ನವದೆಹಲಿ: ಆ್ಯಪಲ್ ಭಾರತದಲ್ಲಿನ ತನ್ನ ಆ್ಯಪ್ ಸ್ಟೋರ್ನಿಂದ ಬಿನಾನ್ಸ್ ಮತ್ತು ಕುಕಾಯಿನ್ನಂಥ ಕೆಲ ಉನ್ನತ ಜಾಗತಿಕ ಕ್ರಿಪ್ಟೋಕರೆನ್ಸಿ ವಿನಿಮಯ ಆ್ಯಪ್ಗಳನ್ನು ತೆಗೆದುಹಾಕಿದೆ. ಮನಿ ಲಾಂಡರಿಂಗ್ ಕಾನೂನುಗಳನ್ನು ಅನುಸರಿಸದ ಮತ್ತು ದೇಶದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದ ಮೇಲೆ ಈ ಕ್ರಿಪ್ಟೋ ಎಕ್ಸ್ಚೇಂಜ್ಗಳಿಗೆ ಕೇಂದ್ರ ಸರ್ಕಾರ ಶೋಕಾಸ್ ನೋಟಿಸ್ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಆ್ಯಪಲ್ ಇವುಗಳನ್ನು ಆ್ಯಪ್ ಸ್ಟೋರ್ನಿಂದ ತೆಗೆದುಹಾಕಿದೆ.
ಹಣಕಾಸು ಸಚಿವಾಲಯದ ಅಡಿಯಲ್ಲಿನ ಹಣಕಾಸು ಗುಪ್ತಚರ ಘಟಕವು ಕಳೆದ ತಿಂಗಳು ಮನಿ ಲಾಂಡರಿಂಗ್ ಕಾನೂನುಗಳನ್ನು ಅನುಸರಿಸದೆ ದೇಶದಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಬಿನಾನ್ಸ್ ಸೇರಿದಂತೆ ಒಂಬತ್ತು ವಿದೇಶದ ವರ್ಚುವಲ್ ಡಿಜಿಟಲ್ ಆಸ್ತಿ ಸೇವಾ ಪೂರೈಕೆದಾರರಿಗೆ ಶೋಕಾಸ್ ನೋಟಿಸ್ ನೀಡಿದೆ.
ಆ್ಯಪಲ್ ತನ್ನ ಆ್ಯಪ್ ಸ್ಟೋರ್ನಿಂದ ಈ ಕ್ರಿಪ್ಟೋ ಎಕ್ಸ್ಚೇಂಜ್ಗಳನ್ನು ತೆಗೆದು ಹಾಕಿದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ್ಯಪಲ್ ಸ್ಟೋರ್ನಿಂದ ಈ ಎಕ್ಸ್ಚೇಂಜ್ಗಳು ಹೊರಹೋದರೂ ಇವು ಈಗಲೂ ಗೂಗಲ್ನ ಪ್ಲೇ ಸ್ಟೋರ್ನಲ್ಲಿ ಲಭ್ಯವಿವೆ.
ದೇಶದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಕ್ರಿಪ್ಟೋ ಕಂಪನಿಗಳ ಯುಆರ್ಎಲ್ಗಳನ್ನು ನಿರ್ಬಂಧಿಸುವಂತೆ ಕಳೆದ ತಿಂಗಳು ಹಣಕಾಸು ಸಚಿವಾಲಯ ಐಟಿ ಸಚಿವಾಲಯವನ್ನು ಕೇಳಿತ್ತು. ಮನಿ ಲಾಂಡರಿಂಗ್ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪೊಪ್ಪಿಕೊಂಡ ನಂತರ ಬಿನಾನ್ಸ್ ಈಗಾಗಲೇ ಯುಎಸ್ನಲ್ಲಿ ತನಿಖೆ ಎದುರಿಸುತ್ತಿದೆ.