ಕರ್ನಾಟಕ

karnataka

ETV Bharat / business

Employment in India: 3ನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಉದ್ಯೋಗ ನೇಮಕಾತಿ ಹೆಚ್ಚಳ

ಒಂದೆಡೆ ಜಾಗತಿಕವಾಗಿ ಉದ್ಯೋಗ ಕಡಿತಗಳು ನಡೆಯುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಉದ್ಯೋಗ ನೇಮಕಾತಿಗಳು ಏರಿಕೆಯಾಗುತ್ತಿವೆ ಎಂದು ಎಂಪ್ಲಾಯ್‌ಮೆಂಟ್ ಔಟ್‌ಲುಕ್ ಸಮೀಕ್ಷೆ ತಿಳಿಸಿದೆ.

By

Published : Jun 13, 2023, 4:34 PM IST

India shows strong hiring outlook in Q3 despite global layoffs
India shows strong hiring outlook in Q3 despite global layoffs

ನವದೆಹಲಿ : ಏಷ್ಯಾ ಪೆಸಿಫಿಕ್ ವಲಯದಲ್ಲಿ ಉದ್ಯೋಗ ನೇಮಕಾತಿಗಳಲ್ಲಿ ಏರಿಕೆ ಕಾಣುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ವರದಿ ಹೇಳಿದೆ. ಮ್ಯಾನ್‌ಪವರ್‌ಗ್ರೂಪ್ ಎಂಪ್ಲಾಯ್‌ಮೆಂಟ್ ಔಟ್‌ಲುಕ್ ಸಮೀಕ್ಷೆಯ ಪ್ರಕಾರ, ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತವು ಶೇಕಡಾ 36 ರಷ್ಟು ಹೆಚ್ಚಿನ ಧನಾತ್ಮಕ ನೇಮಕಾತಿ ದೃಷ್ಟಿಕೋನವನ್ನು ಹೊಂದಿರುವ ಅಗ್ರ ಐದು ದೇಶಗಳಲ್ಲಿ ಒಂದಾಗಿದೆ. ಉದ್ಯೋಗ ನೇಮಕಾತಿಗಳ ಜಾಗತಿಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಂತರ ಭಾರತ ಐದನೇ ಸ್ಥಾನದಲ್ಲಿದೆ.

ಜಾಗತಿಕ ಉದ್ಯೋಗ ಕಡಿತಗಳು ಮತ್ತು ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ನಡುವೆ 2023 ರ ಮೂರನೇ ತ್ರೈಮಾಸಿಕದಲ್ಲಿ ದೇಶದ ಕಾರ್ಮಿಕ ಮಾರುಕಟ್ಟೆಯು ಸಕಾರಾತ್ಮಕ ಭಾವನೆಗಳನ್ನು ತೋರಿಸುತ್ತಿದೆ ಎಂದು ವರದಿ ಹೇಳಿದೆ. ಉದ್ಯೋಗದಾತರು ತಮ್ಮ ಉದ್ಯೋಗಿಗಳ ಸಂಖ್ಯೆ (+31 ಪ್ರತಿಶತ) ಹೆಚ್ಚಾಗುವುದನ್ನು ನಿರೀಕ್ಷಿಸಿದ್ದಾರೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ (+4 ಪ್ರತಿಶತ) ನೇಮಕಾತಿಗಳು ಮತ್ತಷ್ಟು ಸುಧಾರಿಸಲಿವೆ. ಆದರೆ ವರ್ಷದಿಂದ ವರ್ಷಕ್ಕೆ ಸ್ವಲ್ಪ ದುರ್ಬಲಗೊಳ್ಳಲಿವೆ (-1 ಶೇಕಡಾ).

ಎಲ್ಲಾ ಕ್ಷೇತ್ರಗಳು ನಿವ್ವಳ ಧನಾತ್ಮಕ ನೇಮಕಾತಿ ದೃಷ್ಟಿಕೋನವನ್ನು ತೋರಿಸಿವೆ. ಆದರೂ ನೇಮಕಾತಿ ಯೋಜನೆಗಳು ಜಾಗತಿಕವಾಗಿ ವರ್ಷದಿಂದ ವರ್ಷಕ್ಕೆ ದುರ್ಬಲವಾಗಿವೆ ಎಂದು ಸಂಶೋಧನೆಗಳು ತೋರಿಸಿವೆ. ಐಟಿ ಉದ್ಯಮದಲ್ಲಿನ ವ್ಯವಹಾರಗಳು ಈ ವರ್ಷ ಮೂರನೇ ಬಾರಿಗೆ ಆಶಾದಾಯಕವಾದ ದೃಷ್ಟಿಕೋನವನ್ನು ವರದಿ ಮಾಡುವುದರೊಂದಿಗೆ ಡಿಜಿಟಲ್ ಕ್ಷೇತ್ರದಲ್ಲಿನ ಉದ್ಯೋಗಗಳು ಹೆಚ್ಚಾಗುವುದು ಮುಂದುವರೆದಿದೆ.

ಸುಮಾರು 39,000 ಉದ್ಯೋಗದಾತರನ್ನು ಒಳಗೊಂಡ ಇತ್ತೀಚಿನ ಸಮೀಕ್ಷೆಯ ಪ್ರಕಾರ 41 ದೇಶಗಳ ಪೈಕಿ 29 ದೇಶಗಳಲ್ಲಿ ಹಿಂದಿನ ತ್ರೈಮಾಸಿಕಕ್ಕಿಂತ ಹೆಚ್ಚಿನ ನೇಮಕಾತಿಗಳು ನಡೆಯಲಿವೆ ಎಂದು ತಿಳಿದು ಬಂದಿದೆ. ಪ್ರಪಂಚದಾದ್ಯಂತದ ಉದ್ಯೋಗದಾತರು 2023 ರ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನಿರೀಕ್ಷಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಉತ್ತರ ಅಮೆರಿಕ (+35 ಶೇಕಡಾ), ಇದರ ನಂತರ ಏಷ್ಯಾ ಪೆಸಿಫಿಕ್ (+31 ಶೇಕಡಾ), ಮಧ್ಯ ಹಾಗೂ ದಕ್ಷಿಣ ಅಮೆರಿಕಗಳಲ್ಲಿ (+29 ಶೇಕಡಾ) ಹೀಗೆ ವಿಶ್ವದ ಹಲವಾರು ಪ್ರದೇಶಗಳಾದ್ಯಂತ ಉದ್ಯೋಗದಾತರು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಉದ್ಯೋಗದಾತರು ಮುಂದಿನ ತ್ರೈಮಾಸಿಕದಲ್ಲಿ ಹೆಚ್ಚು ಅಳೆದು ತೂಗಿ ನೇಮಕಾತಿಗಳನ್ನು ಮಾಡಿಕೊಳ್ಳುವ ಯೋಜನೆ ಹೊಂದಿದ್ದಾರೆ ಎಂಬುದನ್ನು ಡೇಟಾ ತೋರಿಸಿದೆ. ಪೂರೈಕೆ ನಿರ್ಬಂಧಗಳಿಂದ ಹಿಡಿದು ಅಸಮ ಗ್ರಾಹಕ ವಿಶ್ವಾಸ ಮತ್ತು ಏರುತ್ತಿರುವ ಹಣದುಬ್ಬರದವರೆಗೆ ಸ್ಥಳೀಯ ಮತ್ತು ಮ್ಯಾಕ್ರೋ ಮಟ್ಟದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿಗಳು ನಡೆಯಲಿವೆ ಎಂದು ಮ್ಯಾನ್‌ಪವರ್‌ಗ್ರೂಪ್ ಅಧ್ಯಕ್ಷ ಮತ್ತು ಸಿಇಒ ಜೋನಾಸ್ ಪ್ರಿಸಿಂಗ್ ಹೇಳಿದರು.

ಉದ್ಯಮ ಜಗತ್ತಿನಲ್ಲಿ ಸಾಮೂಹಿಕ ವಜಾಗೊಳಿಸುವಿಕೆಯು ಕಷ್ಟಕರವಾದ ಸಂಗತಿಯಾದರೂ ಸಾಮಾನ್ಯ ಘಟನೆಯಾಗಿದೆ. ಕನಿಷ್ಠ 50 ಉದ್ಯೋಗಿಗಳನ್ನು 30 ದಿನಗಳೊಳಗೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ವಜಾಗೊಳಿಸಿದಾಗ ಅಥವಾ ಕಂಪನಿಯ ಉದ್ಯೋಗಿಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದಾಗ ಅಥವಾ 500 ಉದ್ಯೋಗಿಗಳನ್ನು 30 ದಿನಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ವಜಾಗೊಳಿಸಿದಾಗ ಅದನ್ನು ಸಾಮೂಹಿಕ ವಜಾ ಅಥವಾ mass layoff ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ : ತೈಲ ಪೂರೈಕೆ ಬೆನ್ನಲ್ಲೇ ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಗೆ ಮುಂದಾದ ರಷ್ಯಾ

ABOUT THE AUTHOR

...view details