ಕರ್ನಾಟಕ

karnataka

ETV Bharat / business

ಹೂಡಿಕೆದಾರರಿಗೆ ಸಿಕ್ತು ದೀಪಾವಳಿ ಬಂಪರ್​... ಕೆಲ ದಿನಗಳ ಬಳಿಕ ಸೆನ್ಸೆಕ್ಸ್​ ಕುಣಿತ, ಸಂಪತ್ತು ವೃದ್ಧಿ - ನಿಫ್ಟಿ

ಮುಂಬೈ ಸೆನ್ಸೆಕ್ಸ್​ ಸೂಚ್ಯಂಕ 39,858 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, 600 ಅಂಶಗಳ ಏರಿಕೆ ದಾಖಲಿಸಿ ಶೇ 1ರಷ್ಟು ಏರಿಕೆ ಕಂಡಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಕೂಡ 11,767 ಅಂಶಗಳ ಮಟ್ಟದಲ್ಲಿ ವಹಿವಾಟು ಸಾಗುತ್ತಿದ್ದು, ಶೇ 1ರಷ್ಟು ಜಿಗಿತದೊಂದಿಗೆ 153 ಅಂಕಗಳ ನೆಗೆತ ದಾಖಲಿಸಿದೆ. ಇದು ಕಳೆದ ನಾಲ್ಕು ತಿಂಗಳ ಗರಿಷ್ಠ ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ

By

Published : Oct 29, 2019, 2:43 PM IST

ಮುಂಬೈ: ಮಂಗಳವಾರದ ಷೇರುಪೇಟೆ ವಹಿವಾಟಿನಲ್ಲಿ ಮುಂಬೈ ಸೆನ್ಸೆಕ್ಸ್​ ಮಧ್ಯಾಹ್ನದ ಬಳಿಕ ಮಹಾ ಜಿಗಿತ ದಾಖಲಿಸಿದೆ.

ಮುಂಬೈ ಸೆನ್ಸೆಕ್ಸ್​ ಸೂಚ್ಯಂಕ 39,858 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, 600 ಅಂಶಗಳ ಏರಿಕೆ ದಾಖಲಿಸಿ ಶೇ 1ರಷ್ಟು ಏರಿಕೆ ಕಂಡಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಕೂಡ 11,767 ಅಂಶಗಳ ಮಟ್ಟದಲ್ಲಿ ವಹಿವಾಟು ಸಾಗುತ್ತಿದ್ದು ಶೇ 1ರಷ್ಟು ಜಿಗಿತದೊಂದಿಗೆ 153 ಅಂಕಗಳ ನೆಗೆತ ದಾಖಲಿಸಿದೆ. ದಿನದ ಆರಂಭದಲ್ಲೇ ಇಷ್ಟೊಂದು ಏರಿಕೆ ಕಂಡಿರುವುದು ಕಳೆದ ನಾಲ್ಕು ತಿಂಗಳ ಗರಿಷ್ಠ ಏರಿಕೆಯಾಗಿದೆ.

ಬಹುತೇಕ ಎಲ್ಲ ವಲಯದ ಷೇರುಗಳು ಗ್ರೀನ್​ ಲೈನ್​ನಲ್ಲಿ ಸಾಗುತ್ತಿದ್ದು, ಉಕ್ಕು ಮತ್ತು ಆಟೋ ವಲಯದ ಷೇರುಗಳ ಮೌಲ್ಯದಲ್ಲಿ ಶೇ 4ರಷ್ಟು ಏರಿಕೆ ಕಂಡಿದೆ. ಖಾಸಗಿ ಕ್ಷೇತ್ರದ ಬ್ಯಾಂಕ್​ಗಳು ಶೇ 1ರಷ್ಟು ಏರಿಕೆ ಕಂಡಿವೆ. ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ಸುಮಾರು 17 ಕಂಪನಿಗಳು ತಮ್ಮ ಲಾಭ - ನಷ್ಟದ ವರದಿಯನ್ನು ಇಂದು ಪ್ರಕಟಿಸಲಿವೆ. ಹೀಗಾಗಿ, ಪೇಟೆಯಲ್ಲಿ ಹೂಡಿಕೆದಾರರ ಖರೀದಿ ಭರಾಟೆ ಜೋರಾಗಿದೆ.

ABOUT THE AUTHOR

...view details