ಕರ್ನಾಟಕ

karnataka

By

Published : Mar 26, 2020, 5:06 PM IST

ETV Bharat / business

ಕೊರೊನಾ ಪ್ಯಾಕೇಜ್​ಗೆ ಮೈಕೊಡವಿ ನಿಂತ ಗೂಳಿ... ಸೆನ್ಸೆಕ್ಸ್​ ಭರ್ಜರಿ ಏರಿಕೆ

ಇಕ್ವಿಟಿ ಬೆಂಚ್​ಮಾರ್ಕ್​ ತನ್ನ ವಹಿವಾಟಿನ ಮೂರನೇ ಅವಧಿಯಲ್ಲಿ ವೇಗವಾಗಿ ಚೇತರಿಸಿಕೊಂಡಿತು. 30 ಷೇರುಗಳ ಬಿಎಸ್​ಇ ಬೆಂಚ್​ಮಾರ್ಕ್​ ದಿನದ ಅಂತ್ಯದ ವೇಳೆಗೆ 1,410.99 ಅಂಗಳಷ್ಟು ಅಥವಾ ಶೇ 4.94ರಷ್ಟು ಏರಿಕೆಯಾಗಿ 29,946.77ರ ಮಟ್ಟದಲ್ಲಿ ಮುಕ್ತಾಯವಾಗಿದೆ. ಮಧ್ಯಾಂತರ ವಹಿವಾಟಿನಲ್ಲಿ ಗರಿಷ್ಠ 1,564 ಅಂಶಗಳ ಮಟ್ಟಕ್ಕೆ ತಲುಪಿತು.

Sensex
ಸೆನ್ಸೆಕ್ಸ್​

ಮುಂಬೈ: ದೇಶಾದ್ಯಂತ ಕೊರೊನಾ ವೈರಸ್​ನಿಂದಾಗಿ ಲಾಕ್​ಡೌನ್ ಹೇರಲಾಗಿದ್ದು, ಆರ್ಥಿಕ ಉತ್ತೇಜನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 1.70 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸುತ್ತಿದ್ದಂತೆ ಮುಂಬೈ ಸೆನ್ಸೆಕ್ಸ್ ಏರಿಕೆ ದಾಖಲಿಸಿದೆ.

ಇಕ್ವಿಟಿ ಬೆಂಚ್​ಮಾರ್ಕ್​ ತನ್ನ ವಹಿವಾಟಿನ ಮೂರನೇ ಅವಧಿಯಲ್ಲಿ ವೇಗವಾಗಿ ಚೇತರಿಸಿಕೊಂಡಿತು. 30 ಷೇರುಗಳ ಬಿಎಸ್​ಇ ಬೆಂಚ್​ಮಾರ್ಕ್​ ದಿನದ ಅಂತ್ಯದ ವೇಳೆಗೆ 1,410.99 ಅಂಗಳಷ್ಟು ಅಥವಾ ಶೇ 4.94ರಷ್ಟು ಏರಿಕೆಯಾಗಿ 29,946.77ರ ಮಟ್ಟದಲ್ಲಿ ಮುಕ್ತಾಯವಾಗಿದೆ. ಮಧ್ಯಾಂತರ ವಹಿವಾಟಿನಲ್ಲಿ ಗರಿಷ್ಠ 1,564 ಅಂಶಗಳ ಮಟ್ಟಕ್ಕೆ ತಲುಪಿತು.

ಹಾಗೆಯೇ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 323.60 ಅಂಶಗಳಷ್ಟು ಹೆಚ್ಚಳವಾಗಿ 8,641 ಅಂಶಗಳ ಮಟ್ಟದಲ್ಲಿ ಕೊನೆಗೊಂಡಿತು. ಸೆನ್ಸೆಕ್ಸ್​ನಲ್ಲಿ ಇಂಡಸ್​ಲ್ಯಾಂಡ್ ಬ್ಯಾಂಕ್​ ಷೇರು ಮೌಲ್ಯ ಶೇ 46ರಷ್ಟು ಏರಿಕೆಯಾಗುವ ಮೂಲಕ ಗರಿಷ್ಠ ಲಾಭದ ಹೆಗ್ಗಳಿಕೆ ಪಡೆಯಿತು.

ಭಾರ್ತಿ ಏರ್​ಟೆಲ್, ಎಲ್​ಆ್ಯಂಡ್​ಟಿ, ಬಜಾಜ್ ಫೈನಾನ್ಸ್, ಕೋಟ್ಯಾಕ್ ಮಹೀಂದ್ರಾ, ಬಜಾಜ್ ಆಟೋ, ಎಚ್​ಯುಎಲ್​ ಮತ್ತು ಎಚ್​ಡಿಎಫ್​​ಸಿ ಗರಿಷ್ಠ ಗೇನರ್​ಗಳ ಸಾಲಿಗೆ ಸೇರಿದರು. ಮಾರುತಿ ಸುಜ್ಯುಕಿ, ಟೆಕ್ ಮಹೀಂದ್ರಾ, ಸನ್ ಫಾರ್ಮಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯದಲ್ಲಿ ಇಳಿಕೆ ಕಂಡುಬಂದವು.

ABOUT THE AUTHOR

...view details