ಹೈದರಾಬಾದ್: ಕಡಿಮೆ ಬೆಲೆಯ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತಿದ್ದೀರಾ? ನಿಮ್ಮ ಬಜೆಟ್ 10,000 ರೂ.ಗಿಂತ ಕಡಿಮೆಯಿದೆಯೇ? ಹಾಗಿದ್ರೆ 10,000 ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ.
- ಆಂಡ್ರಾಯ್ಡ್ ಗೋ-ಪ್ಯಾಕ್ಡ್ ಕೈಗೆಟುಕುವ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಂ 01 ಕೋರ್ ಬಜೆಟ್ ಪ್ರಿಯರ ಫೋನ್ ಆಗಿದೆ. ಗ್ಯಾಲಕ್ಸಿ ಎಂಒ 01 ಕೋರ್‌ನ ಆರಂಭಿಕ ಬೆಲೆ 5,499 ರೂ.
- ರಿಯಲ್ಮಿ ನಾರ್ಜೊ 20 ಸರಣಿಯ ಆರಂಭಿಕ ಬೆಲೆ 8,499 ರೂ. ಶುರುವಾಗುತ್ತದೆ.
- ವರ್ಚ್ಯುವಲ್ ಈವೆಂಟ್‌ನಲ್ಲಿ ರಿಯಲ್ಮಿ ನಾರ್ಜೊ 20, ನಾರ್ಜೊ 20 ಎ, ಮತ್ತು ನಾರ್ಜೊ 20 ಪ್ರೊ ಬಿಡುಗಡೆ ಮಾಡಲಾಯಿತು. realme.com and Flipkartನಲ್ಲಿ ರಿಯಲ್ಮಿ ನಾರ್ಜೊ 20 ಪ್ರೊ ಲಭ್ಯವಾಗುತ್ತವೆ.
- ರಿಯಲ್ಮಿ ಸಿ 12 ಸಿ 15, 6000 ಎಂಎಹೆಚ್ ಬ್ಯಾಟರಿ ಮತ್ತು ಸೂಪರ್ ಪವರ್ ಸೇವಿಂಗ್ ಮೋಡ್‌ನ ಸಂಯೋಜನೆ ಹೊಂದಿವೆ. ಕಡಿಮೆ ಬ್ಯಾಟರಿ ಸಂದರ್ಭಗಳಲ್ಲಿ ಈ ಸೂಪರ್ ಪವರ್ ಉಳಿತಾಯ ಮೋಡ್ ವಿಶೇಷವಾಗಿದೆ. ಇವುಗಳ ಬೆಲೆ 8,999 ರೂ.ಯಿಂದ ಶುರುವಾಗುತ್ತದೆ.
- ನೋಕಿಯಾ ಕೈಗೆಟುಕುವ ಬೆಲೆಗಳ ಎಚ್‌ಎಂಡಿ ಗ್ಲೋಬಲ್ ಹಬ್ಬದ ಋತುವಿಗೂ ಮುನ್ನ ಭಾರತದಲ್ಲಿ ನಾಲ್ಕು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿತು. ನೋಕಿಯಾ ಸಿ 3, ನೋಕಿಯಾ 5.3, ನೋಕಿಯಾ 125 ಮತ್ತು ನೋಕಿಯಾ 150. ಸಿ ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆ 7,499 ರೂ.ಯಿಂದ ಆರಂಭವಾಗಿ 5,499ರ ವರೆಗೂ ಮಾರುಕಟ್ಟೆಯಲ್ಲಿ ಲಭ್ಯ ಇವೆ.
- ಲಾವಾ ಝೂಮಿಂಟೊ ದಿ ನ್ಯೂ ವರ್ಲ್ಡ್ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಝೆಡ್66 ಕೆಲವು ವೈಶಿಷ್ಟ್ಯಗಳನ್ನು ಪರಿಚಯಿಸಿತು. ಝೆಡ್ ಸರಣಿಯಲ್ಲಿ ಇತ್ತೀಚಿನ ಸೇರ್ಪಡೆಯಾಗಿ ಎಲ್ಇಡಿ ಫ್ಲ್ಯಾಷ್, 3950 ಎಮ್ಎಹೆಚ್ ಬ್ಯಾಟರಿ, 3 ಜಿಬಿ ರ್ಯಾಮ್, 32 ಜಿಬಿ ಇಂಟರ್ನಲ್ ಮೆಮೊರಿ ಹೊಂದಿರುವ 13 ಎಂಪಿ 5 ಎಂಪಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನಂತಹ ಫೀಚರ್ ಒಳಗೊಂಡಿವೆ. ಇವುಗಳ ಆರಂಭಿಕ ದರ 7,777 ರೂ.ಯಷ್ಟಿದೆ.