ಕರ್ನಾಟಕ

karnataka

ETV Bharat / business

ವಿಲಕ್ಷಣ ಫ್ರೈಡೇ: ಕೊರೊನಾ 2ನೇ ಅಲೆಗೆ ಬೆದರಿದ ಗೂಳಿ! ಸೆನ್ಸೆಕ್ಸ್ 983 ಅಂಕ ಕುಸಿತ - ಷೇರು ಮಾರುಕಟ್ಟೆ ಕ್ಲೋಸಿಂಗ್ ಬೆಲ್

ಔಷಧ ವಲಯ ಹೊರತುಪಡಿಸಿ ಎಲ್ಲದರಲ್ಲೂ ಭಾರಿ ಪ್ರಮಾಣದ ಮಾರಾಟದ ಒತ್ತಡ ಕಂಡುಬಂದಿದ್ದು, ಷೇರು ಸೂಚ್ಯಂಕಗಳು ಇಂದು ಶೇ 2ರಷ್ಟು ಕುಸಿದಿವೆ. ನಿಫ್ಟಿ ಬ್ಯಾಂಕ್ ಮತ್ತು ಫೈನಾನ್ಷಿಯಲ್ ಸರ್ವೀಸಸ್ ಸೂಚ್ಯಂಕಗಳು ತಲಾ ಶೇ 3ರಷ್ಟು ಕುಸಿದಿದ್ದರೆ, ನಿಫ್ಟಿ ಎಫ್‌ಎಂಸಿಜಿ, ಆಟೋ, ಐಟಿ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇ 1.5ರಷ್ಟು ತಗ್ಗಿದವು. ನಿಫ್ಟಿ ಫಾರ್ಮಾ ಸೂಚ್ಯಂಕವು ಪ್ರವೃತ್ತಿ ಹೆಚ್ಚಿಸಿ ಶೇ 1ರಷ್ಟು ಏರಿಕೆ ದಾಖಲಿಸಿದೆ.

Sensex
Sensex

By

Published : Apr 30, 2021, 4:09 PM IST

ಮುಂಬೈ: ಏಷ್ಯಾದ ಮಾರುಕಟ್ಟೆಗಳ ದೌರ್ಬಲ್ಯ ಮತ್ತು ಕೋವಿಡ್ -19 ಪ್ರಕರಣಗಳ ಅಡೆತಡೆಯಿಲ್ಲದ ಏರಿಕೆಯೊಂದಿಗೆ ಶುಕ್ರವಾರದ ವಾರಾಂತ್ಯದ ಪೇಟೆಯಲ್ಲಿ ಕರಡಿ ಘರ್ಜಿನೆಗೆ ದಲಾಲ್ ಸ್ಟ್ರೀಟ್ ಹೂಡಿಕೆದಾರರು ಲಕ್ಷಾಂತರ ಕೋಟಿ ಸಂಪತ್ತು ಕಳೆದುಕೊಂಡಿದ್ದಾರೆ.

ಈ ವಾರ ಬೆಂಚ್‌ಮಾರ್ಕ್ ಸೂಚ್ಯಂಕಗಳಲ್ಲಿ ಶೇ 4ರಷ್ಟು ಹೆಚ್ಚಳದ ನಾಲ್ಕು ನೇರ ಲಾಭಗಳ ನಂತರ ಲಾಭಾಂಶದ ಬುಕಿಂಗ್ ಮಾರಾಟದ ಒತ್ತಡ, ಕೋವಿಡ್ ಸೋಂಕು ಏರಿಕೆ ಹಾಗೂ ಏಷ್ಯಾದ ಮಾರುಕಟ್ಟೆಗಳಲ್ಲಿ ದೌರ್ಬಲ್ಯದಿಂದ ಗೂಳಿಯ ಓಟಕ್ಕೆ ಬ್ರೇಕ್ ಬಿದ್ದಿದೆ.

ಔಷಧ ವಲಯ ಹೊರತುಪಡಿಸಿ ಎಲ್ಲದರಲ್ಲೂ ಭಾರಿ ಪ್ರಮಾಣದ ಮಾರಾಟದ ಒತ್ತಡ ಕಂಡುಬಂದಿದ್ದು, ಷೇರು ಸೂಚ್ಯಂಕಗಳು ಇಂದು ಶೇ 2ರಷ್ಟು ಕುಸಿದಿವೆ. ನಿಫ್ಟಿ ಬ್ಯಾಂಕ್ ಮತ್ತು ಫೈನಾನ್ಷಿಯಲ್ ಸರ್ವೀಸಸ್ ಸೂಚ್ಯಂಕಗಳು ತಲಾ ಶೇ 3ರಷ್ಟು ಕುಸಿದಿದ್ದರೆ, ನಿಫ್ಟಿ ಎಫ್‌ಎಂಸಿಜಿ, ಆಟೋ, ಐಟಿ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇ 1.5ರಷ್ಟು ತಗ್ಗಿದವು. ನಿಫ್ಟಿ ಫಾರ್ಮಾ ಸೂಚ್ಯಂಕವು ಪ್ರವೃತ್ತಿ ಹೆಚ್ಚಿಸಿ ಶೇ 1ರಷ್ಟು ಏರಿಕೆ ದಾಖಲಿಸಿದೆ.

ಎಚ್‌ಡಿಎಫ್‌ಸಿ ಶೇ 4.2ರಷ್ಟು, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 4, ಐಸಿಐಸಿಐ ಬ್ಯಾಂಕ್, ಕೊಟಾಕ್ ಮಹೀಂದ್ರಾ ಬ್ಯಾಂಕ್, ಏಷ್ಯನ್ ಪೇಂಟ್ಸ್, ಎಂಎಂ, ಟಿಸಿಎಸ್, ಟಾಟಾ ಮೋಟಾರ್ಸ್ ಮತ್ತು ಅದಾನಿ ಪೋರ್ಟ್​ ದಿನದ ಟಾಪ್​ ಲೂಸರ್​ಗಳಾದರು. ಒಎನ್‌ಜಿಸಿ ಶೇ 4ರಷ್ಟು, ಕೋಲ್ ಇಂಡಿಯಾ, ಡಿವೀಸ್ ಲ್ಯಾಬ್ಸ್, ಗ್ರಾಸಿಮ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶಷನ್‌ನಲ್ಲಿನ ಟಾಪ್​ ಗೇನರ್​ಗಳಾದರು.

ಬಿಎಸ್‌ಇಯಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 30 ಘಟಕಗಳಲ್ಲಿ 25 ಯೂನಿಟ್​ಗಳಿ ನಷ್ಟ ಅನುಭವಿಸಿದವು. ದಿನದ ಅಂತ್ಯದ ವೇಳೆಗೆ ಮುಂಬೈ ಸೂಚ್ಯಂಕ 983.5 ಅಂಕ ಕುಸಿತ ಕಂಡು 48782.36 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 263.80 ಅಂಕ ಇಳಿಕೆಯಾಗಿ 14,631.10 ಅಂಕಗಳಲ್ಲಿ ಕೊನೆಗೊಂಡಿತು.

ABOUT THE AUTHOR

...view details