ಕರ್ನಾಟಕ

karnataka

ETV Bharat / business

ಮಾಧುರಿ ದೀಕ್ಷಿತ್​ರೊಂದಿಗೆ ವಡಾ ಪಾವ್ ಸವಿದ ಆ್ಯಪಲ್ ಸಿಇಒ ಟಿಮ್ ಕುಕ್

ಆ್ಯಪಲ್ ಸಿಇಒ ಟಿಮ್ ಕುಕ್ ಆ್ಯಪಲ್ ಸ್ಟೋರ್ ಓಪನಿಂಗ್​ಗಾಗಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಮುಂಬೈನಲ್ಲಿರುವ ಅವರು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ್ದಾರೆ.

Tim Cook relishes vada pav with 'Dhak Dhak' sensation Madhuri
Tim Cook relishes vada pav with 'Dhak Dhak' sensation Madhuri

By

Published : Apr 18, 2023, 12:24 PM IST

ಮುಂಬೈ :ಆ್ಯಪಲ್​ ಕಂಪನಿಯ ಸಿಇಒ ಟಿಮ್ ಕುಕ್ ಸದ್ಯ ಭಾರತ ಪ್ರವಾಸದಲ್ಲಿದ್ದಾರೆ. ಭಾರತದ ಪ್ರಥಮ ಆ್ಯಪಲ್ ರಿಟೇಲ್ ಸ್ಟೋರ್ ಉದ್ಘಾಟನಾ ಸಮಾರಂಭದ ನಿಮಿತ್ತ ಅವರು ಭಾರತಕ್ಕೆ ಆಗಮಿಸಿದ್ದಾರೆ. ಸದ್ಯ ಅವರು ಬಾಲಿವುಡ್​ ತಾರೆ ಮಾಧುರಿ ದೀಕ್ಷಿತ್ ಅವರೊಂದಿಗೆ ಮುಂಬೈನ ಫೇಮಸ್​ ಖಾದ್ಯ ವಡಾ ಪಾವ್ ರುಚಿ ನೋಡಿದ್ದಾರೆ. ಮಾಧುರಿ ದೀಕ್ಷಿತ್ ಅವರೊಂದಿಗೆ ವಡಾ ಪಾವ್​ ಸವಿಯುತ್ತಿರುವ ಚಿತ್ರವೊಂದನ್ನು ಟ್ವೀಟ್ ಮಾಡಿರುವ ಟಿಮ್, ಜೀವನದಲ್ಲಿ ಮೊದಲ ಬಾರಿಗೆ ನನಗೆ ವಡಾ ಪಾವ್ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ದೀಕ್ಷಿತ್​ರಿಗೆ ಹೇಳಿದ್ದಾರೆ. ವಡಾಪಾವ್ ತುಂಬಾ ರುಚಿಯಾಗಿತ್ತು ಎಂದು ಅವರು ಸಂತಸ ವ್ಯಕ್ತ ಪಡಿಸಿದ್ದಾರೆ.

ಇದಕ್ಕೂ ಮುನ್ನ ದೀಕ್ಷಿತ್​ ತಾವು ಟಿಮ್ ಕುಕ್ ಅವರೊಂದಿಗೆ ವಡಾಪಾವ್ ಸವಿದ ಚಿತ್ರವೊಂದನ್ನು ಶೇರ್ ಮಾಡಿ, ಮುಂಬೈಗೆ ಸ್ವಾಗತ ಕೋರಲು ವಡಾ ಪಾವ್​ಗಿಂತ ಬೆಸ್ಟ್​ ಇನ್ನಾವುದೂ ಇರಲಾರದು ಎಂದು ಬರೆದಿದ್ದರು. ಇದಕ್ಕೂ ಮುನ್ನ ಟಿಮ್ ಕುಕ್, ಏಷ್ಯಾ ಹಾಗೂ ಭಾರತದ ಅತಿ ಸಿರಿವಂತ ಕುಟುಂಬವಾದ ಅಂಬಾನಿ ಕುಟುಂಬದ ಬಂಗಲೆಗೆ ಬೇಟಿ ನೀಡಿದ್ದರು. ಅಂಬಾನಿಯ ಆ್ಯಂಟಿಲಿಯಾ ಮನೆಗೆ ಭೇಟಿ ನೀಡಿದ ಕುಕ್, ರಿಲಯನ್ಸ್​ ಜಿಯೊ ಚೇರಮನ್ ಆಕಾಶ್ ಅಂಬಾನಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಮೀಟಿಂಗ್ ನಡೆಯಿತು ಎಂದು ಹೇಳಲಾಗಿದೆ.

ಮುಂಬೈನಲ್ಲಿ ಆ್ಯಪಲ್ ಸ್ಟೋರ್​ ಆರಂಭವಾಗುತ್ತಿರುವ ಸಂಭ್ರಮಾಚರಣೆಗಾಗಿ ಟಿಮ್ ಕುಕ್ ಮುಂಬೈನ ಗಣ್ಯಾತಿಗಣ್ಯರಿಗಾಗಿ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್ ಸೆಲೆಬ್ರಿಟಿಗಳಾದ ಮಾಧುರಿ ದೀಕ್ಷಿತ್, ರವೀನಾ ಟಂಡನ್, ಮೌನಿ ರಾಯ್, ನೇಹಾ ಧೂಪಿಯಾ, ಶಿಲ್ಪಾ ಶೆಟ್ಟಿ, ಸೋನಾಲಿ ಬೇಂದ್ರೆ, ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ಶಾಹಿದ್ ಕಪೂರ್ ಸೇರಿದಂತೆ ಹಲವಾರು ಗಣ್ಯರು ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಗುರುವಾರ ಏಪ್ರಿಲ್ 20 ರಂದು ಕುಕ್ ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಅವತ್ತು ಅಲ್ಲಿಯೂ ಹೊಸ ಆ್ಯಪಲ್ ಸ್ಟೋರ್ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗಿಯಾಗಲಿದ್ದಾರೆ. ದೆಹಲಿಯಲ್ಲಿ ಆ್ಯಪಲ್‌ನ ಮೊದಲ ರಿಟೇಲ್ ಸ್ಟೋರ್ ಏಪ್ರಿಲ್ 20 ರಂದು ಬೆಳಗ್ಗೆ 10 ಗಂಟೆಗೆ ಗ್ರಾಹಕರಿಗೆ ಮುಕ್ತವಾಗಲಿದೆ. ದೆಹಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿನ ಮಳಿಗೆ ಸುಮಾರು 10,000 ಚದರ ಅಡಿಗಳಷ್ಟು ವಿಶಾಲವಾಗಿದೆ. ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಳಿಗೆಯನ್ನು ನಿರ್ಮಿಸಲಾಗಿದೆ. ಆ್ಯಪಲ್ ಉತ್ಪನ್ನಗಳು ಮತ್ತು ಅವುಗಳ ಬಳಕೆಯ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ ನೀಡಲು ಎಂಜಿನಿಯರ್‌ಗಳು ಮತ್ತು ತಂತ್ರಜ್ಞಾನ ತಜ್ಞರನ್ನು ಮಳಿಗೆ ಹೊಂದಿರುತ್ತದೆ.

ಮುಂಬೈನ BKC ಯಲ್ಲಿನ ಆ್ಯಪಲ್ ಸ್ಟೋರ್​ನಂತೆ ದೆಹಲಿಯ ಸ್ಟೋರ್​ ಸಹ ಇತ್ತೀಚಿನ iPhone, Mac, iPad, AirPods, Apple Watch, ಮತ್ತು Apple TV ಲೈನ್‌ಅಪ್‌ಗಳು ಮತ್ತು ಏರ್‌ಟ್ಯಾಗ್‌ನಂತಹ ಪರಿಕರಗಳನ್ನು ಒಳಗೊಂಡಿರುವ ಡಿಸ್‌ಪ್ಲೇ ಗಳನ್ನು ಪ್ರದರ್ಶಿಸಲಿದೆ. ದೆಹಲಿ ಭೇಟಿ ಸಂದರ್ಭದಲ್ಲಿ ಟಿಮ್ ಕುಕ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಆ್ಯಪಲ್ ಗ್ಲಾಸ್​ 2026 ಅಥವಾ 2027ರ ವೇಳೆಗೆ ಬಿಡುಗಡೆ ಸಾಧ್ಯತೆ

ABOUT THE AUTHOR

...view details