ಮುಂಬೈ:ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಂದು ಲಾಭ ಗಳಿಸಿವೆ. ಬೆಳಗ್ಗೆ ಧನಾತ್ಮಕ ವಹಿವಾಟು ಪ್ರಾರಂಭಿಸಿದ ಸೂಚ್ಯಂಕಗಳು ದಿನವಿಡೀ ಅದೇ ವೇಗ ಕಾಪಾಡಿಕೊಂಡವು.
ನಿಫ್ಟಿ ಒಂದು ಹಂತದಲ್ಲಿ 128 ಅಂಕ ಏರಿಕೆ ಕಂಡಿದ್ದು, ಜೀವಿತಾವಧಿಯ ಗರಿಷ್ಠ 15,469 ಅಂಕಗಳಿಗೆ ತಲುಪಿದೆ. ಇದು ಅಂತಿಮವಾಗಿ 97 ಅಂಕಗಳ ಲಾಭದೊಂದಿಗೆ 15,435 ಅಂಕಗಳಲ್ಲಿ ಮುಕ್ತಾಯವಾಯಿತು.
ಮುಂಬೈ ಸಂವೇದಿ ಷೇರು ಸೂಚ್ಯಂಕ ನಿಫ್ಟಿ 307 ಅಂಕ ಗಳಿಸಿ 51,422 ಅಂಕಗಳಲ್ಲಿ ಕೊನೆಗೊಂಡಿತು. ನಿನ್ನೆ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 72.47 ರೂ.ಯಷ್ಟಾಗಿತ್ತು.
ಸಕಾರಾತ್ಮಕ ಅಂತಾರಾಷ್ಟ್ರೀಯ ಸಂಕೇತಗಳ ಜೊತೆಗೆ ದೇಶೀಯವಾಗಿ ಕೊರೊನಾ ಪ್ರಕರಣಗಳ ಕುಸಿತವು ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಕೊರೊನಾ ದೈನಂದಿನ ಪ್ರಕರಣಗಳು ಇಂದು 44 ದಿನಗಳ ಕನಿಷ್ಠ ಮಟ್ಟ ಮುಟ್ಟಿದೆ.
ಇದರ ಜೊತೆಯಲ್ಲಿ, ಅಮೆರಿಕದ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಹೊರಬರಲು ಯುಎಸ್ ಸರ್ಕಾರದ ದೊಡ್ಡ ಪ್ರಮಾಣದ ಉತ್ತೇಕ ಪ್ಯಾಕೇಜ್ ಅದರ ಸೂಚ್ಯಂಕಗಳ ಜೊತೆಗೆ ಏಷ್ಯಾದ ಮಾರುಕಟ್ಟೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
ಏಷ್ಯಾದ ಮಾರುಕಟ್ಟೆಗಳು ಇಂದು ಸಕಾರಾತ್ಮಕವಾಗಿ ಸಾಗಿದವು. ದೇಶೀಯವಾಗಿ ರಿಲಯನ್ಸ್‌ನಂತಹ ಕೆಲವು ಪ್ರಮುಖ ಕಂಪನಿಗಳ ಷೇರುಗಳು ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿಯೇ ಇಂದು ಸೂಚ್ಯಂಕಗಳು ಲಾಭದ ದಿಕ್ಕಿನಲ್ಲಿ ಸಾಗಿವೆ.
ಸೆನ್ಸೆಕ್ಸ್ 30ರಲ್ಲಿ ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಬಜಾಜ್ ಫಿನ್‌ಸರ್ವ್, ಡಾ. ರೆಡ್ಡಿಸ್, ಪವರ್ ಗ್ರಿಡ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ ಮತ್ತು ಟಿಸಿಎಸ್ ಷೇರುಗಳು ಟಾಪ್ ಲೂಸರ್ಗಳಾದವು.
ರಿಲಯನ್ಸ್, ಎಂ & ಎಂ, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಕೋಟಾಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ, ಒಎನ್‌ಜಿಸಿ, ಭಾರತಿ ಏರ್‌ಟೆಲ್ ಮತ್ತು ಐಟಿಸಿ ಟಾಪ್ ಗೇನರ್ಗಳಾದವು.