ನವದೆಹಲಿ : ಮೂರು ವರ್ಷಗಳಲ್ಲಿ ಶೇಕಡಾ 10 ರಷ್ಟು ಮಾರುಕಟ್ಟೆ ಪಾಲನ್ನು ಪಡೆಯುವ ಗುರಿಯೊಂದಿಗೆ 2024 ರ ಅಂತ್ಯದ ವೇಳೆಗೆ ಭಾರತದ ವೇರೆಬಲ್ ಮಾರ್ಕೆಟ್ನಲ್ಲಿ 200 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿರುವುದಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಎಂಡೆಫೊ ಬುಧವಾರ ಹೇಳಿದೆ. ಆಶ್ಟೆಲ್ ಗ್ರೂಪ್ ಆಫ್ ಕಂಪನಿಗಳ ಅಡಿ ದುಬೈ ಮೂಲದ ಬ್ರ್ಯಾಂಡ್ ಎಂಡೆಫೊ ಒಟ್ಟು 6 ವಿಭಾಗಗಳಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ.
ಸ್ಮಾರ್ಟ್ ವಾಚ್‌ಗಳು, ಸೌಂಡ್ ಬಾರ್‌ಗಳು, ಪೋರ್ಟಬಲ್ ಸ್ಪೀಕರ್‌ಗಳು, TWS (ಟ್ರೂ ವೈರ್ ಲೆಸ್ ಸ್ಟೀರಿಯೋ), ಬೂಮ್‌ಬಾಕ್ಸ್ ಮತ್ತು ಪಾರ್ಟಿ ಸ್ಪೀಕರ್‌ಗಳು ಇದರಲ್ಲಿ ಸೇರಿವೆ. ಕಂಪನಿಯ ಉತ್ಪನ್ನಗಳನ್ನು 2,000 ಕ್ಕೂ ಹೆಚ್ಚು ದೊಡ್ಡ ರಿಟೇಲ್ ಮಳಿಗೆಗಳು, ಅಮೆಜಾನ್ ಮತ್ತು ಕಂಪನಿಯ ಸ್ವಂತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಖರೀದಿಸಬಹುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
"ಭಾರತದಲ್ಲಿ 200 ಕೋಟಿ ರೂಪಾಯಿಗಳ ಹೂಡಿಕೆಯು ವಿಸ್ತರಣಾ ಯೋಜನೆಗಳು ಧ್ವನಿ ತಂತ್ರಜ್ಞಾನ, ಹೊಸ ವಿಭಾಗಗಳು/ಉತ್ಪನ್ನಗಳನ್ನು ಪ್ರಾರಂಭಿಸುವುದು, ಮಾರ್ಕೆಟಿಂಗ್ ಮತ್ತು ಹೆಚ್ಚಿನವುಗಳ ಕಡೆಗೆ ಗಮನ ಕೇಂದ್ರೀಕರಿಸಲಿದೆ" ಎಂದು ಎಂಡೆಫೊದ ಸಿಇಒ ಅನೀಫ್ ಟಾಸ್ ಹೇಳಿದ್ದಾರೆ. ಏಳಕ್ಕೂ ಹೆಚ್ಚು ದೇಶಗಳಲ್ಲಿ ಗಮನಾರ್ಹ ಮಾರುಕಟ್ಟೆ ಪಾಲನ್ನು ವಶಪಡಿಸಿಕೊಂಡ ನಂತರ, ಎಂಡೆಫೊ ತನ್ನ ಉತ್ಪನ್ನವನ್ನು ಭಾರತಕ್ಕೆ ತರುತ್ತಿದೆ. ಮೊಬೈಲ್ ಮತ್ತು ಐಟಿಯಲ್ಲಿ ತನ್ನ ಪ್ರಮುಖ ಪರಿಣತಿಯನ್ನು ಪೂರೈಸುವ ಇತರ ಕ್ಷೇತ್ರಗಳಲ್ಲಿ ಗಣನೀಯ ಹೂಡಿಕೆ ಮಾಡಲು ಕಂಪನಿ ಯೋಜಿಸಿದೆ.
"ನಾವು ಈಗಾಗಲೇ ದಕ್ಷಿಣ ಭಾರತದಲ್ಲಿ ಗಮನಾರ್ಹ ಮಾರುಕಟ್ಟೆ ಅಸ್ತಿತ್ವ ಹೊಂದಿದ್ದೇವೆ. ಮತ್ತು ಈಗ ಈ ಉತ್ಪನ್ನಗಳ ಬಿಡುಗಡೆಯೊಂದಿಗೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳ ವಿವಿಧ ರಾಜ್ಯಗಳಿಗೆ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ಟಾಸ್ ಹೇಳಿದರು. 2003 ರಲ್ಲಿ ಸ್ಥಾಪನೆಯಾದ ಅಷ್ಟೆಲ್ 24 ದೇಶಗಳಲ್ಲಿ ವಹಿವಾಟು ಹೊಂದಿದೆ. ಭಾರತೀಯ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಉತ್ಪನ್ನಗಳನ್ನು ನೀಡುವುದು ತನ್ನ ಉದ್ದೇಶವಾಗಿದೆ ಎಂದು ಕಂಪನಿ ಹೇಳಿದೆ.
ಗ್ರಾಹಕ ಎಲೆಕ್ಟ್ರಾನಿಕ್ಸ್ (CE) ಎಂಬುದು ದೈನಂದಿನ ಮತ್ತು ವಾಣಿಜ್ಯೇತರ, ವೃತ್ತಿಪರ ಉದ್ದೇಶಗಳಿಗಾಗಿ ಬಳಕೆದಾರರು ಅಥವಾ ಗ್ರಾಹಕರು ಖರೀದಿಸಲು ಮತ್ತು ಬಳಸಲು ವಿನ್ಯಾಸಗೊಳಿಸಲಾದ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಸೂಚಿಸುತ್ತದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಇದು ಎಲೆಕ್ಟ್ರಾನಿಕ್, ಕಂಪ್ಯೂಟಿಂಗ್ ಮತ್ತು ಸಂವಹನ ಸಾಧನಗಳ ಅತ್ಯಂತ ಸಾಮಾನ್ಯವಾಗಿ ಬಳಸುವ ರೂಪವಾಗಿದೆ.
ಗ್ರಾಹಕ ಎಲೆಕ್ಟ್ರಾನಿಕ್ಸ್ ಮನೆ ಅಥವಾ ನಿರ್ದಿಷ್ಟ ವ್ಯಕ್ತಿಗೆ ಒಂದು ಅಥವಾ ಹೆಚ್ಚಿನ ಕಾರ್ಯಗಳನ್ನು ಒದಗಿಸುವ ವಿಶಾಲವಾದ ಎಲೆಕ್ಟ್ರಾನಿಕ್ ಸಾಧನಗಳನ್ನು ಒಳಗೊಂಡಿದೆ. ಈ ಪದವು ಆರಂಭದಲ್ಲಿ ಮನೆಯೊಳಗೆ ನಿರ್ದಿಷ್ಟವಾಗಿ ಸ್ಥಾಪಿಸಲಾದ ಅಥವಾ ಬಳಸುವ ಎಲೆಕ್ಟ್ರಾನಿಕ್ ಸಾಧನಗಳನ್ನು ಉಲ್ಲೇಖಿಸುತ್ತದೆ. ಆದಾಗ್ಯೂ, ಇದರಲ್ಲಿ ಈಗ ಮೊಬೈಲ್ ಮತ್ತು ಕಂಪ್ಯೂಟಿಂಗ್ ಸಾಧನಗಳನ್ನು ಸೇರಿಸಲಾಗಿದೆ.
ಇದನ್ನೂ ಓದಿ : Crude oil: ಕಚ್ಚಾ ತೈಲ ಬೇಡಿಕೆ 2028ಕ್ಕೆ ಗಮನಾರ್ಹ ಕುಸಿತ- IEA ವರದಿ