ಕರ್ನಾಟಕ

karnataka

ETV Bharat / business

ಚೀನಾ ಆರ್ಥಿಕತೆಗೆ ಸಂಭ್ರಮದ ಪುಳಕ : ಜಾಗತಿಕ ಪೇಟೆಗಳಲ್ಲಿ ಸೂತಕದ ಛಾಯೆ!

ಜರ್ಮನಿಯ ಡಿಎಎಕ್ಸ್ ಶೇ 0.1ರಷ್ಟು ಇಳಿಕೆಯಾಗಿ 13,769.97 ಅಂಕಗಳಿಗೆ ತಲುಪಿತು. ಪ್ಯಾರಿಸ್​​ನಲ್ಲಿನ ಸಿಎಸಿ ಶೇ 0.4ರಷ್ಟು ಇಳಿದು 5,588.28 ಅಂಗಳ ಮಟ್ಟಕ್ಕೆ ತಲುಪಿದೆ. ಬ್ರಿಟನ್‌ನಲ್ಲಿ ಎಫ್‌ಟಿಎಸ್‌ಇ 100 ಅಂಕ ಕಳೆದುಕೊಂಡು ಶೇ 0.1ಕ್ಕಿಂತ ಕಡಿಮೆಯಾಗಿ 6,731.23 ಅಂಖಗಳಿಗೆ ತಲುಪಿದೆ. ಎಸ್ & ಪಿ 500 ಮತ್ತು ಡೌ ಕೈಗಾರಿಕೆಗಳ ಫ್ಯೂಚರ್​ ಶೇ 0.3ರಷ್ಟು ಕುಸಿದಿದೆ..

China
ಚೀನಾ

By

Published : Jan 18, 2021, 6:53 PM IST

ಟೋಕಿಯೊ :ವರ್ಷದ ಆರಂಭದಲ್ಲಿ ತೀವ್ರ ಸಂಕೋಚನದ ಬಳಿಕ 2020ರಲ್ಲಿ ಚೀನಾದ ಆರ್ಥಿಕತೆಯು ಶೇ.2.3ರಷ್ಟು ರಷ್ಟು ಏರಿಕೆಯಾಗಿದೆ ಎಂಬ ಸುದ್ದಿಯ ಹೊರತಾಗಿಯೂ ಮಾರುಕಟ್ಟೆಗಳು ಆರಂಭಿಕ ವಾರದಲ್ಲಿ ನಿಧಾನಗತಿಯ ಆರಂಭಕ್ಕೆ ಮೊರೆ ಹೋದವು.

ಪ್ಯಾರಿಸ್, ಲಂಡನ್ ಮತ್ತು ಟೋಕಿಯೊದಲ್ಲಿ ಷೇರುಗಳು ಕುಸಿತ ದಾಖಲಿಸಿದವು. ಆದರೆ, ಹಾಂಗ್‌ಕಾಂಗ್ ಮತ್ತು ಶಾಂಘೈನಲ್ಲಿ ಧನಾತ್ಮಕವಾಗಿ ಮುಂದುವರೆದಿದ್ದು, ರಾಷ್ಟ್ರೀಯ ರಜಾದಿನದ ಪ್ರಯುಕ್ತ ಅಮೆರಿಕದ ಮಾರುಕಟ್ಟೆಗಳು ಸೋಮವಾರ ಮುಚ್ಚಲಾಗಿತ್ತು.

ಕೋವಿಡ್​-19 ಲಸಿಕೆ ಮತ್ತು ಅಮೆರಿಕ ಆರ್ಥಿಕತೆಗೆ ಹೊಸ ನೆರವು ಜಾಗತಿಕ ಚೇತರಿಕೆಗೆ ಎರವಾಗಬಹುದು ಎಂಬ ಭರವಸೆಯ ಹೊರತಾಗಿಯೂ ಸಾಂಕ್ರಾಮಿಕ ರೋಗದಿಂದ ಉಂಟಾಗುತ್ತಿರುವ ಆರ್ಥಿಕ ವಿನಾಶದ ಬಗ್ಗೆ ಹೂಡಿಕೆದಾರರು ಹೆಚ್ಚು ಜಾಗರೂಕರಾಗಿ ಇರುವುದು ಕಂಡು ಬರುತ್ತಿದೆ.

ಜರ್ಮನಿಯ ಡಿಎಎಕ್ಸ್ ಶೇ.0.1ರಷ್ಟು ಇಳಿಕೆಯಾಗಿ 13,769.97 ಅಂಕಗಳಿಗೆ ತಲುಪಿತು. ಪ್ಯಾರಿಸ್​​ನಲ್ಲಿನ ಸಿಎಸಿ ಶೇ.0.4ರಷ್ಟು ಇಳಿದು 5,588.28 ಅಂಗಳ ಮಟ್ಟಕ್ಕೆ ತಲುಪಿದೆ. ಬ್ರಿಟನ್‌ನಲ್ಲಿ ಎಫ್‌ಟಿಎಸ್‌ಇ 100 ಅಂಕ ಕಳೆದುಕೊಂಡು ಶೇ.0.1ಕ್ಕಿಂತ ಕಡಿಮೆಯಾಗಿ 6,731.23 ಅಂಖಗಳಿಗೆ ತಲುಪಿದೆ. ಎಸ್&ಪಿ 500 ಮತ್ತು ಡೌ ಕೈಗಾರಿಕೆಗಳ ಫ್ಯೂಚರ್​ ಶೇ.0.3ರಷ್ಟು ಕುಸಿದಿದೆ.

ಇದನ್ನೂ ಓದಿ: ಬಜೆಟ್​​ ಹೊಸ್ತಿಲಲ್ಲಿ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಈ ಗುಡ್​ ನ್ಯೂಸ್​ ಕೊಡಲಿದೆ ಕೇಂದ್ರ!

ಹೊಸ ಕೊರೊನಾ ವೈರಸ್​ನಿಂದ ಮೊದಲ ಬಾರಿಗೆ ಬಳಲುತ್ತಿರುವ ಚೀನಾ, ಅಮೆರಿಕ, ಯುರೋಪ್ ಮತ್ತು ಜಪಾನ್ ರಾಷ್ಟ್ರಗಳು ಸೋಂಕಿನ ವಿರುದ್ಧ ಸೆಣಸಾಡುತ್ತಿವೆ. ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಡಿಸೆಂಬರ್‌ನಲ್ಲಿ ಕೊನೆಗೊಂಡ ಮೂರು ತಿಂಗಳಲ್ಲಿನ ಬೆಳವಣಿಗೆ ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದ್ರೆ 6.5%ಕ್ಕೆ ಏರಿದೆ, ಇದು ಹಿಂದಿನ ತ್ರೈಮಾಸಿಕಗಳಿಂದ 4.9% ರಷ್ಟಿದೆ. 2020ರ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆಯು 6.8% ವೇಗದಲ್ಲಿ ಸಂಕುಚಿತಗೊಂಡಿತು.

ಯಾಕೆಂದರೆ, ದೇಶವು ಸಾಂಕ್ರಾಮಿಕ ರೋಗವನ್ನು ಸ್ಥಗಿತಗೊಳಿಸುವಿಕೆ ಮತ್ತು ಇತರ ನಿರ್ಬಂಧಗಳೊಂದಿಗೆ ಹೋರಾಡಿತು. ಚೀನಾದ ಜಿಡಿಪಿಶೇ 2.3ರಷ್ಟು ಏರಿಕೆಯಾಗಿದ್ದು, 2020ರಲ್ಲಿ 15.42 ಟ್ರಿಲಿಯನ್ ಡಾಲರ್‌ಗೆ ವಿಸ್ತರಣೆಯಾಗಿದೆ ಎಂದು ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಎನ್‌ಬಿಎಸ್) ಸೋಮವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳಲ್ಲಿ ತಿಳಿಸಿದೆ.

ವುಹಾನ್‌ನಲ್ಲಿ ಮಾರಕ ಕೊರೊನಾ ವೈರಸ್ ಹೊರ ಹೊಮ್ಮಿದ ನಂತರ ಲಾಕ್‌ಡೌನ್‌ಗೆ ಮೋರೆ ಹೋದ ನಂತರ 2020ರ ಮೊದಲ ತ್ರೈಮಾಸಿಕದಲ್ಲಿ ಶೇ.6.8ರಷ್ಟು ಕುಸಿತ ಅನುಭವಿಸಿದ ಚೀನಾದ ಆರ್ಥಿಕತೆ, ಕೋವಿಡ್-19 ತ್ವರಿತವಾಗಿ ಎದುರಿಸಿ ಚೇತರಿಕೆ ಕಂಡಿತು. ಕಟ್ಟುನಿಟ್ಟಾದ ವೈರಸ್ ನಿಯಂತ್ರಣ ಕ್ರಮಗಳು ಮತ್ತು ವ್ಯವಹಾರಗಳಿಗೆ ತುರ್ತು ಪರಿಹಾರದ ನೆರವಿನಿಂದಾಗಿ ಚೀನಾದ ಆರ್ಥಿಕತೆಯು ಸ್ಥಿರ ಚೇತರಿಕೆ ಕಾಣಿಸುತ್ತಿದೆ.

2020ರ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ವರ್ಷಕ್ಕೆ ಶೇ.6.5ರಷ್ಟು ವಿಸ್ತರಿಸಿದೆ. ಇದು ಮೂರನೇ ತ್ರೈಮಾಸಿಕದಲ್ಲಿ ಶೇ.4.9ರಷ್ಟು ಬೆಳವಣಿಗೆಗಿಂತ ವೇಗವಾಗಿದೆ ಎಂದು ಎನ್​ಬಿಎಸ್ ತಿಳಿಸಿದೆ. ಚೀನಾದ ಈ ವಿತ್ತೀಯ ಬೆಳವಣಿಗೆಯ ಮಧ್ಯಯೂ ಜಾಗತಿಕ ಷೇರುಪೇಟೆಗಳ ಮೇಲೆ ಏರುಪೇರಿನ ಪರಿಣಾಮ ಬೀರಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಶೇ.1ರಷ್ಟು ಏರಿಕೆ ಕಂಡು 28,862.77 ಅಂಕಗಳಿಗೆ ತಲುಪಿದ್ರೆ, ಶಾಂಘೈ ಕಾಂಪೋಸಿಟ್ ಸೂಚ್ಯಂಕ ಶೇ.0.8ರಷ್ಟು ಹೆಚ್ಚಳವಾಗಿ 3,596.22 ಅಂಕಗಳಿಗೆ ತಲುಪಿತ್ತು.

ಇತರ ಪ್ರಮುಖ ಪ್ರಾದೇಶಿಕ ಮಾರುಕಟ್ಟೆಗಳ ಪೈಕಿ ಟೋಕಿಯೊದ ನಿಕ್ಕಿ 225 ಅಂಕ ಕುಸಿದು 28,242.21ಕ್ಕೆ ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಶೇ.2.3ನಷ್ಟದಿಂದ 3,013.93ಕ್ಕೆ ತಲುಪಿದೆ. ಆಸ್ಟ್ರೇಲಿಯಾದ ಎಸ್ &ಪಿ/ಎಎಸ್ಎಕ್ಸ್ 200 ಅಂಕ ಕುಸಿದು 6,663.00 ಅಂಗಳಿಗೆ ತಲುಪಿದೆ. ಆಗ್ನೇಯ ಏಷ್ಯಾ ಮತ್ತು ತೈವಾನ್‌ನಲ್ಲಿ ಷೇರುಗಳು ಸಹ ಇಳಿಕೆಯಾದವು.

ABOUT THE AUTHOR

...view details