ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಚಿನ್ನ ನಗದೀಕರಣ ಮತ್ತು ಸವರನ್ ಚಿನ್ನದ ಬಾಂಡ್ ಯೋಜನೆ ಮತ್ತೆ ಆರಂಭವಾಗಲಿದೆ.
ಸವರನ್ ಗೋಲ್ಡ್ ಬಾಂಡ್ ಅಥವಾ ಎಸ್‌ಜಿಬಿ ಯೋಜನೆ ವಿತರಣಾ ಬೆಲೆಯು ಪ್ರತಿ ಗ್ರಾಂ. ಚಿನ್ನಕ್ಕೆ 5,177 ರೂ.ಯಷ್ಟು ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಸವರಿನ್ ಗೋಲ್ಡ್ ಬಾಂಡ್ ಯೋಜನೆ 2020-21-ಸರಣಿ VIIIರ ಚಂದಾದಾರಿಕೆ 2020ರ ನವೆಂಬರ್ 9 ರಿಂದ 13ರ ತನಕ ತೆರೆದಿರುತ್ತೆ.
999 ಶುದ್ಧತೆಯ ಚಿನ್ನಕ್ಕೆ [ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ (ಐಬಿಜೆಎ) ಪ್ರಕಟಿಸಿದ] ಸರಾಸರಿ ಮುಕ್ತಾಯದ ಬೆಲೆಯ ಆಧಾರದ ಮೇಲೆ ಬಾಂಡ್‌ನ ಅತ್ಯಲ್ಪ ಮೌಲ್ಯ ಪ್ರತಿ ಗ್ರಾಂ. ಚಿನ್ನಕ್ಕೆ 5,177 ರೂ. ಎಂದು ಆರ್‌ಬಿಐ ತಿಳಿಸಿದೆ.
ಬೆಲೆ ಮತ್ತು ಪಾವತಿ
ಭಾರತೀಯ ಚಿನ್ನ ಹಾಗೂ ಆಭರಣ ಸಂಘಟನೆ ಪ್ರಕಟಿಸುವ ದರ ಆಧರಿಸಿ ಬಾಂಡ್‌ಗಳ ಬೆಲೆ ನಿಗದಿಪಡಿಸಲಾಗುತ್ತದೆ. ಬಾಂಡ್ ಖರೀದಿಸುವ ಸಂದರ್ಭದಲ್ಲಿ ಮಾರುಕಟ್ಟೆಯ ಗ್ರಾಂ. ಚಿನ್ನದ ದರಕ್ಕಿಂತ ₹ 50 ಕಡಿಮೆ ನಿಗದಿ ಮಾಡಲಾಗುತ್ತದೆ.