ಸೂರತ್(ಗುಜರಾತ್): ಆರ್‌ಬಿಐ 2000 ರೂಪಾಯಿ ನೋಟುಗಳ ಚಲಾವಣೆಯನ್ನು ಹಿಂಪಡೆದಿದೆ. ಇದರಿಂದ ಜನರು ತಮ್ಮ ಬಳಿ ಇರುವ 2 ಸಾವಿರ ರೂ. ನೋಟುಗಳನ್ನು ಹಲವು ರೀತಿಯಲ್ಲಿ ಖರ್ಚು ಮಾಡಿದ್ದಾರೆ ಮತ್ತು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸೂರತ್‌ನ ಪ್ರಾದೇಶಿಕ ಸಾರಿಗೆ ಕಚೇರಿಗೆ ಐಷಾರಾಮಿ ಬಸ್ ನಿರ್ವಾಹಕರೊಬ್ಬರು 2 ಸಾವಿರ ನೋಟುಗಳೊಂದಿಗೆ ತಮ್ಮ ಬಾಕಿ ತೆರಿಗೆಯನ್ನು ಪಾವತಿಸಿದ್ದಾರೆ. 6 ಲಕ್ಷ ತೆರಿಗೆಯಲ್ಲಿ 4 ಲಕ್ಷವನ್ನು 2 ರೂಪಾಯಿ ನೋಟುಗಳೊಂದಿಗೆ ಬಸ್ ನಿರ್ವಾಹಕ ಪಾವತಿಸಿದ್ದು ಈಗ ಎಲ್ಲೆಡೆ ದೊಡ್ಡ ಸುದ್ದಿಯಾಗಿದೆ.
ಉಳಿದ 2 ಲಕ್ಷ ರೂಪಾಯಿಗಳನ್ನು 100 ಮತ್ತು 500 ನೋಟುಗಳೊಂದಿಗೆ ಪಾವತಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಎರಡು ಸಾವಿರ ನೋಟುಗಳನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ಸಾವಿರ ನೋಟುಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕೆಲವು ದಿನಗಳ ಹಿಂದೆ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ರಾಜ್‌ಕೋಟ್‌ನ ಬಸ್ ನಿರ್ವಾಹಕ ಆರ್‌ಟಿಒ ಅಧಿಕಾರಿಗಳ ಕೈ ಸಿಕ್ಕಿಬಿದ್ದರು. ನಂತರ ಬಸ್ಅನ್ನು ಆರ್‌ಟಿಒ ಕಚೇರಿಗೆ ತರಲಾಗಿತ್ತು. ಆರ್‌ಬಿಐ 2 ಸಾವಿರ ನೋಟನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿದ ಮರುದಿನವೇ ಬಸ್ ನಿರ್ವಾಹಕರು ಒಂದೇ ಬಾರಿಗೆ 6 ಲಕ್ಷ ರೂ. ಬಾಕಿ ತೆರಿಗೆಯನ್ನು ಪಾವತಿಸಿದ್ದಾರೆ.
ಸದ್ಯ ಜನರು ಶಾಪಿಂಗ್‌ಗಾಗಿ 2 ಸಾವಿರ ನೋಟುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಸೂಪರ್ ಸ್ಟೋರ್‌ಗಳು ಮತ್ತು ಕಿರಾಣಿ ಅಂಗಡಿಗಳ ವಸ್ತುಗಳನ್ನು ಖರೀದಿಸಲು ಜನರು ಈಗ 2 ಸಾವಿರ ನೋಟುಗಳನ್ನು ತರುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಪೆಟ್ರೋಲ್ ಬಂಕ್ಗಳಲ್ಲಿ ಇದೇ ಪರಿಸ್ಥಿತಿ ಇದೆ ಮತ್ತು ಆನ್‌ಲೈನ್ ಪಾವತಿ ಮಾಡುವ ಜನರು ಈಗ 2 ಸಾವಿರ ನೋಟುಗಳ ಮೂಲಕ ವಹಿವಾಟು ನಡೆಸುತ್ತಿದ್ದಾರೆ. 2 ಸಾವಿರ ನೋಟು ಬಂದ್ ಆದ ಪರಿಣಾಮ ಸೂರತ್ ರೈಲು ನಿಲ್ದಾಣದ ರಿಸರ್ವೇಶನ್ ಟಿಕೆಟ್ ಕೌಂಟರ್ ನಲ್ಲಿ ಹೆಚ್ಚಾಗಿ ಜನರು ನಗದು ಮೂಲಕ ಪಾವತಿ ಮಾಡಿದ್ದಾರೆ.