ, 30,951 ಕೋಟಿ ಎಸ್‌ಜಿಎಸ್‌ಟಿಯಿಂದ ಬಂದಿದೆ. 77,782 ಕೋಟಿ ಐಜಿಎಸ್‌ಟಿಯಿಂದ ಹಣ ಹರಿದು ಬಂದಿದೆ. ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 42,067 ಕೋಟಿ ರೂಪಾಯಿ ಕೂಡ ಸೇರಿದೆ. ಜೊತೆಗೆ 10,168 ಕೋಟಿ ರೂಪಾಯಿ ಸೆಸ್ ಕೂಡ ಇದರಲ್ಲಿದೆ ಎಂದು ಅಂಕಿ ಅಂಶಗಳು ಸಾರುತ್ತವೆ.