ಫ್ರಾಂಕ್‌ಫರ್ಟ್: ಯುರೋಪಿಯನ್ ಸೆಂಟ್ರಲ್ ಬ್ಯಾಂಕ್- ಇಸಿಬಿ ತನ್ನ ಪ್ರಮುಖ ಬಡ್ಡಿದರಗಳಲ್ಲಿ ಯಥಾಸ್ಥಿತಿಯಲ್ಲೇ ಮುಂದುವರಿಸಲು ನಿರ್ಧರಿಸಿದೆ. ಪ್ರಮುಖ ಮರು ಹಣಕಾಸು ಕಾರ್ಯಾಚರಣೆಗಳು, ಕನಿಷ್ಠ ಸಾಲ ಸೌಲಭ್ಯ ಮತ್ತು ಠೇವಣಿ ಸೌಲಭ್ಯಗಳ ಮೇಲಿನ ಬಡ್ಡಿದರಗಳನ್ನು ಕ್ರಮವಾಗಿ ಶೇ 4.5 ಮತ್ತು ಶೇ 4.75 ರಷ್ಟು ಮತ್ತು ಶೇ 4ರಲ್ಲೇ ಮುಂದುವರೆಯುತ್ತದೆ ಎಂದು ಬ್ಯಾಂಕ್ ಹೇಳಿದೆ ಅಂತಾ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಹಣದುಬ್ಬರ ಪ್ರಮಾಣ ಶೇ 2ಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಹೇಳಿದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಆಡಳಿತ ಮಂಡಳಿಯು ಪ್ರಮುಖ ECB ಬಡ್ಡಿದರಗಳು ಯಥಾಸ್ಥಿತಿಯಲ್ಲಿವೆ ಎಂದು ಪರಿಗಣಿಸುತ್ತದೆ. ಇದು ಸಾಕಷ್ಟು ದೀರ್ಘಾವಧಿಯವರೆಗೆ ಹೀಗೆ ಮುಂದುವರೆಯುತ್ತದೆ ಮತ್ತು ಈ ಗುರಿಗೆ ಗಣನೀಯ ಕೊಡುಗೆ ನೀಡುತ್ತದೆ ಎಂದು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಹೇಳಿದೆ.
ಸೆಪ್ಟೆಂಬರ್‌ನಲ್ಲಿ ಮಾಡಿದ ಅಂದಾಜಿಗೆ ಹೋಲಿಸಿದರೆ, ECB ಸಿಬ್ಬಂದಿ ಈಗ ಯೂರೋಜೋನ್‌ಗೆ ಹಣದುಬ್ಬರದ ನಿರೀಕ್ಷೆಗಳನ್ನು 2023 ರಲ್ಲಿ ಶೇ 5.4 ಮತ್ತು 2024 ರಲ್ಲಿಶೇ 2.1ಕ್ಕೆ ಪರಿಷ್ಕರಿಸಲಾಗಿದೆ. ಯೂರೋಜೋನ್‌ನಲ್ಲಿ ಇತ್ತೀಚಿನ ಹಣದುಬ್ಬರ ಕುಸಿತದ ಹೊರತಾಗಿಯೂ, ಇತ್ತೀಚಿನ ತಿಂಗಳುಗಳಲ್ಲಿ ಹಣದುಬ್ಬರವು ಇಳಿಮುಖವಾಗಿದೆ. ಆದರೂ ಇದು ಇಷ್ಟರಲ್ಲೇ ತಾತ್ಕಾಲಿಕವಾಗಿ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.