ಕರ್ನಾಟಕ

karnataka

ETV Bharat / business

ಆರ್ಥಿಕ ಕುಸಿತದ ಸೈಡ್ ಎಫೆಕ್ಟ್​...​ ಟಾಟಾ ಮೋಟರ್​​ಗೆ ಟಾಟಾ ಹೇಳಿದ ಆದಾಯ... - ಸಿಇಒ ಗುಂಟರ್ ಬುಟ್ಶೆಕ್

2019-20ನೇ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಗೆ ₹ 216 ಕೋಟಿ ನಷ್ಟ ಉಂಟಾಗಿದೆ. ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ತೀವ್ರ ಕುಸಿತವು ಲಾಭಾಂಶದ ಮೇಲೆ ನೇರ ಪರಿಣಾಮ ಬೀರಿದೆ. ಕಂಪನಿಯ ಒಟ್ಟಾರೆ ಆದಾಯ ಈ ವರ್ಷದಲ್ಲಿ ₹ 64,763 ಕೋಟಿ ಆಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ₹ 71,293 ಕೋಟಿ ಆಗಿತ್ತು ಎಂದು ಟಾಟಾ ಮೋಟಾರ್ಸ್​ ತನ್ನ ವರದಿಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

By

Published : Oct 25, 2019, 8:46 PM IST

ಮುಂಬೈ:ಆರ್ಥಿಕ ಹಿಂಜರಿತ, ಕಾರುಗಳ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಕಾರು ತಯಾರಿಕೆ ಕಂಪನಿಯಾದ ಟಾಟಾ ಮೋಟಾರ್​ ಆದಾಯದ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ.

2019-20ನೇ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಗೆ ₹ 216 ಕೋಟಿ ನಷ್ಟ ಉಂಟಾಗಿದೆ. ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ತೀವ್ರ ಕುಸಿತವು ಲಾಭಾಂಶದ ಮೇಲೆ ನೇರ ಪರಿಣಾಮ ಬೀರಿದೆ. ಕಂಪನಿಯ ಒಟ್ಟಾರೆ ಆದಾಯವು ಈ ವರ್ಷದಲ್ಲಿ ₹ 64,763 ಕೋಟಿ ಆಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ₹ 71,293 ಕೋಟಿ ಆಗಿತ್ತು ಎಂದು ವರದಿಯಲ್ಲಿ ತಿಳಿಸಿದೆ.

ಕಂಪನಿ ವಿತ್ತೀಯ ವೆಚ್ಚ ₹ 609 ಕೋಟಿಯಷ್ಟು ಹೆಚ್ಚಳವಾಗಿದೆ. 2019ರ ಎರಡನೇ ತ್ರೈಮಾಸಿಕದಲ್ಲಿ ಇದು ₹ 1,835 ಕೋಟಿಯಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದಿರುವುದು ಹಣಕಾಸು ವೆಚ್ಚ ಏರಲು ಕಾರಣವಾಗಿದೆ. ಟಾಟಾದ ಐಷರಾಮಿ ಕಾರು ಬ್ರಾಂಡ್ ಜಾಗ್ವಾರ್ ಮತ್ತು ರೋವರ್ ಮಾರಾಟದಲ್ಲಿ ಸುಧಾರಣೆ ಕಂಡುಬಂದಿದೆ. ದೇಶಿ ಕಾರು ಮಾರಾಟದಲ್ಲಿ ₹ 187.7 ಕೋಟಿಯಷ್ಟು ನಷ್ಟವಾಗಿದೆ.

ಚೀನಾದಲ್ಲಿ ಮಾರಾಟ ಉತ್ತಮವಾಗಿದೆ. ಎಲ್ಲ ಹಂತದಲ್ಲೂ ಉತ್ತಮ ಫಲಿತಾಂಶವನ್ನು ಕಂಪನಿ ಕಂಡುಕೊಂಡಿದೆ. ಉದ್ಯಮವು ದೀರ್ಘ ಮತ್ತು ತೀಕ್ಷ್ಣವಾದ ಮಂದಗತಿಯ ಸೆಳೆತಕ್ಕೆ ಸಿಲುಕುತ್ತಿದೆ. ಬೆಳವಣಿಗೆ ಬೇಡಿಕೆ ಕುಸಿತ, ನೂತನ ಮಾನದಂಡಗಳು, ನಗದು ದ್ರವ್ಯತೆಯ ಒತ್ತಡ, ಕಡಿಮೆ ಸರಕುಗಳ ಲಭ್ಯತೆ, ದುರ್ಬಲವಾಗುತ್ತಿರುವ ಗ್ರಾಹಕರ ಖರೀದಿ ಭಾವನೆಗಳು ಮತ್ತು ಸಾಮಾನ್ಯ ಆರ್ಥಿಕ ಕುಸಿತದಿಂದ ನಷ್ಟದ ಮೇಲೆ ಪ್ರಭಾವಿತವಾಗಿದೆ ಎಂದು ಟಾಟಾ ಮೋಟಾರ್ಸ್ ಸಿಇಒ ಗುಂಟರ್ ಬುಟ್ಶೆಕ್ ಹೇಳಿದರು.

ABOUT THE AUTHOR

...view details