ಕರ್ನಾಟಕ

karnataka

ETV Bharat / business

ಆಲ್ಕೋಹಾಲ್ ಹೋಮ್ ಡೆಲಿವರಿ ಆರಂಭಿಸಿದ ಸ್ವಿಗ್ಗಿ, ಜೊಮ್ಯಾಟೊ - ಲಾಕ್​ಡೌನ್

ಒಡಿಶಾ ಸರ್ಕಾರದಿಂದ ಅಗತ್ಯ ಅನುಮೋದನೆ ಪಡೆದ ನಂತರ ಮಂಗಳವಾರ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ತನ್ನ ಆಲ್ಕೋಹಾಲ್ ಹೋಮ್ ಡೆಲಿವರಿ ಕಾರ್ಯಾಚರಣೆ ಶುರುವಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

alcohol home delivery
ಮದ್ಯ

By

Published : May 26, 2020, 6:04 PM IST

ನವದೆಹಲಿ/ ಭುವನೇಶ್ವರ:ಜಾರ್ಖಂಡ್‌ನಲ್ಲಿ ಮದ್ಯ ಹೋಮ್​ ಡೆಲಿವರಿ ಆರಂಭಿಸಿದ ಒಂದು ವಾರದ ನಂತರ ಒಡಿಶಾದಲ್ಲಿ ತಮ್ಮ ಸೇವೆಗಳನ್ನು ಪ್ರಾರಂಭಿಸುವುದಾಗಿ ಫುಡ್‌ಟೆಕ್ ಯುನಿಕಾರ್ನ್​ಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೊ ಪ್ರಕಟಿಸಿವೆ.

ಭುವನೇಶ್ವರದಿಂದ ಆರಂಭಿಸಿ ಶೀಘ್ರದಲ್ಲೇ ರೂರ್ಕೆಲಾ, ಬಾಲಸೋರ್, ಬಾಲಂಗೀರ್, ಸಂಬಲ್ಪುರ್, ಬೆರ್ಹಾಂಪುರ್, ಕಟಕ್ ಸೇರಿದಂತೆ ಇತರ ನಗರಗಳಿಗೆ ವಿಸ್ತರಿಸಲಿದೆ ಎಂದು ಜೊಮ್ಯಾಟೊ ಹೇಳಿದೆ.

ಒಡಿಶಾ ಸರ್ಕಾರದಿಂದ ಅಗತ್ಯ ಅನುಮೋದನೆ ಪಡೆದ ನಂತರ ಮಂಗಳವಾರ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ತನ್ನ ಆಲ್ಕೋಹಾಲ್ ಹೋಮ್ ಡೆಲಿವರಿ ಕಾರ್ಯಾಚರಣೆ ಶುರುವಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

ಒಡಿಶಾದ ನಮ್ಮ ಬಳಕೆದಾರರಿಗೆ ಸೇವೆ ಸಲ್ಲಿಸುತ್ತಿರುವುದಕ್ಕೆ ನಾವು ಸಂತೋಷಪಡುತ್ತೇವೆ. ಗ್ರಾಹಕರು ಈಗ ಕಿರಾಣಿ ಮತ್ತು ಆಹಾರ ವಿತರಣೆಯ ಜೊತೆಗೆ ಆಲ್ಕೊಹಾಲ್ ಸ್ವೀಕಾರಕ್ಕೆ ಜೊಮ್ಯಾಟೊವನ್ನು ಬಳಸಬಹುದು ಎಂದು ಜೊಮ್ಯಾಟೊ ಉಪಾಧ್ಯಕ್ಷ ರಾಕೇಶ್ ರಂಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details