ಮುಂಬೈ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶೀಯ ಕಂಪನಿಗಳು ಮತ್ತು ಹೊಸ ಉತ್ಪಾದನಾ ಸಂಸ್ಥೆಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ನಂತರ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ 2000 ಅಂಕಗಳ ಏರಿಕೆ ಕಂಡಿದ್ದು, 38,100.62 ಅಂಕಕ್ಕೆ ತಲುಪಿದೆ
ಇಂದೇ ಮುಂಬೈ ಷೇರುಪೇಟೆಯಲ್ಲಿ ಪಟಾಕಿ ಸಿಡಿತ...ದೀಪಾವಳಿ ಸಂಭ್ರಮ! ಸೆನ್ಸೆಕ್ಸ್ 2000 ಅಂಕ ಜಿಗಿತ - ಷೇರು ಪೇಟೆ
ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ನಂತರ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ 2000 ಅಂಕಗಳ ಏರಿಕೆ ಕಂಡಿದ್ದು, ಒಟ್ಟು 38,100.62 ಅಂಕಕ್ಕೆ ತಲುಪಿದೆ.
2019-20ರ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ನಿಬಂಧನೆಯನ್ನು ಸೇರಿಸಲಾಗಿದೆ. ಇದು ಯಾವುದೇ ದೇಶೀಯ ಕಂಪನಿಗೆ ಯಾವುದೇ ಪ್ರೋತ್ಸಾಹ ಅಥವಾ ವಿನಾಯಿತಿಗಳನ್ನು ಪಡೆಯುವುದಿಲ್ಲ ಎಂಬ ಷರತ್ತಿಗೆ ಒಳಪಟ್ಟು ಶೇ.22ರಷ್ಟು ದರದಲ್ಲಿ ಆದಾಯ ತೆರಿಗೆ ಪಾವತಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಪೊರೇಟ್ ತೆರಿಗೆ ದರ ಕಡಿತವು ಮಾರುಕಟ್ಟೆಗೆ ದೊಡ್ಡ ಧನಾತ್ಮಕ ಅಂಶವಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಸತತವಾಗಿ ಕುಸಿತದ ಹಾದಿ ಹಿಡಿದಿದ್ದ ಷೇರು ಪೇಟೆ ಈ ವಾರದ ಆರಂಭದಿಂದ ಸುಮಾರು ಸಾವಿರ ಅಂಕಗಳ ಕುಸಿತ ಕಂಡಿತ್ತು. ನಿನ್ನೆ 400ಕ್ಕೂ ಹೆಚ್ಚು ಅಂಕ ಕಳೆದುಕೊಂಡು ಹೂಡಿಕೆದಾರರು ಲಕ್ಷಾಂತರ ಕೋಟಿ ಹಣವನ್ನ ಕಳೆದುಕೊಂಡಿದ್ದರು. ಈಗ ಹಣಕಾಸು ಸಚಿವರ ಕಾರ್ಪೋರೇಟ್ ತೆರಿಹೆ ಕಡಿತ ಘೋಷಣೆ ಪೇಟೆಯಲ್ಲಿ ಹರ್ಷೋಲ್ಲಾಸವನ್ನೇ ಎಬ್ಬಿಸಿದೆ.