ಕರ್ನಾಟಕ

karnataka

ETV Bharat / business

ಟಾಟಾ ಕಾರು ಇನ್ನೂ 'ದುಬಾರಿ'... 3 ತಿಂಗಳಲ್ಲಿ 2 ಬಾರಿ ಏರಿಕೆಗೆ ಕಾರಣವೇನು? - ಪ್ಯಾಸೆಂಜರ್ ವೆಹಿಕಲ್​

ತಯಾರಿಕಾ ವೆಚ್ಚ ಮತ್ತು ಹಣಕಾಸು ಮಾರುಕಟ್ಟೆಯನ್ವಯ ದರಗಳನ್ನು ಏರಿಕೆ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ. ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಬೆಲೆ ಜಿಗಿತವಾಗಿದೆ.

ಟಾಟಾ ಕಾರ್​ ಚಿತ್ರ; ಕೃಪೆ ಟ್ವಿಟ್ಟರ್​

By

Published : Mar 24, 2019, 7:41 PM IST

ನವದೆಹಲಿ: ಟಾಟಾ ಮೋಟಾರ್ಸ್‌ ಕಂಪನಿಯು ತನ್ನ ಕಾರುಗಳ ದರವನ್ನು ₹ 25,000ವರೆಗೆ ಏರಿಕೆ ಮಾಡಿದ್ದು, 2019ರ ಏಪ್ರಿಲ್‌ನಿಂದ ಪರಿಷ್ಕೃತ ದರಗಳು ಅನ್ವಯವಾಗಲಿವೆ ಎಂದು ಕಂಪನಿ ತಿಳಿಸಿದೆ.

ತಯಾರಿಕಾ ವೆಚ್ಚ ಮತ್ತು ಹಣಕಾಸು ಮಾರುಕಟ್ಟೆಯನ್ವಯ ದರಗಳನ್ನು ಏರಿಕೆ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ. ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಬೆಲೆ ಜಿಗಿತವಾಗಿದೆ. ಜನವರಿ ತಿಂಗಳಲ್ಲಿ ಪ್ರತಿ ಕಾರಿನ ಮೇಲೆ ₹ 40,000 ಬೆಲೆ ಏರಿಸಿತ್ತು. ಈಗ ಮತ್ತೆ ₹ 25,000 ಹೆಚ್ಚಳ ಮಾಡಿದೆ.

ಪ್ರಸ್ತುತ ನ್ಯಾನೊ ಕಾರ್‌ನಿಂದ ಪ್ರೀಮಿಯಂ ಎಸ್‌ಯುವಿ ಹೆಕ್ಸಾ ತನಕ ₹ 2.36 ಲಕ್ಷದಿಂದ ₹ 18.37 ಲಕ್ಷ ಬೆಲೆಗಳಲ್ಲಿ ವಿವಿಧ ಮಾದರಿಯ ಕಾರುಗಳನ್ನು ಟಾಟಾ ಮೋಟಾರ್ಸ್‌ ಮಾರಾಟ ಮಾಡುತ್ತಿದೆ. ಇವುಗಳ ದರಗಳು ಮುಂದಿನ ತಿಂಗಳು ಏರಿಕೆಯಾಗಲಿವೆ ಎಂದು ಮಾಹಿತಿ ನೀಡಿದೆ.

ಈ ಬಗ್ಗೆ ಮಾತನಾಡಿದ ಟಾಟಾ ಮೋಟಾರ್ಸ್​ ಪ್ಯಾಸೆಂಜರ್ ವೆಹಿಕಲ್​ ವ್ಯವಹಾರದ ಘಟಕದ ಅಧ್ಯಕ್ಷ ಮಾಯಾಂಕ್ ಪರೇಕ್​, ''ಬದಲಾದ ಮಾರುಕಟ್ಟೆ ಪರಿಸ್ಥಿತಿ, ಉತ್ಪಾದನಾ ವೆಚ್ಚಗಳ ಏರಿಕೆಯಿಂದಾಗಿ ವಾಹನಗಳ ದರ ಏರಿಕೆ ಕಂಪನಿಗೆ ಅನಿವಾರ್ಯವಾಗಿದೆ. ವಿವಿಧ ಬಾಹ್ಯವಾದ ಆರ್ಥಿಕ ಅಂಶಗಳು ಬೆಲೆ ಹೆಚ್ಚಳದ ಒತ್ತಡಕ್ಕೆ ಕಾರಣವಾಗಿವೆ. ನಮ್ಮಲ್ಲಿ ತಯಾರಾಗುತ್ತಿರುವ 'ಟಿಯಾಗೊ', 'ಹೆಕ್ಸಾ', 'ಟಿಗೊರ್', 'ನೆಕ್ಸನ್' ಮತ್ತು 'ಹ್ಯಾರಿ'ಯಂತಹ ಕಾರುಗಳಿಂದ ಮುಂದಿನ ದಿನಗಳಲ್ಲಿ ನಮ್ಮ ಬೆಳವಣಿಗೆಯ ಪಥವನ್ನು ಇನ್ನಷ್ಟು ಸದೃಢಪಡಿಸುತ್ತೇವೆ'' ಎಂದರು.

ABOUT THE AUTHOR

...view details