ಕರ್ನಾಟಕ

karnataka

ETV Bharat / business

5ಜಿ ವೈರ್​ಲೆಸ್​ ಸಿಗ್ನಲ್: ಈ ವಾರ ವಿಮಾನಯಾನದಲ್ಲಿ ಸಾಕಷ್ಟು ಅಡೆತಡೆ ಸಾಧ್ಯತೆ - ವಿಮಾನ ಪ್ರಯಾಣಿಕರು ತಮ್ಮ ಪ್ರಯಾಣ

ಪ್ರಮುಖ ವಿಮಾನ ನಿಲ್ದಾಣಗಳ ಬಳಿಕ 5ಜಿ ಸಿಸ್ಟಂಗಳ ಅಳವಡಿಕೆ ನಡೆಯುತ್ತಿದ್ದು, ಈ ಹಿನ್ನೆಲೆ 5ಜಿ ಸಿಗ್ನಲ್​ಗಳು ಏರ್​ಕ್ರಾಫ್ಟ್​​ ಸಾಧನ ವಿಶೇಷವಾಗಿ ರೇಡಿಯೋ ಕಿರಣಗಳಿಗೆ ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ

As if air travel isn't hard enough, 5G wireless signals could disrupt flights starting this weekend
As if air travel isn't hard enough, 5G wireless signals could disrupt flights starting this weekend

By

Published : Jul 1, 2023, 4:41 PM IST

ಹೈದರಾಬಾದ್: ಹವಾಮಾನ ವೈಪರೀತ್ಯ ಸೇರಿದಂತೆ ಪ್ರಮುಖ ಕಾರಣಗಳಿಂದಾಗಿ ಈ ವಾರದಲ್ಲಿ ಏರ್​ಲೈನ್​ ಪ್ರಯಾಣಿಕರು ಸಾಕಷ್ಟು ತೊಂದರೆಗೆ ಒಳಗಾದವರು. ಈ ವಾರ ಹೊಸ ಕಾರಣದಿಂದ ಮತ್ತಷ್ಟು ವಿಮಾನ ಪ್ರಯಾಣಿಕರು ತಮ್ಮ ಪ್ರಯಾಣದಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಕಾರಣ 5ಜಿ. ಪ್ರಮುಖ ವಿಮಾನ ನಿಲ್ದಾಣಗಳ ಬಳಿಕ 5ಜಿ ಸಿಸ್ಟಂಗಳ ಅಳವಡಳಿಕೆ ನಡೆಯುತ್ತಿದ್ದು, ಈ ಹಿನ್ನೆಲೆ 5ಜಿ ಸಿಗ್ನಲ್​ಗಳು ಏರ್​ಕ್ರಾಫ್ಟ್​​ ಸಾಧನ ವಿಶೇಷವಾಗಿ ರೇಡಿಯೋ ಕಿರಣಗಳಿಗೆ ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ.

ಟೆಲಿಕಾಂ ಕಂಪನಿಗಳು ಹೊಸ ಸೇವೆ ಶುರುಮಾಡಿದಾಗ ಕಳೆದ ವರ್ಷ ನೆಲದಡಿ ಈ ಕಾರ್ಯಾಚರಣೆ ವಿಫಲವಾಯಿತು. ಬಳಿಕ ಅವರು ಬ್ಯುಸಿ ಏರ್​ಪೋರ್ಟ್​​ಗಳ ಸುತ್ತಮುತ್ತದಲ್ಲಿ ಸಿಗ್ನಲ್​ ಮಿತಿಯಲ್ಲೇ ಇದರ ಅಳವಡಿಕೆಗೆ ಅನುಮತಿ ನೀಡಲಾಯಿತು. ಇದರಿಂದ ವಿಮಾನ ಯಾನ ಸಂಸ್ಥೆಗಳಿಗೆ ತಮ್ಮ ವಿಮಾನಗಳ ಮೇಲ್ದೆರ್ಜೆಗೆರಿಸಲು ಮತ್ತೊಂದು ವರ್ಷ ಬೇಕಾಗಿದೆ. ಈ ಕುರಿತು ಮಾತನಾಡಿರುವ ರಾಷ್ಟ್ರದ ದೊಡ್ಡಮಟ್ಟದ ಪೈಲೆಟ್​ ಯುನಿಯನ್​, 5ಜಿ ಪರಿಣಾಮ ನಿಭಾಯಿಸಲು ಸಿಬ್ಬಂದಿ ಸಜ್ಜಾಗಿದ್ದಾರೆ ಎಂದ ಅವರು, ವೈರ್​ಲೆಸ್​​ ಲೈಸ್​ ಲೈಸೆನ್ಸ್​ಗೆ ಅನುಮತಿ ನೀಡಿರುವುದಕ್ಕೆ ಟೀಕಿಸಿದ್ದಾರೆ. ಇದು ವಿಮಾನಯಾನ ಸಂಸ್ಥೆಗಳಿಗೆ ಅನಗತ್ಯ ಅಪಾಯವಾಗಿದೆ ಎಂದಿದ್ದಾರೆ.

ರೇಡಿಯೋ ಹಸ್ತಕ್ಷೇಪದಿಂದ ರಕ್ಷಿಸಲು ರಾಷ್ಟ್ರದ ಫ್ಲೀಟ್‌ನ ಒಂದು ಸಣ್ಣ ಭಾಗವನ್ನು ನವೀಕರಿಸದ ಕಾರಣ ವಿಮಾನಯಾನ ಸೇವೆಗೆ ಅಡ್ಡಿಪಡಿಸಬಹುದು. ಆದರೆ, ಅಮೆರಿಕದ ಏರ್​ಲೈನ್​ಗಳು ಇದಕ್ಕೆ ಸಿದ್ಧವಾಗಿದೆ. ಅಮೆರಿಕ, ಸೌತ್​ವೆಸ್ಟ್​​, ಅಲಸ್ಕಾ, ಯುನೆಟೆಡ್​​ಗಳ ವಿಮಾನಯಾನಗಳು ಎತ್ತದ ಅಳತೆ ಸಾಧನ ರೆಡಿಯೋ ಅಲ್ಟಿಮೀಟರ್​​ ಹೊಂದಿದೆ. ಇದು 5ಜಿ ಅಡ್ಡಿ ವಿರುದ್ಧ ತಡೆಯುತ್ತದೆ.

ಡೆಲ್ಟಾ ಏರ್​ಲೈನ್​ಗೆ ವಿನಾಯಿತಿ ನೀಡಲಾಗಿದೆ. ಡೆಲ್ಟಾ, 190 ವಿಮಾನ ಡೆಲ್ಟಾದ ವಿಮಾನಗಳು ಬಹುತೇಕ ಸಣ್ಣದಿವೆ. ಅವು ಅಲ್ಟಿಮೀಟರ್​ಗೆ ಉನ್ನತಿಕರಿಸಬೇಕಿದೆ. ಕಾರಣ ಇದು ಅತಿ ವೇಗದಲ್ಲಿ ಸಂಚಾರ ಸಾಧ್ಯವಿಲ್ಲ. ಈ ಹಿನ್ನೆಲೆ ಈ ಏರ್​ಲೈನ್ಸ್​ ವಿಮಾನ ರದ್ದುಮಾಡುವ ಸಂಭವ ಇಲ್ಲ ಎಂದು ಡೆಲ್ಟಾ ತಿಳಿಸಿದೆ.

ಜೆಟ್​ ಬ್ಲೂ ಈ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ರೆಟ್ರೋಫಿಟ್​ ನ 17 ಸಣ್ಣ ಏರ್​ಬಸ್​​ ಜೆಟ್ಸ್​ಗಳಿಗೂ ಈ ವಿನಾಯಿತಿ ನೀಡಲಾಗಿದೆ. ಇದಕ್ಕೆ ಸಿಮೀತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದಿ ವಾಲ್​​ಸ್ಟ್ರೀಟ್​ ಜರ್ನಲ್​ ತಿಳಿಸಿದೆ.

ರೆಡಿಯೋ ಸಿಗ್ನಲ್​ ಸಮಸ್ಯೆ ಹಿನ್ನಲೆ ರೆಟ್ರೋಫಿಟ್ಟಿಂಗ್‌ಗಾಗಿ ಕಾಯುತ್ತಿರುವ ವಿಮಾನಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಸಿಲುಕಿಸುವುದನ್ನು ತಪ್ಪಿಸಲು ತಮ್ಮ ವೇಳಾಪಟ್ಟಿ ಸರಿಹೊಂದಿಸಬೇಕು ಎಂದು ಸೂಚಿಸಲಾಗಿದೆ. ರೇಡಿಯೋ ಆಲ್ಟಿಮೀಟರ್‌ಗಳನ್ನು ಅಪ್‌ಗ್ರೇಡ್ ಮಾಡುವ ಮಾನದಂಡಗಳನ್ನು ಅನುಮೋದಿಸಲು ಎಫ್​ಎಎ ವಿಳಂಬವಾಗಿದೆ.

ವಿಮಾನಯಾನ ಸಂಸ್ಥೆಗಳ ಹಿತಾಸಕ್ತಿಯನ್ನು ಗಣನೆಗೆ ಪಡೆಯದೇ ಎಫ್​ಸಿಸಿ 5ಜಿ ಲೈಸೆನ್ಸ್​ ಅನ್ನು ನೀಡಿದೆ ಎಂದು ಡೆಲ್ಟಾ ಪೈಲೆಟ್​ ಮತ್ತು ಏರ್​ಲೈನ್​ ಪೈಲೆಟ್​ ಅಸೋಸಿಯೇಷನ್​ ಅಧ್ಯಯಕ್ಷ ಜಸೊನ್​ ಅಂಬ್ರೊಸಿ ತಿಳಿಸಿದ್ದಾರೆ. ಸುರಕ್ಷಿತ ವಿಮಾನಯಾನ ವ್ಯವಸ್ಥೆ ಇದರಿಂದ ಅಪಾಯಕ್ಕೆ ತಲುಪಿದೆ. ಅಂತಿಮವಾಗಿ 5ಜಿ ಪರಿಣಾಮವನ್ನು ನಾವು ಎದುರಿಸುವಂತೆ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: Tech Employees laid off: 2.12 ಲಕ್ಷ ಟೆಕ್ಕಿಗಳು ಉದ್ಯೋಗದಿಂದ ವಜಾ, 27 ಸಾವಿರ ಭಾರತೀಯರಿಗೂ ಪಿಂಕ್​ ಸ್ಲಿಪ್​​!

ABOUT THE AUTHOR

...view details