ನವದೆಹಲಿ: ಕೊರೊನಾ ಪ್ರೇರೇಪಿತ ಸಂಪನ್ಮೂಲಗಳನ್ನು ಸಂಗ್ರಹಿಸಿ ಕೃಷಿ ಮತ್ತು ಎಂಎಸ್ಎಂಇಗಳಿಗೆ ಉತ್ತೇಜನ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗ್ರಾಹಕರಿಗೆ ಹೊರೆಯಾಗದಂತೆ ಕೆಲವು ಸರಕುಗಳ ಮೇಲಿನ ಸೆಸ್ ಹೆಚ್ಚಳ ಮಾಡಿದ್ದಾರೆ.
ಪೆಟ್ರೋಲ್ ಮೇಲೆ 2.5 ರೂ. ಮತ್ತು ಡೀಸೆಲ್ ಮೇಲೆ 4 ರೂ/ಯಷ್ಟು ಕೃಷಿ ಸೆಸ್ ಹೆಚ್ಚಳ ಮಾಡಿದ್ದಾರೆ. ಚಿಲ್ಲರ ಇಂಧನಗಳ ಮೇಲೆ ಕೋವಿಡ್ ಸೆಸ್ ಬರಲಿದೆ ಎಂದು ನೀರಿಕ್ಷಿಸುತ್ತಿದ್ದವರಿಗೆ ಅಚ್ಚರಿ ಮೂಡಿಸಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹಣ ಹರಿದು ಬರಲಿದ್ದು, ತೈಲ ವಿತರಣಾ ಕಂಪನಿಗಳಿಗೆ ಹೊರೆಯಾಗಬಹುದು.
ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 2.50 ರೂ. ಮತ್ತು ಡೀಸೆಲ್‌ಗೆ 4 ರೂ. ಇರಲಿದೆ. ಇಂಧನ ಬೆಲೆಗಳ ಹೆಚ್ಚಳವು ಮೂಲ ಅಬಕಾರಿ ಸುಂಕ ಕಡಿತಗೊಳಿಸುವುದರಿಂದ ಮತ್ತು ಪ್ರಸ್ತುತ ಅವುಗಳ ಮೇಲೆ ವಿಧಿಸಲಾಗುವ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಸರಿದೂಗಿಸಲಾಗುತ್ತದೆ.
ವಿದೇಶಿ ಮದ್ಯಗಳ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ವಿಧಿಸಲಾಗುತ್ತದೆ. ಸಾಮಾನ್ಯ ಜನರ ಮೇಲಿನ ಹೊರೆ ಕಡಿಮೆ ಮಾಡಲು ಈ ಉತ್ಪನ್ನಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಕಡಿತಗೊಳಿಸಿ, ಆಲ್ಕೊಹಾಲ್ಯುಕ್ತ ಪಾನೀಯಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಈಗಿರುವ ಶೇ 100-150ರಷ್ಟು ದರದಿಂದ ಶೇ 50ಕ್ಕೆ ಇಳಿಸಲು ಬಜೆಟ್ ಪ್ರಸ್ತಾಪಿಸಿದೆ. ನಂತರ ಪರಿಷ್ಕೃತ ಪದ್ಧತಿಗಳ ಮೇಲೆ ಶೇ 100ರಷ್ಟು ಸೆಸ್ ವಿಧಿಸಲಾಗುತ್ತದೆ. ಅಬಕಾರಿ ಸುಂಕಕ್ಕಿಂತ ಭಿನ್ನವಾಗಿ, ಸೆಸ್‌ಗಳ ಅಡಿಯಲ್ಲಿ ಸಂಗ್ರಹಿಸಿದ ಆದಾಯವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಅಗತ್ಯವಿಲ್ಲ.
ಪರಿಷ್ಕೃತ ಸುಂಕದ ಅಡಿ ಮದ್ಯದ ಬೆಲೆಗಳು ಹೇಗೆ ಬದಲಾಗುತ್ತವೆ ಎಂಬುದರ ಉದಾಹರಣೆ ಇದೆ:
ಆಮದು ಮಾಡಿಕೊಳ್ಳುವ ಸರಕುಗಳ ಮೌಲ್ಯಮಾಪನ ಮೌಲ್ಯದ ಮೇಲೆ ಮೂಲ ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ. ಈಗ, ಮೌಲ್ಯಮಾಪನ ಮೌಲ್ಯವನ್ನು ಉತ್ಪನ್ನದ ಲ್ಯಾಂಡಿಂಗ್ ವೆಚ್ಚದ ಶೇ 1ರಷ್ಟು ಹೇರಲಾಗುತ್ತದೆ.
ಉದಾ: ಒಂದು ಬಾಟಲ್ ವಿಸ್ಕಿಯ ಬಂದು ತಲುಪಿದ ವೆಚ್ಚ 500 ರೂ. ಆಗಿದ್ದರೆ, ಹಿಂದಿನ ಕಸ್ಟಮ್ಸ್ ದರದಲ್ಲಿ ಮೌಲ್ಯಮಾಪನ ವೆಚ್ಚ 5 ರೂ. ಇರಲಿದೆ. ವಿಸ್ಕಿ ಶೇ 100ರಷ್ಟು ಕಸ್ಟಮ್ ಹೊಂದಿದರೇ ಅದು 5 ರೂ.ಗೆ ತಲುಪುತ್ತದೆ. ಆದ್ದರಿಂದ ಚಿಲ್ಲರೆ ಬೆಲೆ 510 ರೂ. ಆಗುತ್ತದೆ.
ಈಗ ಹೊಸ ದರಗಳ ಅಡಿಯಲ್ಲಿ ಮೂಲ ಕಸ್ಟಮ್ಸ್ ಸುಂಕವನ್ನು 5 ರೂ. ಮೌಲ್ಯಮಾಪನ ವೆಚ್ಚದ ಶೇ 50ಕ್ಕೆ ಇಳಿಸಲಾಗುವುದು. ಅದು 2.50 ರೂ.ಗೆ ಬರಲಿದೆ. ಹೊಸ ಸೆಸ್ ಅನ್ನು ಶೇ 100ರಷ್ಟು ದರದಲ್ಲಿ 7.50 ರೂ. (ಮೌಲ್ಯಮಾಪನ ವೆಚ್ಚ + ಕಸ್ಟಮ್ಸ್ ಸುಂಕ) ವಿಧಿಸಲಾಗುತ್ತದೆ. ಈ ರೀತಿಯಾಗಿ ಸೆಸ್ ಹೆಚ್ಚುವರಿ 7.50 ರೂ.ಗೆ ಬರಲಿದ್ದು, ವಿಸ್ಕಿಯ ಚಿಲ್ಲರೆ ಬೆಲೆ 515 ರೂ.ಗೆ ತಳ್ಳುತ್ತದೆ.
ಚಿನ್ನ ಮತ್ತು ಬೆಳ್ಳಿ ಬಾರ್‌ಗಳು (ಶೇ 2.5ರಷ್ಟು), ಕಚ್ಚಾ ತಾಳೆ ಎಣ್ಣೆ (ಶೇ 17.5ರಷ್ಟು), ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆ (ಶೇ 20ರಷ್ಟು), ಕಡಲೆ (ಶೇ 50ರಷ್ಟು) ಮತ್ತು ಮಸೂರಗಳ ( ದ್ವಿದಳ ಧಾನ್ಯ ಶೇ 20ರಷ್ಟು) ಮೇಲಿನ ಮೂಲ ಕಸ್ಟಮ್ಸ್ ಸುಂಕ ಕಡಿತಗೊಳಿಸಲಾಗಿದೆ.
ಕೃಷಿ, ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಮತ್ತು ಇತರ ದೇಶೀಯ ತಯಾರಕರು ಕಸ್ಟಮ್ಸ್ ಸುಂಕ ಏರಿಕೆಯ ಲಾಭಪಡೆಯಲಿವೆ. ಆಮದು ಮಾಡಿದ ಚರ್ಮದ ಸರಕುಗಳು (ಶೇ 10ರಷ್ಟು), ರತ್ನ ಮತ್ತು ಆಭರಣಗಳು (ಶೇ 7.5ರಿಂದ 15ವರೆಗೆ), ಮೊಬೈಲ್ ಫೋನ್ ಬ್ಯಾಟರಿಗಳು (ಶೇ 2.5ರಷ್ಟು), ರೆಫ್ರಿಜರೇಟರ್‌ಗಳು (ಶೇ 12.5ರಿಂದ 15%) ಇತರೆ ಬೆಲೆಬಾಳುವ ವಸ್ತುಗಳನ್ನು ಒಳಗೊಂಡಿರುತ್ತದೆ.
ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಮೂಲಕ ನಾವು 30,000 ಕೋಟಿ ರೂ. ನಿರೀಕ್ಷಿಸುತ್ತಿದ್ದೇವೆ. ಈ ಸೆಸ್ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹಣಕಾಸು ಕಾರ್ಯದರ್ಶಿ ಎಬಿ ಪಾಂಡೆ ಹೇಳಿದ್ದಾರೆ.
ಸುಂಕ ಏರಿಕೆಯ ಸರಕುಗಳು?
ಪೆಟ್ರೋಲ್ ಮತ್ತು ಡೀಸೆಲ್